Uncategorized

ಕನ್ನಡ ಸೌರಭ.

೧. ಯಾರೊಂದಿಗೂ ಜಗಳವಾಡ ಬಹುದು. ಯಾರ ಜೊತೆ
ಗಾದರೂ ಮಾತನಾಡದೆ ಇರಬಹುದು. ಯಾರನ್ನಾದರೂ
ನೋಡದಿರಬಹುದು. ಆದರೆ ನಮ್ಮವರ ಉದಾಸೀನದ
ಮೌನವನ್ನು, ತಿರಸ್ಕಾರದ ನಡವಳಿಕೆಯನ್ನು ಸಹಿಸಲಾಗು
ವುದಿಲ್ಲ.
೨. ಯಾರಿಗೆ ನಾವು important ಅಲ್ಲವೋ … ಅವರು ನಮಗೆ
ಕೂಡಾ important ಅಲ್ಲ.
೩. ನೀನು ಭೂಮಿಯ ಮೇಲೆ ಹೆಜ್ಜೆ ಇಡುವಾಗ ಯೋಚಿಸು.
ಇಂದು ಮಣ್ಣು ನಿನ್ನ ಕೆಳಗೆ , ನಾಳೆ ನೀನು ಮಣ್ಣಿನ ಕೆಳಗೆ.
೪. ಆಸೆಗಳಿಗೆ ಅಂತ್ಯವಿಲ್ಲ, ಕನಸುಗಳಿಗೆ ಕಾಸಿಲ್ಲ ,
ಸಮಸ್ಯೆಗಳಿಗೆ ಸಾವಿಲ್ಲ , ಭಾವನೆಗಳಿಗೆ ಬೆಲೆಯಿಲ್ಲ ,
ಬದುಕಿಗೆ ನೆಲೆಯಿಲ್ಲ, ಕಷ್ಟಗಳಿಗೆ ಕಣ್ಣಿಲ್ಲ,ಸಾವು ಬರದೆ
ಇರೋಲ್ಲ , ಅಲ್ಲಿಯ ವರೆಗೂ ಬದುಕಲೇ ಬೇಕಲ್ಲ …
೫. ಹಣ ಮತ್ತು ಆಸ್ತಿ ಸಂಬಂಧಗಳನ್ನು ಛಿದ್ರ ಮಾಡುವುದಲ್ಲದೆ
ಮಾನವನ ಜೀವನದ ಅರ್ಥವನ್ನೇ ಬುಡಮೇಲು ಮಾಡುತ್ತದೆ.
೬. ಜಗತ್ತಿನಲ್ಲಿ ಬಹುತೇಕ ವಸ್ತುಗಳು ಪೆಟ್ಟು ತಗಲುವುದರಿಂದ
ಒಡೆದು ಚೂರು ಚೂರಾಗುತ್ತವೆ. ಆದರೆ ಮಾನವ ಏಕೈಕ ಜೀವಿ
ಅವನು ಜೀವನದಲ್ಲಿ ಎಷ್ಟು ಹೆಚ್ಚು ಪೆಟ್ಟು ತಿನ್ನುತ್ತಾನೋ
ಅಷ್ಟೇ ಪರಿಪಕ್ವಗೊಳ್ಳುತ್ತಾನೆ.
೭. ನಂಬಿಕೆಯೊಂದು ಕನ್ನಡಿಯಿದ್ದ ಹಾಗೆ;ಒಮ್ಮೆ ಒಡೆದರೆ
ಕೂಡಿಸಲಾಗದು.
೮. ಹಣ ಇದ್ರೆ ವೈರಿಗಳು ಹೆಚ್ಚಾಗುತ್ತಾರೆ, ಹಣ ಇಲ್ದೇ ಇದ್ರೆ
ನಮ್ಮವರೇ ವೈರಿಗಳಾಗುತ್ತಾರೆ.
೯. ಸುಮ್ಮನೆ ನಗಬಹುದು, ಆದರೆ ಸುಮ್ಮನೆ ಅಳಲಾರಿರಿ.
ಅಳು ಬರುವುದು ನಿಮ್ಮ ಭಾವನೆಗಳಿಗೆ ಬಲವಾಗಿ ಪೆಟ್ಟು
ಬಿದ್ದಾಗ ಮಾತ್ರ.
೧೦. ಜೀವನ ”ಅಗ್ಗ”ವಾಗಿಯೇ ಇರುತ್ತದೆ. ಆದರೆ ನಾವು
ಜೀವಿಸುವ ಕ್ರಮಗಳು ದುಬಾರಿಯಾಗಿರುತ್ತವೆ.
೧೧. ಮನಸೆ೦ಬ ಬರಡು ಭೂಮಿಗೆ ಸ್ನೇಹವೆಂಬ ತುಂತುರು
ಮಳೆ ಹನಿ ಬಿದ್ದಾಗ ಹೃದಯದ ಒಳಗೊಂದು ಅಮೃತ
ಸಿಂಚನ. ಅದೇನು ಗೊತ್ತೇ ?ಅದೇ ಸುಂದರ ಗೆಳೆತನ.
೧೨. ಇವತ್ತು ನಾನು ಕೇಳಿಯೇ ಬಿಟ್ಟೆ, ನನ್ನ ನೆರಳಿಗೆ ”ನನ್ನ
ಹಿಂದೆ ಯಾಕೆ ಬರುತ್ತೀಯಾ ?”ಅಂತ. ನೆರಳು ನಗುತ್ತಾ
ಹೇಳಿತು … ”ಮತ್ತೆ ಯಾರು ಇದ್ದಾರೆ ನಿನ್ನ ಜೊತೆ ?”
೧೩. ಸುರಿವ ಕಣ್ಣೀರಿಗೆ ತಿಳಿಯದು ಮನಸಿನ ನೋವು ;
ಆಡಿದ ಮಾತಿಗೆ ತಿಳಿಯದು ಮಾಡಿದ ಘಾಯ ;
ಕಾಡಿದ ನೆನಪಿಗೆ ತಿಳಿಯದು ಕೊಟ್ಟ ದುಃಖ
ತಿಳಿಯಬೇಕಾದವರೇ ತಿಳಿಯದಿರೆ …..
೧೪. ಹೊಗಳಿಕೆಯ ಮಾತನ್ನಾಡುವವರು ಎರಡು ರೀತಿಯ
ಜನರಿರುತ್ತಾರೆ. ಕೆಲವರು ಇನ್ನೊಬ್ಬರ ಸಾಧನೆಯನ್ನು
ಮೆಚ್ಚಿ ಹೃದಯಪೂರ್ವಕವಾಗಿ ಹೊಗಳುವಂತವರು;
ಇನ್ನು ಕೆಲವರು ಹೊಗಳಿಕೆಯ ಅಸ್ತ್ರ ಉಪಯೋಗಿಸಿ ತಮ್ಮ
ಕಾರ್ಯ ಸಾಧಿಸಿಕೊಳ್ಳಲು ಸಂಚು ರೂಪಿಸುವ, ನಾಟಕ
ವನ್ನಾಡುವಸ್ವಾರ್ಥಿ ಹೊಗಳು ಭಟ್ಟರು. -ಬಿ. ಲೋಕೇಶ್.
೧೫.ನಾವು ಕೇಳದೆಯೇ ಸಹಜವಾಗಿ ದೊರೆಯುವುದು
ಹಾಲಿಗೆ ಸಮಾನ. ಇನ್ನೊಬ್ಬರನ್ನು ಕಾಡಿ ಪಡೆದದ್ದು ನೀರಿಗೆ
ಸಮಾನ. ಇನ್ನೊಬ್ಬರಿಂದ ಕಿತ್ತು ಕೊಂಡದ್ದು ರಕ್ತಕ್ಕೆ ಸಮಾನ.
೧೬. ಜಿನುಗುವ ಮಳೆಯಲ್ಲೂ ಕಣ್ಣೀರನ್ನು ಗುರುತಿಸುವವನೇ
ನಿಜವಾದ ಸ್ನೇಹಿತ.
೧೭. ಒಳ್ಳೆಯ ಸಮಯಕ್ಕಿಂತ ಒಳ್ಳೆಯ ಮನುಷ್ಯನ ಸಂಬಂಧವಿರಲಿ.
ಏಕೆಂದರೆ ಒಳ್ಳೆಯ ಮನುಷ್ಯ ಒಳ್ಳೆಯ ಸಮಯವನ್ನು ತರಬಲ್ಲ.
… ಆದರೆ ಒಳ್ಳೆಯ ಸಮಯವು ಒಳ್ಳೆಯ ಮನುಷ್ಯನನ್ನು
ತರಲಾರದು.
೧೮. ನೀ ಕೋಪದಿಂದ ಆಡಿದ ಮಾತು ನೀ ಹಿಂಪಡೆಯಲು
ಸಾಧ್ಯವೇ?ಅಥವಾ ನಾ ಹಿಂದಿರುಗಿಸಲು ಸಾಧ್ಯವೇ ?
ನೀನಾಡಿದ ಮಾತಿಗೆ, ಮಾಡಿದ ಗಾಯಕ್ಕೆ ಪಶ್ಚಾತ್ತಾಪದಿಂದ
ನೀ ಮುಕ್ತಳಾಗಬಹುದು. ಆದರೆ ಕೇಳಿದ ಕಿವಿ, ನೊಂದ
ಮನಸ್ಸಿಗೆ ಸಿಗುವುದೇ ಸಾಂತ್ವನ?
೧೯. ಕೆಲವು ಸಂಬಂಧಗಳು ಮುರಿದು ಹೋಗಲು ಮುಖ್ಯವಾದ
ಕಾರಣಗಳೆಂದರೆ, ಒಬ್ಬರು ಸರಿಯಾಗಿ ಮಾತನಾಡದಿರುವುದು,
ಇನ್ನೊಬ್ಬರು ಸರಿಯಾಗಿ ಅರ್ಥಮಾಡಿ ಕೊಳ್ಳದಿರುವುದು.
೨೦. ಅತಿಯಾಗಿ ಪರಾವಲಂಬನೆಯಾಗುವುದು ಬೇಡ;
ಯಾಕೆಂದರೆ ಮುಂದೊಂದು ದಿನ ನಾವು ಏಕಾಂಗಿಯಾಗಿಯೇ
ನಡೆಯಬೇಕು.
ಮೂಲ:Facebook Quotes.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s