Uncategorized

ಧನ್ವಂತರಿ.

೧. ಮೆಂತ್ಯದ ಕಾಳುಗಳನ್ನು ಪ್ರತಿದಿನದ ಆಹಾರದ ಜೊತೆಯಲ್ಲಿ
ಸೇವಿಸಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ.
೨. ಸಾಸಿವೆಯನ್ನು ಅರೆದು ಊತದ ಮೇಲೆ ಲೇಪಿಸಿದರೆ ಬಾವು
ಕಡಿಮೆಯಾಗುತ್ತದೆ.
೩. ಪದೇ ಪದೇ ಮರುಕಳಿಸುವ sinus ತೊಂದರೆಗೆ ಮಾವಿನ ಹಣ್ಣಿನ
ಸೇವನೆ ಅತ್ಯಂತ ಪರಿಣಾಮಕಾರಿಯಾಗಿದೆ.
೪. ಮಕ್ಕಳಿಗೆ ಗಂಟಲಲ್ಲಿ ಊತವಿದ್ದರೆ ಬೆಳ್ಳುಳ್ಳಿ ಹೋಳುಗಳನ್ನು
ಚೀಪಲು ಕೊಡಬೇಕು.
೫. ನೆಲ್ಲಿಕಾಯಿ ಹಾಕಿ ಕುದಿಸಿದ ನೀರಿನಲ್ಲಿ ಕೂದಲನ್ನು ತೊಳೆದರೆ
ಉದ್ದ ಮತ್ತು ಹೊಳಪಾಗುತ್ತದೆ.
೬. ಕಾಳುಮೆಣಸಿನ ಹುಡಿಯನ್ನು ಜೇನಿನಲ್ಲಿ ಬೆರೆಸಿ ಸೇವಿಸುವುದರಿಂದ
ಕೆಮ್ಮು ಹಾಗೂ ಎದೆನೋವು ಗುಣವಾಗುತ್ತದೆ.
೭. ಉಗುರುಗಳಲ್ಲಿ ಬಿಳಿಗೆರೆ ನಿವಾರಿಸಲು protein ಯುಕ್ತ ಆಹಾರ
ಸೇವಿಸಿ.
೮. ಕರಬೂಜ ಹಣ್ಣಿನ ನಿಯಮಿತ ಸೇವನೆಯಿಂದ ದೇಹದ ತೂಕವನ್ನು
ಕಡಿಮೆ ಮಾಡಿಕೊಳ್ಳಬಹುದು.
೯. Alzheimer ಹಾಗೂ Parkinson ಕಾಯಿಲೆಗಳನ್ನು Laser Therapy
ಮೂಲಕ ಗುಣಪಡಿಸಬಹುದು.
೧೦. ದಾಳಿಂಬೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ
ಮೂಳೆ ಮತ್ತು ಸ್ನಾಯುಗಳು ಸದೃಢಗೊಳ್ಳುತ್ತವೆ.
೧೧. ದಿನಾಲು ಹಸಿ carrot ನ್ನು ತಿಂದರೆ ಕಣ್ಣಿನ ಸುತ್ತಲಿನ ಕಪ್ಪು
ಕಲೆಯಿಂದ ಮುಕ್ತಿ.
೧೨. ಆಲೂಗಡ್ಡೆಯನ್ನು ರುಬ್ಬಿ paste ಮಾಡಿ ಹಚ್ಚಿದರೆ Dark
circle ಮಾಯ.
೧೩. ಚಳಿಗಾಲದಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ
ಉಪಯೋಗಿಸುವುದರಿಂದ ದೇಹದ ಉಷ್ಣತೆಯನ್ನು ಕಾಪಾಡಿ
ಕೊಳ್ಳಬಹುದು. ಅಲ್ಲದೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
೧೪. ಹರಿವೆ ಸೊಪ್ಪಿನ ನಿಯಮಿತ ಸೇವನೆಯಿಂದ ಮಲಬದ್ಧತೆಯ
ಸಮಸ್ಯೆಯನ್ನು ದೂರ ಮಾಡಬಹುದು.
೧೫. Vitamin ”A ” ಕೊರತೆಯಿಂದಾಗುವ ನೇತ್ರದೋಷಕ್ಕೆ ನುಗ್ಗೆಯ
ಸೇವನೆ ಪರಿಣಾಮಕಾರಿ.
೧೬. ಅಡಕೆಗೆ ಹಲ್ಲು ಹಾಳಾಗುವುದನ್ನು ತಡೆಗಟ್ಟುವ ಮತ್ತು ಒಸಡನ್ನು
ದೃಢ ಗೊಳಿಸುವ ಸಾಮರ್ಥ್ಯವಿದೆ.
೧೭. ಏಲಕ್ಕಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವುದಲ್ಲದೆ
ಜೀರ್ಣಶಕ್ತಿ ಪ್ರಕ್ರಿಯೆಗೆ ಪೂರಕವಾಗಿದೆ.
೧೮. ಕಲ್ಲಂಗಡಿ ಹಣ್ಣಿನ ನಿಯಮಿತ ಸೇವನೆಯಿಂದ ಹೃದಯ ಸಂಬಂಧಿ
ಕಾಯಿಲೆಗಳನ್ನು ತಡೆಯ ಬಹುದು.
೧೯. ಮಾವಿನ ಹಣ್ಣು ಅಧಿಕ ಪ್ರಮಾಣದಲ್ಲಿ ಕಬ್ಬಿಣದ ಸತ್ತ್ವ ಹೊಂದಿದ್ದು
ಇದರ ಸೇವನೆಯಿಂದ ರಕ್ತ ಹೀನತೆಯ ತೊಂದರೆ ನಿವಾರಣೆಯಾಗುತ್ತದೆ.
೨೦. ದಾಳಿಂಬೆ juice ನ ನಿಯಮಿತ ಸೇವನೆಯಿಂದ ಕಿಡ್ನಿಯಲ್ಲಿ
ಕಲ್ಲು ಬೆಳೆಯುವುದನ್ನು ತಡೆಯಬಹುದು.
ಮೂಲ:ಸಂಗ್ರಹ.

2 thoughts on “ಧನ್ವಂತರಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s