Uncategorized

ಚಿಂತನ.

೧.೪೬೦ ಕೋಟಿ ವರ್ಷ ಹಳೆಯದಾದ ಈ ಭೂಮಿಯಲ್ಲಿ
೭೦೦ ಕೋಟಿ ಜನರು ಶೇ. ೫೨ರಷ್ಟು ಜೀವಿಗಳನ್ನು ನಿರ್ಮೂಲನೆ
ಮಾಡಿದ್ದಾರೆ. ಭೂಮಿಯನ್ನು ೬ ಬಾರಿ ಧ್ವಂಸ ಮಾಡುವಷ್ಟು
ಪರಮಾಣು ಬಾಂಬ್ ತಯಾರಿಸಿಟ್ಟಿದ್ದೇವೆ. ಭೂಮಿ ತನ್ನೊಳಗೆ
ಬಚ್ಚಿಟ್ಟಿದ್ದ ಪೆಟ್ರೋಲ್, ಡೀಸೆಲ್, coal ಬಗೆದು ತೆಗೆದು
ಪರಿಸರ ಮಲಿನ ಗೊಳಿಸಿದ್ದೇವೆ. –ನಾಗೇಶ ಹೆಗಡೆ (ಪರಿಸರ ತಜ್ಞ).
೨. ವಿಜ್ಞಾನಿ -ನಿಸರ್ಗದಿಂದ ಮೌಲ್ಯ ಭಟ್ಟಿ ಇಳಿಸುವ ಪ್ರಯೋಗ ಚತುರ.
ಕವಿ -ಜೀವನದಿಂದ ಮೌಲ್ಯ ಗ್ರಹಿಸಿ ಸಾರ್ವತ್ರೀಕರಿಸುವ ಶಬ್ದ ಬ್ರಹ್ಮ.
೩. ನವಿಲ ಕಣ್ಣಿಗೆ ಸೊನ್ನೆ ತನ್ನ ಗರಿಗಳ ಕಣ್ಣು.
ಬಳ್ಳಿಗಿದ್ದೂ ಇಲ್ಲ ತನ್ನ ಹಣ್ಣು.
ಕಲ್ಲು ಕಾಣದು ತನ್ನ ಎದೆಯ ಬಂಗಾರವನ್ನು.
೪.ಕಡಿಮೆ ಮಾತು, ಹೆಚ್ಚು ಚಿಂತನೆ ಮಹಾಪುರುಷರ ಲಕ್ಷಣ.
ಮಾತು ಹೆಚ್ಚು ಚಿಂತನೆ ಸೊನ್ನೆ, ರಾಜಕಾರಣಿಗಳ ಗುಣ.-H. ಡುಂಡಿರಾಜ್.
೫. ದೌರ್ಬಲ್ಯ ಇರುವವರೆಗೆ ಶೋಷಣೆ ತಪ್ಪಿದ್ದಲ್ಲ.
ಬಗ್ಗಿದವರಿಗೆ ಗುದ್ದು ಸಹಜ.
೬. ದೇಶ ವಿಭಜನೆಗಿಂತ ವರ್ಗ ವಿಭಜನೆ ಮಾರಕ. ಆಂಗ್ಲರ
ಒಡೆದು ಆಳುವ ನೀತಿಯ ಪರಿಣಾಮವಾಗಿ ದೇಶ ವಿಭಜನೆಯಾಗಿ
ದೇಶದ ಭಾಗವನ್ನು ಕಳೆದು ಕೊಂಡೆವು ಅಂದು. ಆದರೀಗ ಸರ್ಕಾರದ
ವರ್ಗ ವಿಭಜನೆ-ಅಲ್ಪ ಸಂಖ್ಯಾತ, ಬಹು ಸಂಖ್ಯಾತ ಎಂಬ -ನೀತಿಯಿಂದಾಗಿ
ದೇಶದ ಅಸ್ತಿತ್ವವನ್ನೇ ಕಳೆದು ಕೊಳ್ಳುತ್ತಿದ್ದೇವೆ. ಧರ್ಮದ ಹೆಸರಿನಲ್ಲಿ
ಜನರನ್ನು ವಿಭಜಿಸುವುದರಿಂದ ದೇಶದ ಏಕತೆ, ಸಮಾನತೆಗೆ
ಧಕ್ಕೆಯಾಗುತ್ತದೆ. ದೇಶದ ರಕ್ಷಣೆಗಾಗಿ ನಿರ್ಮಿಸಲಾಗುವ ಎಲ್ಲ
ಕೋಟೆಗಳಿಗಿಂತ ಭ್ರಾತೃತ್ವ ಹಾಗೂ ದೇಶಾಭಿಮಾನಗಳಿಂದ
ಒಗ್ಗೂಡಿದ ಜನರು ದೇಶದ ಬಹು ದೊಡ್ಡ ರಕ್ಷಣೆಯ ಕೋಟೆ.
ಸಂವಿಧಾನದ ಮೂಲೋದ್ದೇಶ ಸಮಾನತೆ ಮತ್ತು ಜಾತ್ಯತೀತತೆ.
ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ವರ್ಗದಲ್ಲಿರುವ
ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರ ಏಳಿಗೆಗೆ ವಿಶೇಷ
ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಇದರ ಬದಲು
ಧರ್ಮದ ಆಧಾರದ ಮೇಲೆ ಜನಗಳನ್ನು ವಿಭಜಿಸುತ್ತಾ ತಾರತಮ್ಯ
ಮಾಡಿದರೆ ಭ್ರಾತೃತ್ವ ಭಾವನೆಯಲ್ಲಿ ಬಿರುಕು ಮೂಡುತ್ತದೆ.
ಇದು ಸಂವಿಧಾನದ ಮೂಲ ಆಶಯ ಹಾಗು ರಾಷ್ಟ್ರೀಯ
ಹಿತಾಸಕ್ತಿಗೆ ವಿರುದ್ಧವಾಗಿದೆ.
–ರಾಮಾ ಜೋಯಿಸ್ (ನಿವೃತ್ತ ರಾಜ್ಯಪಾಲರು)
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s