Uncategorized

ಕನ್ನಡ ಸುಭಾಷಿತಗಳು.

೧. ಶತ್ರುವಿಗಿಂತ ಅಸೂಯೆ ತುಂಬಿದ ಸ್ನೇಹಿತ ತುಂಬಾ
ಅಪಾಯಕಾರಿ.
೨.ನಮ್ಮಿಂದ ಇನ್ನೊಬ್ಬರನ್ನು ನಗಿಸಲಾಗದಿದ್ದರೂ, ಇನ್ನೊಬ್ಬರ
ಅಳುವಿಗೆ ಕಾರಣರಾಗದೇ ಇರಬಹುದು.
೩. ಬದುಕು ತುಂಬಾ ಸಣ್ಣದು. ನಿಮಗೆ ಗೌರವ ಕೊಡದಿರುವ
ವ್ಯಕ್ತಿಗಳ ಬಗ್ಗೆ ಯೋಚಿಸುತ್ತ, ಬೇಸರಿಸುತ್ತ ಸಮಯ ಹಾಳು
ಮಾಡಬೇಡಿ. ಅದನ್ನು ನಿಮ್ಮನ್ನು ಪ್ರೀತಿಸುವವರಿಗೆ ಕೊಡಿ.
೪. ಯಾರೂ ನಿರಂತರ ನಮ್ಮ ಜೊತೆ ಇರಬಹುದೆಂದು ನಿರೀಕ್ಷೆ
ಹೊಂದಿರ ಬಾರದು. ಯಾಕೆಂದರೆ ಕತ್ತಲಾಗುತ್ತಿದ್ದಂತೆ ನಮ್ಮ
ನೆರಳೇ ನಮ್ಮನ್ನು ಬಿಟ್ಟು ಹೋಗುವುದಿಲ್ಲವೇ ?
೫. ಒಬ್ಬರ ಬಗ್ಗೆ ಒಳ್ಳೇದು ಹೇಳ್ದೇ ಇದ್ರೂ ಪರವಾಗಿಲ್ಲ; ಕೆಟ್ಟದಾಗಿ
ಮಾತ್ರ ಹೇಳಬೇಡಿ. Time Pass ಗೆ ಮಾಡೋ comment ನಿಂದ
ಕೆಲವರ ಜೀವನ ದುರಂತದಲ್ಲಿ ಅಂತ್ಯ ಆಗಬಹುದು.
ಯೋಚನೆ ಮಾಡಿ ….।
೬. ಸಿರಿತನದಲ್ಲೂ,ಬಡತನದಲ್ಲೂ ಏಕರೀತಿಯಾಗಿ ಜೊತೆಯಲ್ಲಿ
ನಿಲ್ಲುವವರೇ ನಿಜವಾದ ಸ್ನೇಹಿತರು.
೭.ಸ್ನೇಹ, ವಿಶ್ವಾಸ, ಪ್ರೀತಿ ಪ್ರಪಂಚದಲ್ಲಿ ತಾನಾಗೇ ಒಲಿದು
ಬರಬೇಕು. ಯಾವುದೇ ಒತ್ತಡ, ಒತ್ತಾಯದಿಂದ ಯಾವುದೂ
ಸಿಗುವುದಿಲ್ಲ.
೮. ಯಾರನ್ನಾದರೂ ನಮ್ಮವರಾಗಿಸಿ ಕೊಳ್ಳುತ್ತೇವೆ ಯೆಂದರೆ
ಅದು ಹೃದಯದಿಂದಿರಲಿ, ನಾಲಿಗೆಯಿಂದಲ್ಲ. ಹಾಗೆಯೇ ಯಾರ
ಮೇಲಾದರೂ ಕೋಪಿಸಿಕೊಳ್ಳುತ್ತೇವೆಂದಾದರೆ, ಅದು ಕೇವಲ
ನಾಲಿಗೆಯಿಂದಿರಲಿ, ಹೃದಯದಿಂದಲ್ಲ.
೯. ಆತ್ಮೀಯ ಸ್ನೇಹಿತರ ನಡುವೆ ಅಥವಾ ಗಾಢ ಸಂಬಂಧದ ಮಧ್ಯೆ
ಆಕಸ್ಮಿಕವಾಗಿ ಭಿನ್ನಾಭಿಪ್ರಾಯ ಬಂದು ನಡುವೆ ಬಿರುಕು ಮೂಡಿದಾಗ
ಅದನ್ನು ಸರಿಮಾಡುವವರಿಗಿಂತ ಹಾಳು ಮಾಡೋರೇ ಜಾಸ್ತಿ.
೧೦. ಮನಸ್ಸಿನಲ್ಲಿ ಇರೋ ಅಹಂಕಾರ ಕಣ್ಣಿನಲ್ಲಿ ಬಿದ್ದ ಧೂಳಿನಂತೆ.
ಅದನ್ನು ಸ್ವಚ್ಛ ಗೊಳಿಸದಿದ್ದರೆ ನಾವು ನೋಡುವ ಪ್ರತಿಯೊಂದು
ವಸ್ತು ಕೂಡ ಅಶುದ್ಧವಾಗಿ ಕಾಣಿಸುತ್ತದೆ.
೧೧. ಸದಾ ನಿನ್ನ ಮನಸ್ಸು ಶಕ್ತಿಪೂರ್ಣವಾಗಿರುವಂತೆ ನೋಡಿಕೋ.
ನಿನ್ನ ಮಾತುಗಳಲ್ಲೂ ಸದಾ ಶಕ್ತಿಯೇ ಚಿಮ್ಮುತ್ತಿರಲಿ.ನಾನು ದುರ್ಬಲ,
ನನ್ನ ಕೈಲೇನಾದೀತು ಎಂದು ಹೇಳಿಕೊಳ್ಳುತ್ತಲೇ ಇದ್ದರೆ, ಮನುಷ್ಯ
ಕೈಲಾಗದವನೇ ಆಗುತ್ತಾನೆ, ಕಸಕ್ಕಿಂತ ಕಡೆಯಾಗುತ್ತಾನೆ.
೧೨. ಯಾರನ್ನಾದರೂ ಬೈಯುವುದಕ್ಕಾಗಲಿ, ತಿರಸ್ಕರಿಸುವುದಕ್ಕಾಗಲೀ,
ಆಕ್ಷೇಪಿಸುವುದಕ್ಕಾಗಲಿ ನಮಗೆ ನಮ್ಮದೇ ಆದ ಯೋಗ್ಯತೆ ಇರಬೇಕು.
೧೩. ಪ್ರೀತಿ,ಸತ್ಯ, ಕಾಳಜಿ, ನಿಸ್ವಾರ್ಥ ತುಂಬಿದ ಮಾತುಗಳು ಈ ಜಗತ್ತನ್ನು
ಕ್ಷಣಾರ್ಧದಲ್ಲಿ ಬದಲಿಸಬಲ್ಲವು.
೧೪. ಅಪರಿಚಿತರ ಗದ್ದಲಕ್ಕಿಂತ ಪ್ರೀತಿಪಾತ್ರರ ಮೌನ ಹೆಚ್ಚು ಘಾಸಿ
ಗೊಳಿಸುತ್ತದೆ. ಆರೋಗ್ಯಪೂರ್ಣ ಸಂಬಂಧದ ಉಳಿಕೆಗೆ ನಿರಂತರ
ಸಂವಹನ ಅಗತ್ಯ.
೧೫.ಒಂದು ನಿಮಿಷದಲ್ಲಿ ಯಾರ ಬದುಕೂ ಬದಲಾಗುವುದಿಲ್ಲ.
ಆದರೆ ಆ ಸಮಯದಲ್ಲಿ ತೆಗೆದುಕೊಂಡ ಒಂದು ಒಳ್ಳೆಯ ನಿರ್ಧಾರ
ಬದುಕನ್ನೇ ಬದಲಾಯಿಸುತ್ತದೆ.
೧೬. ಎಷ್ಟು ಸಮಯದಿಂದ ಪರಿಚಯವಿದ್ದೀರಿ ಎನ್ನುವುದು ಗೆಳೆತನವಲ್ಲ.
ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಎನ್ನುವುದೇ ನಿಜವಾದ
ಗೆಳೆತನ.
೧೭. ಆಗಿ ಹೋಗಿರುವುದನ್ನು ಸರಿಪಡಿಸಲು ಪ್ರಯತ್ನಿಸಬೇಡ. ಅದು
ಅಸಾಧ್ಯ. ಮುಂದೆ ಮಾಡಬೇಕಾದುದನ್ನು ಸರಿಯಾದ ರೀತಿಯಲ್ಲಿ
ಯೋಚಿಸಿ ಮಾಡು. ಅದು ಸಾಧ್ಯ.
೧೮. ಯಾರನ್ನೇ ಆಗಲಿ ಸೋಲಿಸಲು ಪ್ರಯತ್ನಿಸುವುದಕ್ಕಿಂತ ಎಲ್ಲರ
ಹೃದಯ ಗೆಲ್ಲಲು ಯತ್ನಿಸಬೇಕು. ಸೋಲಿಸುವ ಸುಖಕ್ಕಿಂತ ಗೆಲ್ಲುವ
ಖುಷಿ ದೊಡ್ಡದು.
೧೯. ನೊಣಗಳು ನಮ್ಮ ಸುಂದರವಾದ ಇಡೀ ದೇಹವನ್ನು ಬಿಟ್ಟು
ಗಾಯದ ಮೇಲೆಯೇ ಕುಳಿತುಕೊಳ್ಳುವ ಹಾಗೆ ಕೆಲವರು ನಮ್ಮಲ್ಲಿರುವ
ಸದ್ಗುಣಗಳನ್ನು ತಳ್ಳಿಹಾಕಿ, ಲೋಪ-ದೋಷಗಳನ್ನು ಮಾತ್ರ ಗಮನಿಸುತ್ತಾರೆ.
ಚಿಂತಿಸದಿರಿ. ಹುಡುಕುವವರು ಏನಾದರೂ ಹುಡುಕಿಕೊಂಡು ಇರಲಿ.
ನಮಗೆ ನಮ್ಮತನದ ಅರಿವಿರಲಿ. ನಮ್ಮ ಅಂತರಾಳ ಯಾವಾಗಲೂ
ಒಳ್ಳೆಯದು ಬಯಸಲಿ.
೨೦. ಸಾಧನೆಯ ಹಾದಿಯಲ್ಲಿ ಸೋಲುಗಳು ಬಂದರೆ, ಊಟದಲ್ಲಿ
ಕಲ್ಲುಗಳು ಬಂದಂತೆ. ಊಟದಲ್ಲಿನ ಕಲ್ಲುಗಳನ್ನು ತೆಗೆಯಬೇಕೇ
ವಿನಃ ಊಟವನ್ನೇ ಬಿಡಬಾರದು.
ಮೂಲ:Facebook quotes.

2 thoughts on “ಕನ್ನಡ ಸುಭಾಷಿತಗಳು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s