Uncategorized

ಕನ್ನಡ ಸೌರಭ .

೧. ಮರದ ಸೌದೆಗಳಲ್ಲಿ ಅಡಗಿರುವ ಬೆಂಕಿಯನ್ನು ದಾಟಿಬಿಡ ಬಹುದು.
ಆದರೆ ಬೆಂಕಿ ಪ್ರಜ್ವಲಿಸುವಾಗ ದಾಟುವುದು ಅಸಾಧ್ಯವೇ ಸರಿ.
೨. ಬದುಕೆನ್ನುವುದು ಜೋಕಾಲಿಯಲ್ಲ;ಜಾರು ಬಂಡಿ.
೩.ಪಾತ್ರೆಯ ಆಕಾರ ಬದಲಾದರೆ ನೀರಿನ ರೂಪ ಬದಲಾಗುವುದಿಲ್ಲ.
ವಿಗ್ರಹ ಬದಲಾದರೆ ಭಗವಂತನು ರೂಪಾಂತರ ಹೊಂದಲಾರ.
ಕಟ್ಟಿಗೆಯ ಆಕಾರ ಬದಲಾದರೆ ಅಗ್ನಿಯ ರೂಪ ಬದಲಾಗುವುದಿಲ್ಲ .
ಆರ್ಥಿಕ, ರಾಜಕೀಯ,ಸಾಮಾಜಿಕ ಪರಿಸ್ಥಿತಿಗಳಲ್ಲಿ ಪರಿವರ್ತನೆಯಾದರೂ
ಜೀವನದ ಮೌಲ್ಯಗಳು ಬದಲಾಗುವುದಿಲ್ಲ.
೪. ಇಡೀ ಮಾನವ ಕುಲಕೋಟಿಗೆ ಅನುಕಂಪ ಮತ್ತು ಪ್ರೀತಿ ತೋರಿಸುವುದೇ
ನಿಜವಾದ ಧರ್ಮ. ಧರ್ಮದ ರಹಸ್ಯ ಇರುವುದು ತತ್ತ್ವಗಳಲ್ಲಲ್ಲ ,
ಆಚರಣೆಯಲ್ಲಿ ಎಂಬುದನ್ನು ಯಾರೂ ಮರೆಯಬಾರದು.
೫. ದೇವರ ಮನೆಯಿದು ಈ ಜಗವೆಲ್ಲ ,ಬಾಡಿಗೆದಾರರು ನಾವುಗಳೆಲ್ಲ.
೬. ಪಾಪ ಕ್ಷಯಿಸಲಿ ಎಂದು ಗಂಗೆಯಲಿ ಮೀಯಲು ಹೋದವನ
ಮೊಸಳೆ ತಿಂದಂತೆ.
೭. ಕರಿಗಳನು ಮುರಿದಿಡುವ ಸಿಂಹಕ್ಕೆ ನರಿಗಳಿದಿರೆ ?
೮. ಬಲ ಉಡುಗಿದರೂ ಛಲ ಉಡುಗದಿರಲಿ.
ಕೀರ್ತಿ ಹೋದರೂ ಸ್ಫೂರ್ತಿ ಇರಲಿ.
ಅಷ್ಟಐಶ್ವರ್ಯ ಹೋದರೂ ಧೈರ್ಯ ಉಡುಗದಿರಲಿ
ಜನರಲ್ಲಿ ವಿಶ್ವಾಸ ಹೋದರೂ ಆತ್ಮ ವಿಶ್ವಾಸ ಇರಲಿ.
೯.ಬಿದಿರು ಕೊಳಲು ಆಗಲು, ಉಕ್ಕು ಉಳಿಯಾಗಲು,
ಮಣ್ಣು ಅನ್ನವಾಗಲು , ಹತ್ತಿ ವಸ್ತ್ರ ಆಗಲು ಸಂಸ್ಕಾರ ಬೇಕು.
೧೦. ಸಹಜೀವಿಗಳ ಬಗ್ಗೆ ಅಸಮಾಧಾನ ಇರುವಲ್ಲಿ ಸಂತೋಷ ಇರಲ್ಲ.
ಮೂಲ :ಸಂಗ್ರಹ.

Advertisements

2 thoughts on “ಕನ್ನಡ ಸೌರಭ .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s