Uncategorized

ನಿಮಗೆ ಗೊತ್ತೇ ?

೧. ಸಂಗೀತಕ್ಕೆ ರೋಗದಮನ ಶಕ್ತಿ ಇದೆ.
ಸಂದು ನೋವಿಗೆ——-ಭೈರವಿ.
ತಲೆ ನೋವಿಗೆ ———-ದರ್ಬಾರಿ ಕಾನಡಾ.
ಕೆಮ್ಮಿಗೆ ——————ಗುಜಾರಿ ತೋಡಿ.
ಕರುಳಿನ ವಾಯು ಪ್ರಕೋಪಕ್ಕೆ —ಮಾಲ ಕಂಸ.
ಅಜೀರ್ಣಕ್ಕೆ ————-ದೀಪಕ.
ಕ್ಷುಧಾನಾಶಕ್ಕೆ ———–ಚಂದ್ರ ಕಂಸ.
ಮಲಬದ್ಧತೆಗೆ ————ಜೌನ್ ಪುರಿ.
ಅತಿಸಾರಕ್ಕೆ ————–ಜೈ ಜೈವಂತಿ ರಾಗ —–ಶಮನಕಾರಿ.
–ಕೊಳಲು ವಾದಕ ರೋಹಿತ್ ಆನಂದ್ -Hindustan Times.
೨. ”ವೀಸಾ” ಎಂಬುದು French ಪದ. ವಿದೇಶ ಪ್ರಯಾಣ
ಅನುಮತಿ ಪತ್ರ ಎಂದು ಅರ್ಥ.
೩. ರೋಮನ್ ಸಾಮ್ರಾಟ್ ಚಾರ್ಲ್ಸ್, ಸುಧಾರಣಾವಾದಿ ಮಾರ್ಟಿನ್
ಲೂಥರ್ ನನ್ನು ಜರ್ಮನ್ ಅರಸರಲ್ಲಿ ಯಾರೂ ಬೆಂಬಲಿಸ
ಬಾರದೆಂದು ೧೫೨೯ರಲ್ಲಿ ಆದೇಶ ನೀಡಿದ. ಅದನ್ನೊಪ್ಪದ
ಅವರೆಲ್ಲ ಒಟ್ಟಾಗಿ ಒಂದು ಪ್ರತಿಭಟನೆಯನ್ನು ಚಕ್ರವರ್ತಿಗೆ
ಸಲ್ಲಿಸಿದರು. ಆ ಬಳಿಕ ಮಾರ್ಟಿನ್ ಲೂಥರ್ ನನ್ನು ಬೆಂಬಲಿಸಿ
ದವರಿಗೆಲ್ಲProtestants ಎಂಬ ಹೆಸರು ಬಂತು.
೪.Greek ದೊರೆ ಅಲೆಕ್ಸಾಂಡರ್ ಗೆ ದೃಷ್ಟಿ ದೋಷವಿತ್ತು.
ಯಾವುದೋ ಯುದ್ಧದಲ್ಲಿ ಕಣ್ಣಿಗಾದ ಘಾಯದಿಂದಾಗಿ ನೇರವಾಗಿ
ನೋಡಲಾರದವನಾಗಿದ್ದ. ಲಂಡನ್ ನ Western ಆಸ್ಪತ್ರೆಯ
ಕಣ್ಣಿನ ತಜ್ಞರು ಈತನ ಕಣ್ಣು ತಿರುಚಿದೆಯೆಂದು ವೈಜ್ಞಾನಿಕವಾಗಿ
ನಿರೂಪಿಸಿದ್ದಾರೆ. ಶಿಲ್ಪಿ ಅಸಿಪಸ್ ವಿನ್ಯಾಸಗೊಳಿಸಿದ ಪ್ರತಿಮೆ
ಈ ನಿರ್ಧಾರಕ್ಕೆ ಕಾರಣ.
೫. Soya Beans ನ್ನು ಆಹಾರಕ್ಕಾಗಿ, ಗೋಂದು, Paint, Plastic
ಹಾಗು ಸ್ಫೋಟಕದ ತಯಾರಿಕೆಯಲ್ಲಿ ಬಳಸುತ್ತಾರೆ.
೬. ನಮ್ಮ ದೇಹದಿಂದ ಹೊರ ಬೀಳುವ ಶಾಖದ ಅರ್ಧ ಭಾಗ
ತಲೆಯಿಂದಲೇ ಹೊರಕ್ಕೆ ಹೋಗುತ್ತದೆ.
೭. ಕೈಫಿಯತ್ತು-ಅರಬ್ಬೀ ಶಬ್ದ-ಅಂದರೆ ಸ್ಥಳ ಪುರಾಣ ಕುರಿತ ಲಿಖಿತ
ದಾಖಲೆ.
೮. ಬಿಳಿ ಬಣ್ಣದ ವಸ್ತುವಿನ ಮೇಲೆ ಬಿಸಿಲು ಬಿದ್ದಾಗ ಕಿರಣಗಳು ವಾಪಸ್
ಪ್ರತಿಫಲನ ಗೊಳ್ಳುತ್ತವೆ. ಆದರೆ ಕಪ್ಪು ಬಣ್ಣ ಹೊಂದಿರುವ ವಸ್ತುವಿನ
ಮೇಲೆ ಬೀಳುವ ಕಿರಣಗಳು ಹೀರಲ್ಪಡುತ್ತವೆ. ಈ ಕಾರಣದಿಂದಾಗಿ
ಕಪ್ಪು ಬಟ್ಟೆ ಧರಿಸಿದರೆ ಸೆಖೆ ಜಾಸ್ತಿ.
೯. ”ಚೀರ” ಎಂಬ ಸಂಸ್ಕೃತ ಪದದ ತದ್ಭವ ರೂಪವೇ ”ಸೀರೆ ”.
”ಚಿ ”ಅಂದರೆ ಜೋಡಿಸು, ”ನೇಯು ” ಎಂದು ಅರ್ಥ.
೧o. ಎಲ್ಲಿಯ ವರೆಗೆ ನಾವು ಗುರುತ್ವಾಕರ್ಷಣ ಬಲಕ್ಕೆ ವಿರುದ್ಧವಾಗಿ
ಬಲ ಪ್ರಯೋಗಿಸಲು ಯಶಸ್ವಿಯಾಗುತ್ತೇವೆಯೋ ಅಲ್ಲಿಯವರೆಗೆ
ಮಾತ್ರ ನಾವು ಅಷ್ಟೇ ಪ್ರಮಾಣದ ಭಾರವನ್ನು ಎತ್ತಲು ಸಾಧ್ಯ.
ಅದಕ್ಕೂ ಮೀರಿದ ಭಾರದ ವಸ್ತುವನ್ನು ಎತ್ತಲು ಯತ್ನಿಸಿದರೆ
ಕುಸಿದು ಬೀಳ ಬೇಕಾಗುತ್ತದೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s