Uncategorized

ಚಿಂತನ.

೧. ಭಾಷೆಯ ಬಳಕೆಯಲ್ಲಿ ೩ ವಿಧ –ಪತ್ರಿಕೆಯ ಭಾಷೆ,
ರಾಜಕೀಯ ಭಾಷೆ ಮತ್ತು ಕಲೆಯ ಭಾಷೆ.
”ಪತ್ರಿಕಾ ಭಾಷೆ”ಯಲ್ಲಿ ಶಬ್ದಕ್ಕಷ್ಟೇ ಅರ್ಥ. ಬಳಕೆಯಲ್ಲಿ
ಜಾಗ್ರತೆ, ಜಾವಾಬ್ದಾರಿ ಅಗತ್ಯ.
”ರಾಜಕೀಯ ಭಾಷೆ”ಗೆ ಅರ್ಥವೇ ಇಲ್ಲ. ಹೇಗೆ ಬೇಕಾದರೂ
ಬಳಸಬಹುದು ಹಾಗೂ ಅರ್ಥ ಮಾಡಿಕೊಳ್ಳಬಹುದು.
ಯಾವ ಶಬ್ದವೂ ಯಾವ ಅರ್ಥವನ್ನೂ ಕೊಡುವುದಿಲ್ಲ.
ಇಲ್ಲಿ ಭಾಷೆಯ ಬಳಕೆ ಸುಲಭ ಹಾಗೂ ಹೆಚ್ಚು ಸ್ವಾತಂತ್ರ್ಯ
ಇರುತ್ತದೆ.
”ಕಲೆಯ ಭಾಷೆ ” ಹೆಚ್ಚು ಸಾಂದ್ರ ಹಾಗೂ ಜಟಿಲ. ಇಲ್ಲಿ
ಭಾಷೆ ಪ್ರತಿಭೆಯೊಂದಿಗೆ ವ್ಯವಹರಿಸುವುದರಿಂದ ಅರ್ಥ
ಬೇರೆ ಬೇರೆಯಾಗಿರುತ್ತದೆ.
೨. ಶಾಂತಿ ಮಂತ್ರಕ್ಕೆ ಶಕ್ತಿ ಬರುವುದು ಶಸ್ತ್ರಾಸ್ತ್ರಗಳ ಬೆಂಬಲ
ವಿದ್ದಾಗ ಮಾತ್ರ. ನಮ್ಮ ದೇಶದ ಯಾವ ದೇವತೆಗಳಿಗೆ
ಆಯುಧಗಳಿಲ್ಲ?ಮೃದು ಕಮಲವೂ ಅವರಿಗೆ ಆಯುಧವೇ.
ನೆರೆ ದೇಶದವರು ನಮ್ಮ ಮೇಲೆ ಯುದ್ಧ ಸಾರಿದಾಗ ನಾವು
ಪಾರಿವಾಳಗಳನ್ನು ಹಾರಿಬಿಡಬೇಕೆ?
೩.ಉಪ್ಪು ಜಾಸ್ತಿ ತಿಂದರೆ –ರಕ್ತದೊತ್ತಡ .
ಸಕ್ಕರೆ ಜಾಸ್ತಿ ತಿಂದರೆ –ಸಕ್ಕರೆ ಕಾಯಿಲೆ ಒತ್ತಡ.
ಲಂಚ ಜಾಸ್ತಿ ತಿಂದರೆ –ಲೋಕಾಯುಕ್ತರ ಒತ್ತಡ.
೪.ಸಾಧನೆಗೆ ಆತ್ಮ ಬಲ, ದೇಹ ಬಲ ಇದ್ದರೆ ಸಾಕು. ಗ್ರಹಬಲ,
ತಾರಾ ಬಲ ಹಾಗೂ ಇನ್ನಿತರ ಬಲದ ಅಗತ್ಯ ಇಲ್ಲ.
೫. ಪ್ರಶ್ನೋತ್ತರ :(ಅಕ್ಬರ –ಬೀರಬಲರ ನಡುವೆ ಸಂವಾದ. )
ಪ್ರ :೧. ಎಲೆಗಳು ಯಾವಾಗ ಕೆಡುತ್ತವೆ ?(ತಿರುವಿ ಹಾಕದಿದ್ದರೆ)
೨. ಕುದುರೆಯು ಯಾಕೆ ಕೆಡುತ್ತದೆ ?(ಅಡ್ಡಾಡಿಸದಿದ್ದರೆ )
೩. ಭೂಮಿಯಲ್ಲಿ ಬಿತ್ತಿದ ಬೀಜಗಳು ಯಾಕೆ ಕೆಡುತ್ತವೆ ?
(ಮಣ್ಣು ತಿರುವಿ ಹಾಕದಿದ್ದರೆ )
೪. ಕಲಿತ ವಿದ್ಯೆ ಯಾವಾಗ ಮರೆತು ಹೋಗುತ್ತದೆ ?
(ಕಲಿತದ್ದನ್ನು ತಿರುವಿ ಹಾಕದಿದ್ದರೆ )
ಉ:ತಿರುಗಾಟ ಇಲ್ಲದಿದ್ದರೆ.
೫. ರಾಜಕೀಯ:ಹರಿವ ನೀರಿನಲ್ಲಿ ತೇಲುತ್ತಿರುವ ಮರದ
ದಿಮ್ಮಿಯೊಂದರಲ್ಲಿ ನಾಲ್ಕು ಕಪ್ಪೆಗಳು ವಾದಿಸುತ್ತಿದ್ದವು.
ಮೊದಲನೇ ಕಪ್ಪೆ :ಕಿನಾರೆಯಲ್ಲಿರುವ ಮರಗಳೆಲ್ಲ ಹಿಂದು
ಹಿಂದಕ್ಕೆ ಚಲಿಸುತ್ತಿವೆ.
ಎರಡನೇ ಕಪ್ಪೆ :ಮರಗಳು ಚಲಿಸುತ್ತಿಲ್ಲ, ನಾವೇ ಮುಂದೆ
ಚಲಿಸುತ್ತಿದ್ದೇವೆ.
ಮೂರನೇ ಕಪ್ಪೆ:ನಾವು ಮುಂದಕ್ಕೆ ಚಲಿಸುತ್ತಿಲ್ಲ. ಮರಗಳು
ಹಿಂದಕ್ಕೆ ಚಲಿಸುತ್ತಲೂ ಇಲ್ಲ. ನಾವು ಕುಳಿತ ಮರದ ದಿಮ್ಮಿ
ಚಲಿಸುತ್ತಿದೆ.
ನಾಲ್ಕನೇ ಕಪ್ಪೆ :ನಿಮ್ಮ ಅಭಿಪ್ರಾಯಗಳೆಲ್ಲ ಅರ್ಧ ಸತ್ಯ.
ನಿಜವಾಗಿ ಚಲಿಸುತ್ತಿರುವುದು ನೀರು.
ಇದ್ದಕ್ಕಿದ್ದಂತೆಯೇ ಜಗಳವಾಡುತ್ತಿದ್ದ ಮೂರೂ ಕಪ್ಪೆಗಳು
ಸ್ನೇಹಿತರಾದವು. ನಾಲ್ಕನೆಯ ಕಪ್ಪೆಯನ್ನು ನೀರಿಗೆ ದೂಡಿದವು.
೬. ದುಷ್ಟ ನಿಗ್ರಹ ಪಾಪವಲ್ಲ. ನಿರಪರಾಧಿ ಮುಗ್ಧರನ್ನು
ಕೊಲ್ಲುವುದು ಪಾಪ.
ಮೂಲ:ಸಂಗ್ರಹ.
.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s