Uncategorized

ಪೌರಾಣಿಕ ಪ್ರಪಂಚ.

೧. ಇಂದ್ರನ ಮಡದಿ ಶಚಿ ಪುಲೋಮನೆಂಬ ರಾಕ್ಷಸನ ಮಗಳು.
೨. ಹಿರಣ್ಯ ಕಶಿಪುವಿನ ಅಣ್ಣ ಹಿರಣ್ಯಾಕ್ಷನ ಮಗಳು ಹರಿಣಿಯನ್ನು
ಅಗ್ನಿದೇವನು ಮದುವೆಯಾದ.
೩. ಸಮುದ್ರ ಮಂಥನದ ಸಮಯದಲ್ಲಿ ಹುಟ್ಟಿದ ಕೌಸ್ತುಭವನ್ನು
ನಾರಾಯಣ ಪಡೆದ. ಐರಾವತವನ್ನು ಇಂದ್ರ ಪಡೆದ. ಉಚೈಶ್ರವಸ್ಸು
ಎಂಬ ಕುದುರೆಯನ್ನು ಸೂರ್ಯನು ಪಡೆದುಕೊಂಡ. ಅನಂತರ
ಜನಿಸಿದ ಧನ್ವಂತರಿ ದೇವತೆಗಳ ವೈದ್ಯ ಗುರುವಾದ.
೪. ಕಶ್ಯಪ ಮಹರ್ಷಿ ದಕ್ಷ ಬ್ರಹ್ಮನ ೧೩ ಪುತ್ರಿಯರನ್ನು ಮದುವೆಯಾದ.
ಮಹರ್ಷಿ ಕಶ್ಯಪ ಮತ್ತುಅವರ ಪತ್ನಿ ಅದಿತಿಯರೇ ಶ್ರೀ ಕೃಷ್ಣನ
ತಂದೆ-ತಾಯಿಯಾದ ವಾಸುದೇವ-ದೇವಕಿಯರಾಗಿ ಜನಿಸಿದರು.
೫. ಅಗ್ನಿಯು ಶ್ರೀ ಕೃಷ್ಣನಿಗೆ ಸುದರ್ಶನ ಎಂಬ ಚಕ್ರವನ್ನೂ
ಕೌಮೋದಕಿ ಎಂಬ ಗದೆಯನ್ನು ಕೊಟ್ಟನು.
೬. ಸೂರ್ಯನಿಗೆ ಸಂಜ್ಞಾ ,ರಾಜ್ಞಿ, ಹಾಗೂ ಪ್ರಭೆ ಎಂಬ
ಮೂವರು ಹೆಂಡತಿಯರು. ಛಾಯಾ ಸಂಜ್ಞೆಯ ಪ್ರತಿಬಿಂಬ.
ವೈವಸ್ವತ ಮನು, ಯಮ ಹಾಗೂ ಯಮುನೆಯೆಂಬ
ಮೂವರು ಮಕ್ಕಳನ್ನು ಸಂಜ್ಞೆ ಹೆತ್ತಳು. ಛಾಯೆಯಿಂದ
ಸೂರ್ಯನು ಸಾವರ್ಣಿ ಮನು , ಶನೈಶ್ಚರ ಹಾಗೂ ತಪತಿ
ಎಂಬ ಮಕ್ಕಳನ್ನು ಪಡೆಯುತ್ತಾನೆ. ತ್ವಷ್ಟನು ಸೂರ್ಯನ
ದೇಹದಿಂದ ಸ್ವಲ್ಪ ತೇಜಸ್ಸನ್ನು ಕೊರೆದು ತೆಗೆದು ವಿಷ್ಣುವಿನ
ಚಕ್ರಾಯುಧವನ್ನು ತಯಾರಿಸಿದ, ಹೀಗೆ ತುಸು ಶಾಂತವಾದ
ತೇಜಸ್ಸಿನ ಸೂರ್ಯನಿಂದ ಸಂಜ್ಞೆ ಅಶ್ವಿನಿ ದೇವತೆ ಗಳನ್ನು
ಪಡೆದಳು.
೭.ವಿಶ್ವಾಮಿತ್ರನ ಪೂರ್ವಾಶ್ರಮದ ಹೆಸರು ಕೌಶಿಕ.
೮. ವರುಣ -ಜಲಾಧಿ ದೇವತೆ ಹಾಗೂ ಪಶ್ಚಿಮಾಧಿಪತಿ.
ಯಮ -ಮೃತ್ಯು ದೇವತೆ ಹಾಗೂ ದಕ್ಷಿಣಾಧಿಪತಿ.
ಕುಬೇರ -ಸಮಸ್ತ ಸಂಪತ್ತಿನ ಒಡೆಯ ಮತ್ತು ಉತ್ತರಾಧಿಪತಿ.
೯. ಆಸ್ತಿಕ =ಅಸ್ತಿ /ಇದೆ ಎಂಬ ಭಾವನೆ ಉಳ್ಳವನು.
೧೦. ಅಹಿಂಸೆ, ಸತ್ಯ , ಆಸ್ತೇಯ (ಇತರರ ಸ್ವತ್ತನ್ನು ಬಯಸ
ದಿರುವುದು, ಮೋಸದ ಸಂಪಾದನೆ ಮಾಡದಿರುವುದು )
ಅಂತರಂಗ ಮತ್ತು ಬಹಿರಂಗ ಶುದ್ಧಿ ಮತ್ತು ಇಂದ್ರಿಯ
ನಿಗ್ರಹ ಇವು ಮನು ಸ್ಮೃತಿಯಲ್ಲಿ ಉಲ್ಲೇಖಿಸಿರುವ
ಧರ್ಮದ ನಿಯಮಗಳು.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s