Uncategorized

ಸಂಸ್ಕೃತ

”ದೇವ ಭಾಷೆ” ಸಂಸ್ಕೃತ ಎಂದು ಮಹಾಕವಿ ದಂಡಿ ಕರೆದಿದ್ದಾನೆ.
ಸಂಸ್ಕೃತ ಭಾಷೆಯ ಲಿಪಿ–ದೇವನಾಗರಿ (ದೇವತೆಗಳ ನೆಲೆಗೆ
ಸಂಬಂಧಿಸಿದ್ದು) ಸಂಸ್ಕೃತ ಭಾಷೆಯನ್ನು ಅಮರವಾಣಿ,
ಗೀರ್ವಾಣ ವಾಣಿ ಎಂದೂ ಕರೆದಿದ್ದಾರೆ.
ಸಂಸ್ಕೃತ ಎಂದರೆ ಚೆನ್ನಾಗಿ ಮಾಡಲ್ಪಟ್ಟದ್ದು.
ಎಲ್ಲ ಭಾರತೀಯ ಭಾಷೆಗಳಿಗೂ ಮೂಲ ಸಂಸ್ಕೃತ.
ಜಗತ್ತಿನ ಎಲ್ಲಾ ಭಾಷೆಗಳಿಗೂ ಇದ್ದಿರ ಬಹುದಾದ ಮೂಲಭಾಷೆಗೂ
ಸಂಸ್ಕೃತಕ್ಕೂ ನಂಟಿರುವುದನ್ನು ವಿದ್ವಾ೦ಸರು ಪ್ರತಿಪಾದಿಸಿದ್ದಾರೆ.
ಜಗತ್ತಿನ ಅತ್ಯಂತ ಪ್ರಾಚೀನ ಜೀವಂತ ಭಾಷೆ ಸಂಸ್ಕೃತ.
ವೇದ ಈಗ ನಮಗೆ ಜಗತ್ತಿನಲ್ಲಿ ದೊರೆತಿರುವ ಅತ್ಯಂತ ಪ್ರಾಚೀನ ಸಾಹಿತ್ಯ.
ಇದು ಸಂಸ್ಕೃತ ಭಾಷೆಯಲ್ಲಿದೆ ಭಾರತೀಯ ಸಂಸ್ಕೃತಿಯನ್ನು
ರೂಪಿಸಿರುವುದರಲ್ಲಿ ವೇದಗಳ ಪಾತ್ರ ದೊಡ್ಡದು.
೪ವೇದಗಳು -ಋಗ್ವೇದ,ಯಜುರ್ವೇದ,ಸಾಮವೇದ, ಅಥರ್ವ ವೇದ.
೬ ವೇದಾಂಗಗಳು -ಶಿಕ್ಷಾ,ವ್ಯಾಕರಣ, ಛಂದಸ್ಸು,ಕಲ್ಪ, ನಿರುಕ್ತ, ಜ್ಯೋತಿಷ.
ವೇದಗಳ ಕೊನೆಯ ಭಾಗಗಳು ಎನಿಸಿರುವ ಉಪನಿಷತ್ತುಗಳು ಭಾರತೀಯ
ಪ್ರಜ್ಞೆಯ ಔನ್ನತ್ಯಕ್ಕೆ ಸಾಕ್ಷ್ಯಗಳಾಗಿವೆ.
ಭಾರತಕ್ಕೆ ಆಧ್ಯಾತ್ಮಿಕ ಗುರುವಿನ ಪಟ್ಟ ಒದಗಿದ್ದೇ ಉಪನಿಷತ್ತುಗಳಿಂದ
ವಾಲ್ಮೀಕಿ ವಿರಚಿತ ರಾಮಾಯಣ ಜಗತ್ತಿನ ಆದಿಕಾವ್ಯ.
ವ್ಯಾಸ ಮಹರ್ಷಿ ವಿರಚಿತ ”ಮಹಾ ಭಾರತ” ಕಾವ್ಯದ ಗಾತ್ರವನ್ನೂ,
ವಿಷಯ ವೈವಿಧ್ಯವನ್ನೂ ಮೀರಿಸುವಂಥ ಇನ್ನೊಂದು ಸಾಹಿತ್ಯ ಕೃತಿ
ಜಗತ್ತಿನಲ್ಲೇ ಇಲ್ಲ . ಭಗವದ್ಗೀತೆಯ (ಮಹಾಭಾರತದ ಭಾಗವಾಗಿರುವ)
ತಾತ್ತ್ವಿಕತೆಗೆ ಜಗತ್ತೇ ತಲೆ ತೂಗಿದೆ. ಕಾಳಿದಾಸ,ಭವಭೂತಿ, ಭಾಸ,ಮಾಘ,

ಭಾರವಿ, ಅಶ್ವಘೋಷ, ಶೂದ್ರಕ,ಬಾಣ, ದಂಡಿ, ಜಯದೇವ,ಲೀಲಾಶುಕ
ಮುಂತಾದ ಹತ್ತಾರು ಕವಿಗಳು ಜಗತ್ತಿನ ಮಹಾಕವಿಗಳ ಸಾಲಿನಲ್ಲಿ
ಪ್ರಥಮ ಪಂಕ್ತಿಯಲ್ಲಿ ನಿಲ್ಲುವವರು.
ಪಾಣಿನಿ ಮಹರ್ಷಿಗಳ ”ಅಷ್ಟಾಧ್ಯಾಯಿ” ಜಗತ್ತಿನ ಬೌದ್ಧಿಕ ಪ್ರಪಂಚದ
ವಿಸ್ಮಯಗಳಲ್ಲೊಂದು.
ಪತಂಜಲಿಗಳ ”ಮಹಾಭಾಷ್ಯ”,ಭರ್ತೃಹರಿಯ ”ವಾಕ್ಯಪದೀಯ”,
ಭಾರತಮುನಿಯ ”ನಾಟ್ಯ ಶಾಸ್ತ್ರ”,ಆನಂದ ವರ್ಧನನ ”ಧ್ವನ್ಯಾ ಲೋಕ”,
ಅಭಿನವ ಗುಪ್ತನ ”ಲೋಚನ”,ವಿಶ್ವನಾಥನ ”ಸಾಹಿತ್ಯ ದರ್ಪಣ”,
ಮಮ್ಮಟನ ”ಕಾವ್ಯ ಪ್ರಕಾಶ”,ಕುಂತಕನ ”ವಕ್ರೋಕ್ತಿ ಜೀವಿತ ”,
ಭೋಜನ ”ಶೃಂಗಾರ ಪ್ರಕಾಶ”,ಜಗನ್ನಾಥನ ”ರಸ ಗಂಗಾಧರ”,
ಅಪ್ಪಯ್ಯ ದೀಕ್ಷಿತರ ”ಕುವಲಯಾನಂದ” ಮುಂತಾದ ಗ್ರಂಥಗಳು
ಕಲೆ ಮತ್ತು ಸಾಹಿತ್ಯ ಲೋಕದ ಅಪೂರ್ವ ನಿಧಿಗಳಂತಿವೆ.
ಅಮರ ಸಿಂಹನ ”ಅಮರ ಕೋಶ”ವು ಶಬ್ದಕೋಶ ಜಗತ್ತಿನ ಮೊದಲ ಕೃತಿ.
”ಆರ್ಯಭಟೀಯಂ” ”ಲೀಲಾವತೀ”, ”ಪಂಚ ಸಿದ್ಧಾಂತಿಕ” ಮುಂತಾದ
ಗ್ರಂಥಗಳು ಭಾರತದ ಗಣಿತ ಸಾಧನೆಗೆ ದಿಕ್ಸೂಚಿಗಳಂತಿವೆ.
ಸಾವಿರಾರು ವರ್ಷಗಳು ಸಂದರೂ ಒಂದು ಶಬ್ದವೂ ಅಪಭ್ರಂಶಗೊಳ್ಳದೆ
ಪರಿಶುದ್ಧತೆ ಕಾಪಾಡಿಕೊಂಡು ಬಂದಿರುವುದು ಸಂಸ್ಕೃತದ ವಿಶಿಷ್ಟತೆ.
ಮೂಲ:ಸಂಗ್ರಹ. .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s