Uncategorized

ನಗೆ ಮಲ್ಲಿಗೆ.

ನಗೆ ಹೃದಯದ ಬಾಗಿಲು ತೆರೆಸುವ calling bell ಮತ್ತು ಹೃದಯದ
vacuum cleaner.
೧. Bank ಶಾಖೆ ಉದ್ಘಾಟನೆ ಸಂದರ್ಭ. ಯಾರೆಷ್ಟೇ ಪ್ರಯತ್ನಿಸಿದರೂ
ಬಾಗಿಲ ಬಳಿ ಮಲಗಿದ್ದ ಕತ್ತೆ ಏಳುವುದಿಲ್ಲ. ಆಗ attender ಬಂದು
ಕತ್ತೆಯ ಕಿವಿಯಲ್ಲಿ ಏನೋ ಉಸುರಿದ. ಕತ್ತೆ ಒಂದೇ ಸಮನೆ ಓಟ
ಕಿತ್ತಿತು. Attender ನನ್ನು ಮ್ಯಾನೇಜರ್ ಕೇಳಿದರು -”ಏನು ಹೇಳಿದೆ?”
ಎಂದು. ”ನಿನ್ನನ್ನು ಈ branch ನ manager ಮಾಡುತ್ತೇನೆ”ಎಂದು
ಹೇಳಿದೆನೆಂದ. ಹಾಗೆ ಹೇಳಿದ್ದೇ ತಡ ಒಂದು ನಿಮಿಷವೂ ಕತ್ತೆ ನಿಲ್ಲಲಿಲ್ಲ.
(Branch Manager ಜವಾಬ್ದಾರಿ ಮತ್ತು ಕಷ್ಟ ಅಷ್ಟಿದೆ )
೨. ”ರಾತ್ರೆ ಬಹಳ ಹೊತ್ತಾದಂತೆ ಕಾಣಿಸ್ತಿದೆ. ಗಂಟೆ ಎಷ್ಟು ?” ಎಂದು
ಸ್ನೇಹಿತನ ರೂಮಿನಲ್ಲಿ ಹರಟೆ ಹೊಡೆಯುತ್ತಿದ್ದವ ಕೇಳಿದ. ಸ್ನೇಹಿತ
”ಗಡಿಯಾರ ಕೆಟ್ಟಿದೆ. ಆದರೂ ಇರು, ಹೇಳುವೆ” ಎನ್ನುತ್ತಾ ತಬಲಾ
ಎತ್ತಿಕೊಂಡು ಬಾರಿಸ ತೊಡಗಿದ. ಕೆಲವೇ ಕ್ಷಣಗಳಲ್ಲಿ ನೆರೆಮನೆಯಾತನ
ಧ್ವನಿ ಅಬ್ಬರಿಸಿತು ”ಏಯ್ ಮೂರ್ಖ, ಸಾಕು ನಿಲ್ಲಿಸೋ. ರಾತ್ರಿ
ಹನ್ನೆರಡೂವರೆ ಆಗಿದ್ದು ತಿಳಿಯೋದಿಲ್ವೇ ?”
೩. ಸುದ್ದಿ:ಚಾಲಕನಿಲ್ಲದೆ ಓಡಿದ ರೈಲು.
ಗುದ್ದು:ಅದೇನು ಮಹಾ … ರಾಜಕಾರಣಿಗಳು ಬಿಡುವ ರೈಲಿಗೆ
ಹಳಿಯೂ ಬೇಕಿಲ್ಲ.
೪. ಅಪಾರ್ಥ =ಅಪಾರ +ಅರ್ಥ.
೫. ಜಿಪುಣಾಗ್ರೇಸರ ರಂಗ ಮಹಾದಾನಿ ಗುಂಡನಿಗೆ ಅದೊಂದು ದಿನ
ರಕ್ತ ದಾನ ಮಾಡಿ ಜೀವ ಉಳಿಸಿದ. ಇದರಿಂದ ಖುಷಿಗೊಂಡ ಗುಂಡ
ರಂಗನಿಗೆ ಒಂದು ಹೊಸ ಕಾರನ್ನೇ ದಾನವಾಗಿ ನೀಡಿದ. ಇದಾದ ೬
ತಿಂಗಳ ನಂತರ ಗುಂಡನಿಗೆ ಮತ್ತೊಮ್ಮೆ ಅಸೌಖ್ಯ ಉಂಟಾಯಿತು.
ಈ ಬಾರಿಯೂ ಜಿಪುಣ ರಂಗ ಧಾವಿಸಿ ಬಂದು ರಕ್ತ ನೀಡಿದ.
ಮತ್ತೊಂದು ದೊಡ್ಡ gift ಪಡೆಯುವ ಆಸೆ ಆತನದ್ದಾಗಿತ್ತು.
ಆದರೆ ಈ ಬಾರಿ ಗುಂಡ ಕೇವಲ ಒಂದು ಚಾಕಲೇಟು ನೀಡಿದ.
ಅದೇಕೆ ಹಾಗೆ?ಯಾಕೆಂದರೆ ಈ ಬಾರಿ ಆತನ ದೇಹದಲ್ಲಿ ಇದ್ದಿದ್ದು
ಇದೇ ಜಿಪುಣ ರಂಗನ ರಕ್ತ… !
೬. ಬೊಕ್ಕ ತಲೆಯ ಡಾಕ್ಟರರ ಬಳಿ ಕೂದಲು ಉದುರುವುದನ್ನು
ತಪ್ಪಿಸುವುದು ಹೇಗೆಂದು ಕೇಳಲು ಹೋದಂತೆ.
೭. S S L C ಫೇಲಾದ ಚಾಲಾಕಿಯೊಬ್ಬ M B B S ಎಂದು ಹೇಳಿಕೊಂಡು
ಕ್ಲಿನಿಕ್ ಪ್ರಾರಂಭಿಸಿದ. ಆರಂಭೋತ್ಸವ ದಿನ ಬಂದವರಲ್ಲಿ
ಓರ್ವ police ಪೇದೆ ವೈದ್ಯನ ಕೈ ಹಿಡಿದುಕೊಂಡು police ಠಾಣೆಗೆ
ಎಳೆದೊಯ್ಯ ತೊಡಗಿದ. ಏಕೆಂದು ವಿಚಾರಿಸಿದಾಗ ”ಆತ ನಕಲಿ
ವೈದ್ಯ ” ಎಂದುತ್ತರಿಸಿದ. ”ಹೇಗೆ ಕಂಡು ಹಿಡಿದೆ” ಎಂದು ಪ್ರಶ್ನಿಸಿದಾಗ
”ಸ್ವಾಮೀ, ಒಮ್ಮೆ board ನೋಡಿ. ಕನ್ನಡದಲ್ಲಿ ಬರೆದಿದೆ -”ಡಾ. ….
M B B S, ಚರ್ಮ ತಜ್ಞ ” ಬದಿಯಲ್ಲಿ English ನಲ್ಲಿ ಬರೆದಿದೆ ”ಡಾ…
M B B S , Leather specialist” ಇಷ್ಟೇ ಸಾಕಾಯಿತು ನನಗೆ”ಎಂದು
ಹೇಳಿದ.
ಮೂಲ:ಸಂಗ್ರಹ.

2 thoughts on “ನಗೆ ಮಲ್ಲಿಗೆ.

Leave a Reply to vanihegde Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s