Uncategorized

ಸುಭಾಷಿತಗಳು.

೧. ಆಹಾರಕ್ಕೆ ಭಕ್ತಿಯನ್ನು ಸೇರಿಸಿದರೆ ನೈವೇದ್ಯವಾಗುವುದು.
ನಿರಾಹಾರಕ್ಕೆ ಭಕ್ತಿಯನ್ನು ಸೇರಿಸಿದರೆ ಉಪವಾಸವಾಗುವುದು.
ನೀರಿಗೆ ಭಕ್ತಿಯನ್ನು ಸೇರಿಸಿದರೆ ತೀರ್ಥವಾಗುವುದು.
ಮಾತಿಗೆ ಭಕ್ತಿಯನ್ನು ಸೇರಿಸಿದರೆ ಸ್ತೋತ್ರವಾಗುವುದು.
ಕೇಳುವುದಕ್ಕೆ ಭಕ್ತಿಯನ್ನು ಸೇರಿಸಿದರೆ ಮಂತ್ರವಾಗುವುದು.
ಆಲೋಚನೆಗೆ ಭಕ್ತಿಯನ್ನು ಸೇರಿಸಿದರೆ ಧ್ಯಾನವಾಗುವುದು.
ಕೆಲಸಗಳಿಗೆ ಭಕ್ತಿಯನ್ನು ಸೇರಿಸಿದರೆ ಪೂಜೆಯಾಗುವುದು.
ಪ್ರೀತಿಗೆ ಭಕ್ತಿಯನ್ನು ಸೇರಿಸಿದರೆ ಆರಾಧನೆಯಾಗುವುದು.
ಸ್ನೇಹಕ್ಕೆ ಭಕ್ತಿಯನ್ನು ಸೇರಿಸಿದರೆ ಸತ್ಸಂಗವಾಗುವುದು.
–Mahesh Shetty Paniyoor.
೨. ಜಗತ್ತಿನ ಎಲ್ಲ ಕೆಲಸವನ್ನು ನಾನೂ ಮಾಡಬಲ್ಲೆ ಎಂಬ
ಆತ್ಮ ವಿಶ್ವಾಸ ಇರಲಿ. … ಆದರೆ, ಎಲ್ಲವೂ ನನ್ನಿಂದಲೇ ಆಗಿದ್ದು
ಎಂಬ ಅಹಂಕಾರ ಬೇಡ.
೩. ಜೀವನದಲ್ಲಿ ನಮಗೆ ಎರಡು ಆಯ್ಕೆಗಳಿವೆ. ಒಂದು ಒಪ್ಪಿಗೆ
ಇನ್ನೊಂದು ಬದಲಾವಣೆ. ಯಾವುದನ್ನು ಬದಲಾಯಿಸಲು
ಸಾಧ್ಯವಿಲ್ಲವೋ ಅದನ್ನು ಒಪ್ಪಿ ಕೊಳ್ಳಬೇಕು ಯಾವುದನ್ನು
ಒಪ್ಪಲು ಸಾಧ್ಯವಿಲ್ಲವೋ ಅದನ್ನು ಬದಲಾಯಿಸಬೇಕು.
೪. ಒಳ್ಳೆಯವರು ಮ ತ್ತು ಕೆಟ್ಟವರು… ಹಸು ಮತ್ತು ಹಾವು
ಗಳಂತೆ.ಹುಲ್ಲನ್ನು ತಿಂದು ಹಸುವು ಕೆಚ್ಚಲಿನಲ್ಲಿ ಹಾಲನ್ನುಕ್ಕಿಸಿದರೆ,
ಹಾಲನ್ನು ಕುಡಿದ ಹಾವು ಬಾಯಲ್ಲಿ ವಿಷವನ್ನೇ ಕಕ್ಕುತ್ತದೆ.
೫. ಒಬ್ಬ ಮನುಷ್ಯ ಸಂತೋಷದಿಂದಿರಲು ೩ ಸಂಗತಿಗಳಿರಬೇಕೆಂದು
ಹೇಳುತ್ತಾರೆ—-ಮಾಡಲೊಂದು ಕೆಲಸ, ಪ್ರೀತಿಸಲೊಂದು ಜೀವ,
ಸಾಗಲೊಂದು ಭರವಸೆ.
೬. ಮನೆಯಲ್ಲಿ ಕಣ್ಣಿಗೆ ಕಾಣುವ ಎಷ್ಟೇ ದೀಪಗಳಿದ್ದರೂ, ದೇವರ
ಮುಂದೆ ಇಡೋ ದೀಪಕ್ಕೆ ಬೆಲೆ ಜಾಸ್ತಿ. ಹಾಗೇ ಇಷ್ಟ ಪಡೋ ಮನಸುಗಳು
ಎಷ್ಟೇ ಇದ್ದರೂ, ನಾವು ಇಷ್ಟ ಪಡೋ ಒಂದು ಮನಸ್ಸಿಗೆ
ಬೆಲೆ ಜಾಸ್ತಿ ಇರುತ್ತೆ.
೭. ಶ್ರೀಮಂತಿಕೆ ಬಂದಾಗ ಎಚ್ಚರವಿರಬೇಕು. ಬಡತನ ಬಂದಾಗ
ತಾಳ್ಮೆ ಇರಬೇಕು.
೮. ಹೊಗಳದಿದ್ದರೆ ಬೇಡ, ತೆಗಳದಿದ್ದರೆ ಸಾಕು;
ಸಾಧಿಸದಿದ್ದರೆ ಬೇಡ, ಬಾಧಿಸದಿದ್ದರೆ ಸಾಕು ;
ಗಳಿಸದಿದ್ದರೆ ಬೇಡ, ಕಸಿಯದಿದ್ದರೆ ಸಾಕು;
ಪರರ ಸರಿ, ತಪ್ಪು ಬೇಡ. ನಿನ್ನಾತ್ಮಕ್ಕೆ ನೀ ಸರಿಯೆನಿಸಿದರೆ ಸಾಕು.
೯. ಮಾತಾಡಿದವನು ಮಾತನ್ನು ಮರೆತು ಬಿಡುತ್ತಾನೆ. ಆದರೆ
ಮಾತು ಕೇಳಿದವನು ಜನ್ಮ ಪೂರ್ತಿ ನೆನಪಿಟ್ಟುಕೊಳ್ಳುತ್ತಾನೆ.
೧೦. ಯಾರ ಕಣ್ಣಿಗೂ ಕಾಣದ ಕೈಗಳ ಸೂತ್ರ ,
ಯಾರೋ ಆಡಿಸಿದಂತೆ ಆಡುವ ಪಾತ್ರ ,
ನಗುವೋ , ಅಳುವೋ ಎರಡೂ ವಿಚಿತ್ರ.
ಎಲ್ಲವೂ ಉಳಿವುದು ನೆನಪಲ್ಲಿ ಮಾತ್ರ;
ಎಲ್ಲರೂ ಇಲ್ಲಿರುವುದು ನೆಪ ಮಾತ್ರ.
ಮೂಲ:Face book quotes.

Advertisements

2 thoughts on “ಸುಭಾಷಿತಗಳು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s