Uncategorized

ಪ್ರಾಣಿ ಪ್ರಪಂಚ

೧. ಒಂಟೆ ಅನೇಕ ದಿನಗಳ ಕಾಲ ನೀರು ಕುಡಿಯದೆ ಬದುಕ ಬಲ್ಲುದು.
ಒಣಹುಲ್ಲು ,ಮುಳ್ಳಿನ ಗಿಡಗಳೇ ಒಂಟೆಯ ಆಹಾರ. ಅದರ ಡುಬ್ಬದಲ್ಲಿ
ಕೊಬ್ಬಿನ ಪದಾರ್ಥ ಶೇಖರವಾಗಿರುತ್ತದೆ. ಕಷ್ಟದ ಪರಿಸ್ಥಿತಿಯಲ್ಲಿ ಅದು
ಒಂಟೆಗೆ ಶಕ್ತಿ ಕೊಡುತ್ತದೆ. ಒಂದು ಸಲಕ್ಕೆ ಅದು ೨೫ ಗ್ಯಾಲನ್ ಗಳಷ್ಟು
ನೀರನ್ನು ಕುಡಿಯುತ್ತದೆ.
೨. ವಿಶ್ವದ ಅತೀ ವಿನಾಶಕಾರಿ ಕೀಟವೆಂದರೆ ಮರುಭೂಮಿಯ ಮಿಡತೆ.
೩. ಕಾಗೆಯೊಂದಗುಳ ಕಂಡರೆ ಕರೆಯದೇ ತನ್ನ ಬಳಗವನ್ನು? ಕಾಗೆಗಳ
ಸಹಕಾರಿ ಜೀವನ ನಿಜಕ್ಕೂ ಮಾದರಿಯಾದದ್ದು. ಇವು ತಮ್ಮ ಗುಂಪಿನ
ನಡುವೆ ಪ್ರಬಲ ಸಂವಹನವನ್ನು ಹೊಂದಿರುತ್ತವೆ. ಕಾಗೆಗಳು ಭಾವನಾತ್ಮಕ
ಜೀವಿಗಳು. ತಮ್ಮ ಸಂತೋಷ, ಆಕ್ರೋಶ, ಬೇಸರ ಎಲ್ಲವನ್ನೂ ಅಭಿವ್ಯಕ್ತಿಸ
ಬಲ್ಲವು. ಶತ್ರುಗಳನ್ನು ಕಂಡಾಗ ತಮ್ಮ ಗುಂಪನ್ನು ಕೂಗಿನ ಮೂಲಕ
ಎಚ್ಚರಿಸಬಲ್ಲವು. ಕಾಗೆ ಪ್ರತಿನಿತ್ಯ ತಿನ್ನುವ ಆಹಾರದ ತೂಕವು ಅದರ
ದೇಹದ ತೂಕ(೨೫೦-೩೦೦ಗ್ರಾಂ)ದಷ್ಟೇ ಇರುತ್ತದೆ. ದಿನಂಪ್ರತಿ ೪ರಿಂದ
೫ ಸಾವಿರ ಟನ್ ಗಳಷ್ಟು ತ್ಯಾಜ್ಯ ಕಾಗೆಗಳ ಹೊಟ್ಟೆಗೆ ಸೇರುತ್ತದೆ. ಇದರಿಂದ
ಪರಿಸರ ಮಾಲಿನ್ಯ ನಿಯಂತ್ರಣವಾಗಿ, ಅವುಗಳ ಹೊಟ್ಟೆಯೂ ತಣ್ಣಗಾಗಿ
ಇಡೀ ಪರಿಸರ ಪರಿಶುದ್ಧವಾಗುತ್ತದೆ. ಕೆಲವು ಚಿಂಪಾಂಜಿಗಳ ಬುದ್ಧಿಮತ್ತೆ
ಗಿಂತಲೂ ಕಾಗೆಯ ಬುದ್ಧಿಮತ್ತೆಯೇ ಹೆಚ್ಚಿದೆ. ಇದರ ಮಿದುಳು ಅತ್ಯಂತ
ವೇಗವಾಗಿ ಕೆಲಸ ಮಾಡುತ್ತದೆ.ಮನುಷ್ಯನ ಸೂಕ್ಷ್ಮಗಳನ್ನು ಅರ್ಥ
ಮಾಡಿಕೊಂಡು ಸನ್ನಿವೇಶಕ್ಕೆ ತಕ್ಕಂತೆ ವರ್ತಿಸುತ್ತವೆ.
೪. ಭೂಮಿಯ ಮೇಲೆ ಬಾವಲಿಗಳು ಲಕ್ಷಾಂತರ ವರ್ಷಗಳಿಂದಲೂ
ಇವೆ ಎಂಬುದು ಪಳೆಯುಳಿಕೆಗಳ ಅಧ್ಯಯನದಿಂದ ರುಜುವಾತಾಗಿದೆ.
ಧ್ರುವ ಪ್ರದೇಶಗಳ ಹೊರತಾಗಿ ವಿಶ್ವದ ಎಲ್ಲ ಭಾಗಗಳಲ್ಲೂ ಬಾವಲಿಗಳು
ಕಂಡು ಬರುತ್ತವೆ. ಹಾರುವ ಸಾಮರ್ಥ್ಯವಿರುವ ಏಕೈಕ ಸಸ್ತನಿ ಬಾವಲಿ.
ಬಹುತೇಕ ಬಾವಲಿಗಳು ಕೀಟ , ಹಣ್ಣು ಮತ್ತು ಮೀನುಗಳನ್ನು ತಿನ್ನುತ್ತವೆ .
ರಕ್ತವನ್ನೇ ಕುಡಿದು ಜೀವಿಸುವ ಬಾವಲಿಗಳೂ ಇವೆ.
೫.ಗಂಡು ಕಡಲ ಕುದುರೆ ಗರ್ಭ ಧರಿಸುತ್ತದೆಂದು ಸಂಶೋಧನೆ ನಡೆಸಿ
ಜಗತ್ತಿಗೆ ಹೇಳಿದವರು -ಅಮೆಂಡಾ ವಿನ್ಸೆಂಟ್.
೬. ದಕ್ಷಿಣ ಅಮೇರಿಕಾದಲ್ಲಿ sloth ಎಂದು ಕರೆಯಲಾಗುವ ಸಸ್ತನಿ ಪ್ರಾಣಿ
ಇದೆ. ಇವು ತಮ್ಮ ಬದುಕಿನ ಬಹುಭಾಗವನ್ನು ತಲೆ ಕೆಳಗೆ ಮಾಡಿಕೊಂಡೇ
ಕಳೆಯುತ್ತವೆ. ನಿದ್ರಿಸುವಾಗ ಅವುಗಳ ಸ್ನಾಯುಗಳು ಸ್ಥಿರವಾಗಿರುತ್ತವೆ.
ಪ್ರಾಣಿ ಎಚ್ಚರ ಗೊಳ್ಳುವವರೆಗೂ ಅವುಗಳ ಸ್ನಾಯುಗಳು ಸ್ಥಿರವಾಗಿರುತ್ತವೆ.
೭. ತನ್ನ ಬೆನ್ನ ಮೇಲೆ ಮಲಗುವ ಏಕೈಕ ಪ್ರಾಣಿ -ಮನುಷ್ಯ.
೮. ಸೊಳ್ಳೆಯ ಮುಖದ ಮುಳ್ಳು ಅಸ್ತ್ರಕ್ಕಿಂತಲೂ ತೀಕ್ಷ್ಣ. ಹೀಗಿದ್ದರೂ
ಸೃಷ್ಟಿಕರ್ತ ಬ್ರಹ್ಮನು ಸೊಳ್ಳೆಗೆ ಪುಟ್ಟ ಶರೀರವನ್ನು ಕೊಟ್ಟು ಜಗತ್ತನ್ನು
ಕಾಪಾಡಿದ್ದಾನೆ. ಜಗದ್ರಕ್ಷಕನಾದ ಭಗವಂತನು ಯಾವುದೇ ಪ್ರಾಣಿಗೆ
ಎಂಥದ್ದೇ ಶಕ್ತಿಯನ್ನು ಕೊಟ್ಟರೂ ಅಲ್ಲಿ ದೌರ್ಬಲ್ಯದ ಅಂಶವನ್ನು
ಇಟ್ಟೇ ಕಳಿಸಿರುತ್ತಾನೆ.
೯. ಹೇನುಗಳಿಗೆ ೪ ಮೂಗುಗಳಿವೆ.
೧೦. ವೇಗದ ಹಕ್ಕಿ swift ಗಂಟೆಗೆ ೧೬೦ಮೈಲಿ ವೇಗದಲ್ಲಿ ಹಾರುತ್ತದೆ.
೧೧. ಒಂದು ಹಸು ಜೀವಿತಾವಧಿಯಲ್ಲಿ ೨,೦೦,೦೦೦ ಲೋಟಗಳಷ್ಟು
ಹಾಲು ಕೊಡುತ್ತದೆ.
೧೨. ವಾಸನೆ ಗ್ರಹಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ blood hound,
beagle ಅಂಥ ನಾಯಿಗಳಿಗಿಂತಲೂ ಹಲವಾರು ಪಟ್ಟು ಹೆಚ್ಚು
ವಾಸನಾ ಗ್ರಹಿಕೆ ಶಕ್ತಿಯನ್ನು ಆನೆಗಳು ಹೊಂದಿವೆಯಂತೆ.
೧೩. ಪ್ರಾಣಿ ———————————————-ಆಯಸ್ಸು
ಆನೆ——————————————————-೧೫೦ ವರ್ಷ .
ಕುದುರೆ —————————————————೫೦ ವರ್ಷ
ಮಂಗ —————————————————–೨೦ ವರ್ಷ
ನಾಯಿ —————————————————-೧೫ ವರ್ಷ
ಇಲಿ ——————————————————–೧ ವರ್ಷ
ಮೂಲ:ಸಂಗ್ರಹ.

2 thoughts on “ಪ್ರಾಣಿ ಪ್ರಪಂಚ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s