Uncategorized

ಅಧ್ಯಾತ್ಮ ಚಿಂತನ.

೧. ಸಂಸ್ಕೃತದ ಒಂದು ಶ್ಲೋಕ ಈ ರೀತಿ ಇದೆ -”ಮಹಾತ್ಮರು ಮಾಡಿದ್ದನ್ನು
ಜನಸಾಮಾನ್ಯರು ತಮ್ಮ ಇತಿ-ಮಿತಿಗಳನ್ನು ತಿಳಿದುಕೊಳ್ಳದೆ ಅನುಕರಿಸ
ಬಾರದು.” ಶಿವನು ವಿಷ ಕುಡಿದ; ಪರಶುರಾಮನು ತನ್ನ ತಾಯಿಯ
ಕೊರಳನ್ನು ಕೊಡಲಿಯಿಂದ ಕತ್ತರಿಸಿದ. ಆದರೆ ಶಿವನು ವಿಷವನ್ನು
ಕಂಠದಲ್ಲೇ ಧರಿಸಿದ. ಪರಶುರಾಮನು ತಂದೆಯ ಅನುಗ್ರಹದಿಂದ
ತಾಯಿಯನ್ನು ಮರಳಿ ಬದುಕಿಸಿದ. ಅವರಿಗೆ ಅಂಥಹ ಸಾಮರ್ಥ್ಯ ಇತ್ತು.
ಹಾಗೆಂದು ಜನ ಸಾಮಾನ್ಯರಿಗೆ ಶಿವ -ಪರಶುರಾಮರ ದೃಷ್ಟಾಂತವನ್ನು
ಕೊಡುತ್ತಾ ಅವರನ್ನು ಅನುಕರಿಸಿ ಎಂದು ಹೇಳಬಹುದೇ ?
-ಕಾಸರಗೋಡು ಕೃಷ್ಣ ಭಟ್.
೨. ಈ ಮಾನವ ಜನ್ಮವು ಜೀವಾತ್ಮ ಒಂದರ ಸುದೀರ್ಘ ಪಯಣದಲ್ಲಿ
ಪುಟ್ಟದಾದ ಒಂದು ತಂಗುದಾಣ ಮಾತ್ರ.
೩. ಯಾವುದು ಜಗತ್ತಿನ ಅಭ್ಯುದಯಕ್ಕೆ ಕಾರಣವಾಗುವ ಗುಣ
ಹೊಂದಿರುವುದೋ ಅದೇ ನಿಜವಾದ ಧರ್ಮವಾಗಿದೆ.
೪. ಎಲ್ಲ ಕಲ್ಲುಗಳಿಗೂ ದೇವರ ಮೂರ್ತಿಯಾಗುವ ಭಾಗ್ಯವಿರುವುದಿಲ್ಲ.
ಕಡಿಮೆ ಪೆಟ್ಟು ತಿಂದ ಕಲ್ಲುಗಳು ಹಾಸುಗಲ್ಲುಗಳಾಗುತ್ತವೆ.
ಹೆಚ್ಚು ಪೆಟ್ಟು ತಿಂದ ಕಲ್ಲುಗಳು ಮಾತ್ರವೇ ದೇವರ ಗರ್ಭ ಗುಡಿಯೊಳಗೆ
ಸೇರುತ್ತವೆ .
೫. ಆಧ್ಯಾತ್ಮಿಕತೆ ಇಲ್ಲವಾದಲ್ಲಿ ಮನುಷ್ಯ, ಮನುಷ್ಯನಾಗಿ ಉಳಿಯಲಾರ.
ದೇಹ ಸ್ವಸ್ಥತೆ, ಮನಸ್ಸು ಸ್ವಸ್ಥತೆ, ಸಾಮಾಜಿಕ ಸ್ವಸ್ಥತೆ ಜೊತೆಗೆ ಆಧ್ಯಾತ್ಮಿಕ
ಸ್ವಸ್ಥತೆ ಇರಬೇಕು . ಇದು ವೈದ್ಯರಿಂದ ಸಿಗುವುದಿಲ್ಲ. ಪವಿತ್ರ ಕ್ಷೇತ್ರ ಗಳು
ನೀಡುತ್ತವೆ. ಅವು ಸಮಾಜದ ಅನೇಕ ಅಸ್ವಸ್ಥತೆಯನ್ನುಹೋಗಲಾಡಿಸುತ್ತವೆ.
೬. ಅಗಸ್ತ್ಯ ಮುನಿಗಳಿಂದ ಪಡೆದು ಕೊಂಡು ಶಂಕರ ಭಗವತ್ಪಾದರೇ
ಕೈಯ್ಯಾರ ಶ್ರೀ ರಾಮಚಂದ್ರಾಪುರ ಮಠಕ್ಕೆ ನೀಡಿದ ದೇವತಾ ಲಿಂಗ
ಪ್ರತಿಮೆಗಳೇ ಈ ಮಠದ ಆರಾಧ್ಯ ದೇವರು. ಈ ವಿಗ್ರಹಗಳಲ್ಲಿ
(ಶ್ರೀ ಸೀತಾರಾಮಚಂದ್ರ, ಚಂದ್ರ ಮೌಳೇಶ್ವರ , ರಾಜ ರಾಜೇಶ್ವರಿ )
ಶ್ರೀ ಚಂದ್ರ ಮೌಳೇಶ್ವರ ಲಿಂಗದಲ್ಲಿ ಅಖಂಡ ಭಾರತದ ನಕ್ಷೆ ಇದೆ.
ಇದು ಸ್ವಾಭಾವಿಕವಾಗಿ ಮೂಡಿದ್ದು, ಈ ಲಿಂಗವು ನೈಸರ್ಗಿಕ ಗುಣ
ವಿಶೇಷ ಹೊಂದಿದ್ದು,ಹುಣ್ಣಿಮೆ, ಅಮವಾಸ್ಯೆ ಗಳಲ್ಲಿ ಬಣ್ಣ
ಮಾರ್ಪಾಟಾಗುತ್ತದೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s