Uncategorized

ಅಧ್ಯಾತ್ಮ ಸೌರಭ.

೧. ರೇಡಿಯೋ ಅಲೆಗಳು ಎಲ್ಲೆಡೆ ಇದ್ದರೂ ರೇಡಿಯೋ
ಉಪಕರಣವಿಲ್ಲದೆ ಸಂಗೀತದ ಆಲಿಕೆ ಹೇಗೆ ಸಾಧ್ಯವಿಲ್ಲವೋ
ಹಾಗೆಯೇ ಭಗವಂತ ಎಲ್ಲೆಡೆ ಇದ್ದರೂ ದೇವಸ್ಥಾನದಂತಹ
ಪವಿತ್ರ ತಾಣಗಳಲ್ಲಿ ವಿಶೇಷ ಸಾನ್ನಿಧ್ಯವಿರುತ್ತದೆ.
೨. ಬಹಳಷ್ಟು ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಆಮೆಯ
ಚಿತ್ರ/ಕೆತ್ತನೆ ಇರುತ್ತದೆ. ಆಮೆ ಚಿತ್ರ ಹಾಕುವುದರ ಉದ್ದೇಶ
ಏನು ಗೊತ್ತೇ ? ಆಮೆಯ ಒಂದು ಗುಣ ಅಥವಾ ಬಲ ಎಂದರೆ
ಅದು ತನ್ನ ಕಾಲು, ಮುಖ, ಎಲ್ಲವನ್ನು ಒಳಗೆಳೆದುಕೊಳ್ಳುವ
ಗುಣ ಹೊಂದಿದೆ. ಆಗ ಆಮೆಯ ಮೇಲೆ ಎಷ್ಟೇ ಭಾರದ ವಸ್ತು
ಹತ್ತಿದರೂ ಅದಕ್ಕೇನೂ ಆಗದು. ಅದೇ ರೀತಿ ಮನುಷ್ಯ
ದೇವಸ್ಥಾನಕ್ಕೆ ಬಂದಾಗ ಕಾಮ, ಕ್ರೋಧ, ಲೋಭ, ಮೋಹ,
ಮದ, ಮತ್ಸರ ಎಂಬ ಅರಿ ಷಡ್ವರ್ಗ ಗಳನ್ನು ನಿಯಂತ್ರಿಸಿ
ಕೊಳ್ಳಬೇಕು ಎಂದು ಆಮೆಯ ಚಿತ್ರ ಸೂಚಿಸುತ್ತದೆ.
೨. ”ಹುಟ್ಟಿದ ತಪ್ಪಿಗಾಗಿ ಬದುಕುತ್ತಿದ್ದೇನೆ” ಎಂಬ ಭಾವನೆ
ಬರಕೂಡದು ಮತ್ತು ಇರಕೂಡದು. ನಾವು ನಮ್ಮ ಜೀವನವನ್ನು
ನೈತಿಕಗೊಳಿಸಬೇಕು. ಜೀವನವು ಒಂದು ಲೆಕ್ಕಾಚಾರವಿದ್ದಂತೆ.
ಜೀವನವು ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರಗಳ
ಸಂಕ್ರಮಣ ಕೇಂದ್ರ. ಸ್ನೇಹಿತರನ್ನು ಮತ್ತು ಹಿತೈಷಿಗಳನ್ನು
ಕೂಡಿಸಬೇಕು. ವೈರಿಗಳನ್ನು ಮತ್ತು ಹಿತಶತ್ರುಗಳನ್ನು
ಕಳೆಯಬೇಕು. ಆತ್ಮೀಯತೆ ಮತ್ತು ವಾತ್ಸಲ್ಯಗಳನ್ನು ಗುಣಿಸಿಕೊಳ್ಳಬೇಕು.
ಮದ, ಮಾತ್ಸರ್ಯ ಗಳನ್ನು ಭಾಗಿಸಿ ನಾಮಾವಶೇಷಗೊಳಿಸಬೇಕು.
ಆಗ ಮಾತ್ರ ಜೀವನದ ನಿಜವಾದ ಆನಂದ ಹಾಗೂ ಜೀವನದ
ಸಾರ ಸರ್ವಸ್ವ ನಮ್ಮದಾಗುತ್ತದೆ.
೩. ವ್ಯಕ್ತಿ ಆಕೃತಿಯಲ್ಲಿ ಮಾತ್ರ ಮನುಷ್ಯನಾದರೆ ಸಾಲದು.
ಮಾನವೀಯತೆಯ ಗುಣವನ್ನು ಬೆಳೆಸಿಕೊಳ್ಳಬೇಕು.
ಮೂಲ:ಸಂಗ್ರಹ.

Advertisements

2 thoughts on “ಅಧ್ಯಾತ್ಮ ಸೌರಭ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s