Uncategorized

ಪ್ರಾಣಿ ಪ್ರಪಂಚ.

೧.ಉಭಯವಾಸಿ ಕಪ್ಪೆ ಸಂತತಿ ರಭಸವಾಗಿ ಕ್ಷೀಣಿಸಲು
ಕಾರಣ ಭೂಮಿಯನ್ನುತಲುಪುತ್ತಿರುವ ಅಧಿಕಾಧಿಕ
ಅತಿನೇರಳೆ ವಿಕಿರಣ.
೨. ಕಟ್ಟಿರುವೆ, ಗೆದ್ದಲು, ಜೇನುನೊಣ ಸಾಮೂಹಿಕ
ಗೂಡನ್ನು ಹೊಂದಿರುವ ಸಂಘ ಜೀವಿಗಳು.
೩. ಗೂಬೆ –ರೈತಮಿತ್ರ ; ಅಪಶಕುನದ ಹಕ್ಕಿ.
೪. ಪ್ರಾಣಿಗಳ ಕೊಂಬು ಕೆರಟಿನ್ ನಿಂದ ರೂಪುಗೊಂಡಿದೆ.
೫. ಜಿರಾಫೆ ,ಘೇ೦ಡಾ ಮೃಗ ದೈತ್ಯ ದೇಹಿಗಳಾಗಿದ್ದರೂ
ಸಸ್ಯಾಹಾರಿಗಳು.
೬. Mudskipper -ವಿಶಿಷ್ಟ ಮತ್ಸ್ಯ. ಉಭಯವಾಸಿಗಳ
ತನ್ಮೂಲಕ ನೆಲವಾಸಿ ಪ್ರಾಣಿಗಳ ಅವತರಣಕ್ಕೆ ನಾಂದಿ
ಹಾಡಿದ ಮತ್ಸ್ಯ.
೭. ಕಡಿಮೆ ಮತ್ತು ಅತ್ಯಧಿಕ ಕಂಪನಗಳನ್ನು ದನಗಳು
ಮನುಷ್ಯರಿಗಿಂತ ಚೆನ್ನಾಗಿ ಗ್ರಹಿಸಿಕೊಳ್ಳಬಲ್ಲವು.
೮. ಮೊಲದ ಹಾಗೆ ಕಾಂಗರೂ ತನ್ನ ಮುಂದಿರುವ
ವಸ್ತುಗಳನ್ನು ನೋಡಲಾರದು. ಆದರೆ ಅದರ ವಾಸನಾ
ಶಕ್ತಿ ಹಾಗೂ ಶ್ರವಣ ಶಕ್ತಿ ಬಹಳ ಪ್ರಬಲ.
೯. ಜಿರಾಫೆ ತನ್ನ ಜೀವಿತದ ಬಹು ಭಾಗವನ್ನು ನಿಂತುಕೊಂಡೇ
ಕಳೆಯುತ್ತದೆ. ಇದು ಮಲಗುವುದು, ಮರಿಗೆ ಜನ್ಮ ನೀಡುವುದು
ಕೂಡ ನಿಂತುಕೊಂಡೇ. ಮೈ ಬಣ್ಣದಿಂದ ಜಿರಾಫೆಯ ವಯಸ್ಸನ್ನು
ನಿರ್ಧರಿಸಬಹುದು. ವಯಸ್ಸು ಜಾಸ್ತಿಯಾದಷ್ಟೂ ಕಂದು
ಬಣ್ಣ ಗಾಢವಾಗುತ್ತ ಹೋಗುತ್ತದೆ. ನಮ್ಮ ಬೆರಳಚ್ಚಿನಂತೆ
ಇವುಗಳ ಮೈ ಮೇಲಿನ ಪಟ್ಟೆ, ಪ್ರತಿ ಜಿರಾಫೆಗೂ ಬೇರೆ ಬೇರೆ
ಯಾಗಿರುತ್ತದೆ.ಗಂಡು ಜಿರಾಫೆ ೧೬ ರಿಂದ ೧೯ ಅಡಿ ಎತ್ತರ
ವಿದ್ದರೆ ಹೆಣ್ಣು ೧೩ ರಿಂದ ೧೬ ಅಡಿ ಬೆಳೆಯುತ್ತದೆ. ಗಂಡು
೧,೨೦೦K.G ಭಾರವಿದ್ದರೆ ಹೆಣ್ಣು ಸಾವಿರ ಕೆ.ಜಿ. ತೂಗುತ್ತದೆ.
ತಾಸಿಗೆ ೬೦ ಕಿಲೋಮೀಟರ್ ವೇಗದಲ್ಲಿ ಕ್ರಮಿಸ ಬಲ್ಲುದು.
೪೬೦ದಿನಗಳ ಸುದೀರ್ಘ ಗರ್ಭಾವಸ್ಥೆಯ ನಂತರ ಹೆಣ್ಣು
ಜಿರಾಫೆ ಮರಿಗೆ ಜನ್ಮ ನೀಡುತ್ತದೆ. ಇವುಗಳಿಗೆ ವಾಸನೆಯನ್ನು
ಗ್ರಹಿಸುವ ಶಕ್ತಿಯು ಜೋರಾಗಿಯೇ ಇರುವುದರಿಂದ
ಶತ್ರುಗಳಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತದೆ.
೧೦Giant Weta ಕೀಟಗಳಲ್ಲೇ ಅತೀ ದೊಡ್ಡ ಮತ್ತು ಭಾರದ
ಕೀಟ. ಕಂದು ಬಣ್ಣದ ದೊಡ್ಡ ದೇಹ, ಉದ್ದನೆಯ ಆಂಟೆನಾ ,
ದಪ್ಪ ಚಿಪ್ಪನ್ನು ಹೋಲುವ ಹೊರಚರ್ಮ, ಹಿಂಭಾಗದಲ್ಲಿ
ಚೂಪಾದ ಮುಳ್ಳಿನಂತಹ ಅಂಗಗಳಿರುವ ಈ ಕೀಟಕ್ಕೆ ರೆಕ್ಕೆಗಳಿಲ್ಲ.
ಭಾರ ೭೦ ರಿಂದ ೧೦೦ಗ್ರಾಂ ತೂಗುವ ಸಸ್ಯಾಹಾರಿ ಕೀಟ.
ಅಳಿವಿನಂಚಿಗೆ ತಲುಪಿರುವ ಈ ಕೀಟಗಳನ್ನು ಅಲ್ಲಿಯ
(Newzealand )ಸರ್ಕಾರ ಸಂರಕ್ಷಿಸುತ್ತಿದೆ. ಈ ಕೀಟ
Newzealand ದ್ವೀಪದಲ್ಲಿ ವಾಸಿಸುತ್ತವೆ.
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s