Uncategorized

ಶುದ್ಧ ಭಾಷೆಯ ಮಹತ್ತ್ವ .

”ಮಾತು ಬಲ್ಲಾತನಿಗೆ ಮಾತೊಂದು ಮಾಣಿಕವು” –ಸರ್ವಜ್ಞ ಕವಿ.
ಏಕಃ ಶಬ್ದ ಸುಪ್ತ ಯುಕ್ತ ಸಮ್ಯಕ್ ಜ್ಞಾತಃ
ಸ್ವರ್ಗೇ ಲೋಕೇ ಕಾಮದುಘಾ ಭವತಿ ”–ವಿಶ್ವನಾಥ (ಲಾಕ್ಷಣಿಕೆ )
ಒಂದು ಶಬ್ಧವನ್ನು ಸ್ಪಷ್ಟವಾಗಿ ತಿಳಿದು ಔಚಿತ್ಯಪೂರ್ಣವಾಗಿ
ಪ್ರಯೋಗಿಸಿದರೆ ಅದು ಸ್ವರ್ಗಲೋಕದ ಕಾಮಧೇನುವಿನಂತೆ
ಇಷ್ಟಾರ್ಥವನ್ನು ಕೊಡುತ್ತದೆ.
ವ್ಯಾಕರಣ ಎಂಬುದು ಭಾಷೆಯ ಶಿಸ್ತು. ಯಾವ ಭಾಷೆಯಲ್ಲಿಯಾದರೂ
ಅದರ ಜಾಯಮಾನ, ಪದಗಳ ಉಚ್ಚಾರ, ತಪ್ಪು -ಒಪ್ಪು , ವ್ಯಾಕರಣ
ನಿಯಮಗಳನ್ನು ತಿಳಿದು ಬಳಸದಿದ್ದರೆ ಅರ್ಥ ವ್ಯತ್ಯಾಸವಾಗಿ
ಅನಾಹುತ ಸಂಭವಿಸಬಹುದು.
ಉದಾ:” ನಾನು ಒಂದು ಗ್ರಹ ಪ್ರವೇಶಕ್ಕೆ ಹೋದೆ.” (ಗೃಹ ಪ್ರವೇಶ)
”ಅವರು ಪುಣ (ಪುನಃ )ಯಾವಾಗ ಬರೂದು ?”
”ನಾನು ಅವನಿಗೆ ಕರ್ದು (ಕರೆದು )ಬಂದೆ. ”
ಶುದ್ಧ ಭಾಷೆ ತಿಳಿಯದೆ ಅಪಾರ್ಥ ಬರುವಂತೆ ಪ್ರಯೋಗಿಸಿದರೆ
ಭಾಷೆ ಸೌಂದರ್ಯ, ಸ್ಪಷ್ಟತೆ ಕಳೆದುಕೊಂಡು ನಿರರ್ಥಕ ವಾಗುತ್ತದೆ.
ಮಾತನಾಡುವ ಪ್ರತಿ ಪದವೂ ವಾಕ್ -ಅರ್ಥದ ಸಮರಸತೆಯಿಂದ
ಕೂಡಿದ್ದರೆ ಚೆನ್ನ.
ಹಳೆಗನ್ನಡ, ಹೊಸಗನ್ನಡ, ನವ್ಯ ,ಬಂಡಾಯ ಮುಂತಾದುವುಗಳು
ಕನ್ನಡ ಭಾಷೆಯ ಬದಲಾವಣೆ ಮತ್ತು ಬೆಳವಣಿಗೆಯನ್ನು ತೋರಿಸುತ್ತವೆ.
ಭಾಷೆಯು ಬೆಳೆಯ ಬೇಕಾದರೆ ಕಟ್ಟುಪಾಡು ವಿಧಿಸಲು ಸಾಧ್ಯವಿಲ್ಲ.
ಆದರೂ ತಪ್ಪು ಪ್ರಯೋಗ ಸ್ವೀಕಾರಾರ್ಹವಲ್ಲ. ಚೌಕಟ್ಟು, ನಿಯಮಗಳನ್ನು
ಮೀರಿದ, ವ್ಯಾಕರಣವಿಲ್ಲದ ಭಾಷೆ ಒಬ್ಬೊಬ್ಬರಿಗೆ ಒಂದೊಂದು
ಅರ್ಥವನ್ನು ಕೊಡಬಹುದು.
–ಯು. ನಾರಾಯಣ ಶರ್ಮ.
ಮಾತು, ಅರ್ಥ ಎರಡೂ ವ್ಯರ್ಥ, ಸ್ವ-ಅರ್ಥವಿರದಿರೆ. –ಕುವೆಂಪು.

2 thoughts on “ಶುದ್ಧ ಭಾಷೆಯ ಮಹತ್ತ್ವ .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s