Uncategorized

ಸುಭಾಷಿತಗಳು.

೧. ದೋಣಿಗೆ ನೀರು ನುಗ್ಗದ ಹೊರತು ಮುಳುಗಲು ಸಾಧ್ಯವಿಲ್ಲ.
ಹಾಗೆಯೇ ನಕಾರಾತ್ಮಕ ಭಾವನೆಗಳು ನುಗ್ಗದಂತೆ ಎಚ್ಚರಿಕೆ ವಹಿಸಿ.
೨. ನೀವು ಧೈರ್ಯದಿಂದ ಇದ್ದಷ್ಟೂ ಜೀವನ ಅರಳುತ್ತದೆ.
ಧೈರ್ಯಗುಂದಿದರೆ ಬದುಕು ಕೂಡ ಮುದುಡುತ್ತದೆ.
೩ಸ್ವಾವಲಂಬನೆ ಸುಖಕರ, ಪರಾವಲಂಬನೆ ದುಃಖಕರವಾಗಿದೆ.
೪. ಮಲವಿರದ ಮೈ ಯಿರದು, ಕೊಳೆ ಇರದ ಮನವಿರದು. -ಡಿ. ವಿ. ಜಿ.
೫. ಈ ಜಗತ್ತಿಗೆ ಬಿಸಿ ತಲೆಗಳಿಗಿಂತ ತಂಪಾದ ಹೃದಯಗಳ
ಅಗತ್ಯ ಹೆಚ್ಚಾಗಿದೆ.
೬. ಜೋರಾಗಿ ಮಾತಾಡಿದಾಗ ಸುಮ್ಮನಿರು ಅಂದವರೇ, ಸುಮ್ಮನಿದ್ದಾಗ
ಏನಾಗಿದೆ ಅಂತ ಕೇಳ್ತಾರೆ.
೭. ಕಡಲಿನ ಎದುರಿಗೆ ಹನಿಗೆ ಅದೆಂಥಾ ಪ್ರದರ್ಶನ ?
೮. ಅಂದಿನವರು ”ಗುರುವೇ ನಮಃ” ಎನ್ನುತ್ತಿದ್ದರು. ಈಗಿನವರು
”ಗುರು ಏನು ಮಹಾ?” ಅಂತಾರೆ.
೯. ಮಾತಿಗೆ ಮಾತು ಸೇರಿದರೆ ನುಡಿ; ತಾಕಿದರೆ ಕಿಡಿ . ನೆನಪಿಡಿ.
೧೦. ನಗು ಮತ್ತು ಮೌನ ಪ್ರಭಾವಿ ಅಸ್ತ್ರ. ನಗು ಸಮಸ್ಯೆಯನ್ನು
ಪರಿಹರಿಸುತ್ತದೆ. ಮೌನ ಸಮಸ್ಯೆಯನ್ನು ತಪ್ಪಿಸುತ್ತದೆ.
೧೧. ಮನುಷ್ಯ ಆನಂದಮಯವಾಗಿ ಜೀವಿಸಲು ಭುವಿಗೆ ಬಂದಿದ್ದಾನೆ.
ಹಾಗಾಗಿ ಬದುಕನ್ನು ಸಂತಸದಿಂದ ಸಾಗಿಸಬೇಕು. -ಡಾ. S. ರಾಧಾಕೃಷ್ಣನ್.
೧೨. ರೂಢಿಯಲ್ಲಿರುವ ಪ್ರತಿಯೊಂದು ಸಂಸ್ಕಾರದ ಹಿಂದೆಯೂ
ಒಂದು ವಿಜ್ಞಾನವಿದೆ. ಅದನ್ನು ಅರ್ಥಮಾಡಿಕೊಂಡಾಗ ಮಾತ್ರವೇ
ಆಚರಣೆಗೆ ಬೆಲೆ ಬರುತ್ತದೆ.
೧೩. ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ ?
೧೪. ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿಸಿ ಮನುಷ್ಯತ್ವ
ನಿರ್ಮಾಣ ಮಾಡುವುದೇ ನಿಜವಾದ ವಿದ್ಯಾಭ್ಯಾಸ. .
೧೫.ಸುತ್ತಿಗೆಯನ್ನು ಮಾತ್ರ ಹಿಡಿದು ಹೊರಟವನಿಗೆ ಪ್ರಪಂಚದ
ಎಲ್ಲ ವಸ್ತುಗಳೂ ಮೊಳೆಗಳಂತೆಯೇ ಕಾಣುತ್ತವಂತೆ.
೧೬. ರಾಮನಿಗಿದ್ದುದು ಲೋಕಾರಾಧನೆಯ ಚಿಂತೆ; ಇಂದಿನವರಿಗೋ
ಪೀಠಾರಾಧನೆಯ ಚಿಂತೆ.
೧೭.ಇರುವುದು ಒಂದೇ ಧರ್ಮ; ಅದುವೇ ಪ್ರೇಮ ಧರ್ಮ– ಪುಟ್ಟುಪರ್ತಿ
ಸಾಯಿಬಾಬ
೧೮. ನಮ್ಮ ಯೋಚನೆಗಳು ವಾಸ್ತವಕ್ಕೆ ತೆರೆದು ಕೊಳ್ಳುವಂತಿರಬೇಕು.
ಅತಿಯಾದ ನಿರೀಕ್ಷೆ ನಿರಾಸೆಯ ಮೊತ್ತವನ್ನು ಹೆಚ್ಚಿಸುತ್ತದೆ.
೧೯. ಹಠದಿಂದ ಬುದ್ಧಿ ಕುಂಠಿತ.
೨೦. ಕೋಪ ಬಂದಾಗ ಕೈಗೊಳ್ಳುವ ನಿರ್ಧಾರಗಳು, ಬಿರುಗಾಳಿ ಎದ್ದಾಗ
ದೋಣಿಯಲ್ಲಿ ಸಮುದ್ರಯಾನ ಕೈಗೊಂಡಂತೆ.
ಮೂಲ:ಸಂಗ್ರಹ. .

2 thoughts on “ಸುಭಾಷಿತಗಳು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s