Uncategorized

ರಕ್ತ ನೀಡಿ ,ಜೀವದಾನ ಮಾಡಿ.

ರಕ್ತ ದಾನ ಶ್ರೇಷ್ಠ ದಾನ. ಜೀವನ್ಮರಣದ ಸಂಧರ್ಭದಲ್ಲಿ
ಜೀವಾಮೃತವಿದ್ದಂತೆ. ಆರೋಗ್ಯವಂತ ವ್ಯಕ್ತಿ ೧೮ ರಿಂದ
೬೦ ವಯಸ್ಸಿನೊಳಗಿನವರು ನಿಯಮಿತ ಅವಧಿಯಲ್ಲಿ
ರಕ್ತದಾನ ಮಾಡಬಹುದು. ರಕ್ತದಾನ ಮಾಡಿದ ವ್ಯಕ್ತಿಯ
ದೇಹದಲ್ಲಿ ಪುನಃ ರಕ್ತ ಉತ್ಪಾದನೆಯಾಗುತ್ತದೆ. ರಕ್ತ ಕೃತಕವಾಗಿ
ಸೃಷ್ಟಿಸಲಾಗದ ವಸ್ತು.
ದೇಹದ ಪ್ರತಿಯೊಂದು ಕ್ರಿಯೆಗೂ ರಕ್ತವೇ ಮೂಲಧಾತು. ರಕ್ತ
ಪ್ಲಾಸ್ಮಾ ಮತ್ತು Hemoglobin ಅಂಶವನ್ನು ಒಳಗೊಂಡಿದೆ.
ದೈಹಿಕ ಚಟುವಟಿಕೆಗಳಿಗೆ ಸಂಜೀವಿನಿಯಾಗಿ ಕಾರ್ಯ
ನಿರ್ವಹಿಸುವ Hemoglobin -ಕೆಂಪು , ಬಿಳಿ ಹಾಗೂ ಚಪ್ಪಟೆ
ಆಕಾರ ಹೊಂದಿದ ೩ ವಿಧದ ಕಣಗಳನ್ನು ಒಳಗೊಂಡಿದೆ.
ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕವನ್ನು ಪೂರೈಸಿ
carbon dioxide ನ್ನು ಹೊರಹಾಕುವ ಕಾರ್ಯ ನಿರ್ವಹಿಸುತ್ತದೆ.
ರಕ್ತದಲ್ಲಿ ನೀರಿನ ದ್ರವದಂತಿರುವ plasma ದೇಹಕ್ಕೆ ಕಬ್ಬಿಣಾ೦ಶ
ಗಳನ್ನು ಒದಗಿಸುವ ಕಾರ್ಯ ನಿಭಾಯಿಸುತ್ತದೆ.
ದೇಹದ ಕಾರ್ಯ ಮತ್ತು ಶ್ರಮವನ್ನವಲಂಬಿಸಿ, ಅಗತ್ಯಕ್ಕೆ ತಕ್ಕಂತೆ
ರಕ್ತವನ್ನು ಅಸ್ಥಿಮಜ್ಜೆಉತ್ಪಾದಿಸಿ ದೇಹಕ್ಕೆ ಒದಗಿಸುತ್ತದೆ.
ರಕ್ತದ ಆವಶ್ಯಕತೆ –ಶಸ್ತ್ರ ಕ್ರಿಯೆ, ಅಪಘಾತ ಸಂದರ್ಭ ಮತ್ತು
ರಕ್ತ ಸಂಬಂಧಿ ಕಾಯಿಲೆಗಳಿಗೆ ತುತ್ತಾದಾಗ.
ರಕ್ತ ಸಂಬಂಧಿ ಕಾಯಿಲೆಗಳು –Thalassemia ,anemia ,leukemia
ಮತ್ತು hemophilia ಇತ್ಯಾದಿ.
ರಕ್ತದ ಕಣಗಳು ಅಲ್ಪಾವಧಿಯಲ್ಲಿಯೇ ಸಾವನ್ನಪ್ಪುವುದು,
ವಿಕಾರ ಮತ್ತು ಕುಂಠಿತಗೊಂಡ ರಕ್ತಗಳ ಉತ್ಪತ್ತಿ ಇತ್ಯಾದಿ ಅಸಮರ್ಪಕ
ರಕ್ತದ ಕಣಗಳ ಸಮಸ್ಯೆಯಿಂದ ರಕ್ತ ಸಂಬಂಧಿ ರೋಗಿಗಳು ಪರರ
ರಕ್ತದ ಮೇಲೆ ಅವಲಂಬಿತರಾಗುವುದು ಅನಿವಾರ್ಯವಾಗಿದೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s