Uncategorized

ಸುಭಾಷಿತಗಳು.

೧. ಪ್ರತಿ ಕ್ಷಣ ನಡೆಯುವ ಕಾಲುಗಳೇ ಎಡವಿ ಬೀಳುತ್ತವೆ.
ಆಕಾಶದಲ್ಲಿ ಮಿನುಗುವ ನಕ್ಷತ್ರಗಳು ಪತನ ಗೊಳ್ಳುತ್ತವೆ.
ಹಾರುವ ಹಕ್ಕಿಯೂ ಕೆಲವೊಮ್ಮೆ ನೆಲಕ್ಕೊರಗುತ್ತದೆ.
ಹೊಳೆಯುವ ಸೂರ್ಯ ಚಂದ್ರರಿಗೂ ಗ್ರಹಣ ಆವರಿಸುತ್ತದೆ.
ಮನುಜನ ಜೀವನದಲ್ಲೂ ಏಳು ಬೀಳುಗಳುಕಾಣುತ್ತಲೇ
ಇರುತ್ತವೆ. ಕೆಳಗೆ ಬೀಳುವಾಗ ಕುಗ್ಗದೆ, ಮೇಲೇರುವಾಗ
ಹಿಗ್ಗದೆ ಸಮಚಿತ್ತದಿ ಬಾಳಿ ಬದುಕುವುದೇ ಜೀವನ.
೨. ನಿಮ್ಮ ದೃಷ್ಟಿ ಸಕಾರಾತ್ಮಕವಾಗಿದ್ದರೆ ನೀವು ಸುತ್ತಲಿನ
ಜಗತ್ತನ್ನು ಪ್ರೀತಿಸುತ್ತೀರಿ. ಅದೇ ನಿಮ್ಮ ಮಾತು ಸಕಾರಾತ್ಮಕ
ವಾಗಿದ್ದರೆ ಸುತ್ತಲಿನ ಜಗತ್ತು ನಿಮ್ಮನ್ನು ಪ್ರೀತಿಸುತ್ತದೆ.
ಇವೆರಡು ಚೆನ್ನಾಗಿದ್ದರೆ ಹೇಗಿರಬಹುದು ಊಹಿಸಿ.
೩. ಮನೆ ಸಣ್ಣದಾದರೂ ಮನಸ್ಸು ದೊಡ್ಡದಿರಲಿ.
ಹೃದಯ ಮುಷ್ಟಿಯಷ್ಟಿದ್ದರೂ ಪ್ರೀತಿ, ಸ್ನೇಹ ಬೆಟ್ಟದಷ್ಟಿರಲಿ.
ಹಣದಲ್ಲಿ ಬಡತನ ಇದ್ದರೂ ಗುಣದಲ್ಲಿ ಶ್ರೀಮಂತಿಕೆ
ಇರಲಿ.
೪. ಜೀವನದಲ್ಲಿ ಎಲ್ಲವನ್ನುಶಾಶ್ವತವಾಗಿ ಪಡೆಯಲು
ಬಯಸುತ್ತೇವೆ. ಆದರೆ ಜೀವನವೇ ಶಾಶ್ವತವಲ್ಲ ಎಂಬುದನ್ನು
ಮರೆಯುತ್ತೇವೆ.
೫. ದೊಡ್ಡ, ದೊಡ್ಡಮಾತುಗಳನ್ನಾಡುವುದರಿಂದ ನಾವು
ಪ್ರಬುದ್ಧರಾಗುವುದಿಲ್ಲ.ಸಣ್ಣ, ಸಣ್ಣ ವಿಷಯಗಳನ್ನು
ಅರ್ಥ ಮಾಡಿಕೊಳ್ಳುವುದನ್ನು ಕಲಿತಾಗ ಪ್ರಬುದ್ಧರಾಗುತ್ತೇವೆ.
೬. ”ಪ್ರೀತಿ”ಎಂಬುದು ಬಲವಾಗಿರಬೇಕು. ಬಲವಂತವಾಗಿರಬಾರದು.
”ಸ್ನೇಹ ”ಎಂಬುದು ನೆನಪಾಗಿರಬೇಕು. ನೆಪವಾಗಿರಬಾರದು.
೭. ನೋವಾದರೆ ಮನಸ್ಸಿನಲ್ಲಿರೋರಿಗೆ ಹೇಳಬಹುದು.
ಆದರೆ ಮನಸ್ಸಿನಲ್ಲಿರೋರೆ ಮನಸ್ಸಿಗೆ ನೋವುಂಟು
ಮಾಡಿದರೆ, ಈ ಮನಸ್ಸಿನ ನೋವು ಯಾರಿಗೆ ಹೇಳೋದು?
೮. ಸ್ನೇಹಕ್ಕೆ ವಯಸ್ಸಿನ ಪರಿಮಿತಿಯಿಲ್ಲ; ಪರಿಶುದ್ಧವಾದ
ಮನಸ್ಸಿದ್ದರೆ ಸಾಕು.
೯. ರಾಷ್ಟ್ರ ಧ್ವಜ :ಜಗತ್ತಿನ ಎಲ್ಲ ದೇವರಿಗೆ ತಲೆ ತಗ್ಗಿಸಿ
ನಮಸ್ಕರಿಸುತ್ತೇವೆ. ಈ ದೇವರಿಗೆ ತಲೆ ಎತ್ತಿ ನಮಸ್ಕರಿಸುತ್ತೇವೆ.
ಯಾಕೆಂದರೆ ಈ ದೇವರು ಹೇಳುತ್ತದೆ -”ನನ್ನ ಭಕ್ತರು ಯಾವತ್ತೂ
ತಲೆ ತಗ್ಗಿಸಬಾರದು”ಅಂತ.
೧೦. ಯಾವುದೇ ಸ್ನೇಹಸಂಬಂಧ ಉಳಿಸಿಕೊಳ್ಳಲು ಶ್ರಮಿಸ
ಬೇಕಾದಲ್ಲಿ, ಅದರಿಂದ ವಿಶ್ರಮಿಸುವುದು ಒಳ್ಳೆಯದು.
೧೧. ಬದುಕಿನಲ್ಲಿ ದುಖಃ ವಾದಾಗ ಅಳಬೇಡಿ …. ಯಾಕೆಂದರೆ
ನಮ್ಮ ಜೀವನ ಶುರುವಾಗಿದ್ದೇ ಅಳುವಿನೊಂದಿಗೆ.
೧೨. ನಿಮ್ಮ ಒಳ್ಳೆತನ ನಿಮ್ಮ ಬಲವಾಗಬೇಕೇ ವಿನಃ ಬಲಹೀನತೆ
ಯಾಗಬಾರದು. ನಿಮ್ಮ ಒಳ್ಳೆ ಮನಸ್ಸು ನೀವು ಉಪಯೋಗಿಸು
ವಂತಿರಬೇಕೇ ವಿನಃ ಬೇರೆಯವರು ದುರುಪಯೋಗಿಸುವಂತಿರಬಾರದು.
೧೩. ನಾನು, ನನ್ನದು ಎನ್ನುವಲ್ಲೆಲ್ಲ ನಾವು, ನಮ್ಮದು
ಅನ್ನುವಂತಾದಾಗ ಅನೇಕ ಸಮಸ್ಯೆಗಳು ತಾವಾಗಿ ಮಾಯ
ವಾಗುತ್ತವೆ.
೧೪. ಹಾರುವ ಹಕ್ಕಿ ನೀರಲ್ಲಿ ಈಜಬಹುದು. ಆದರೆ ಈಜುವ ಮೀನು
ಯಾವತ್ತೂ ಹಾರುವುದಿಲ್ಲ . ಅದೇ ರೀತಿ ಮಾಡಿದ ಸ್ನೇಹ ದೂರ
ಆಗಬಹುದು. ಆದರೆ ಸ್ನೇಹದ ನೆನಪು ಮಾತ್ರ ದೂರ ಆಗುವುದಿಲ್ಲ.
೧೫. ಎಲ್ಲಿಯ ವರೆಗೆ ಒಂದು ಹಡಗು ಸಮುದ್ರದ ನೀರನ್ನು
ತನ್ನಲ್ಲಿ ನುಗ್ಗಲು ಬಿಡುವುದಿಲ್ಲವೋ, ಅಲ್ಲಿಯವರೆಗೆ ಇಡೀ
ಸಮುದ್ರದ ನೀರು ಆ ಹಡಗನ್ನು ಮುಳುಗಿಸಲು
ಸಾಧ್ಯವಾಗುವುದಿಲ್ಲ. ಹಾಗೆಯೇ ಸುಳ್ಳು ಹೇಳುವವರು,
ಚಾಡಿಕೋರರು,ಮೋಸಗಾರರು, ನಂಬಿಕೆ ದ್ರೋಹಿಗಳು,
ಸ್ವಾರ್ಥಿಗಳು, ಸಮಯಸಾಧಕರನ್ನು ನಿಮ್ಮಹತ್ತಿರ ಸುಳಿಯಲು
ಬಿಡದಿದ್ದರೆ, ನಿಮ್ಮನ್ನು ಮುಳುಗಿಸಲು ಯಾರಿಂದಲೂ
ಸಾಧ್ಯವಿಲ್ಲ.
ಮೂಲ:Facebook Quotes.

 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s