Uncategorized

ಕನ್ನಡ ಸೌರಭ.

೧.ಮೋಜಿನ ಗಣಿತ.
೧೧ x ೧೧=೧೨೧.
೧೧೧ x ೧೧೧=೧೨೩೨೧.
೧೧೧೧ x ೧೧೧೧=೧೨೩೪೩೨೧.
೧೧೧೧೧ x ೧೧೧೧೧=೧೨೩೪೫೪೩೨೧.
೧೧೧೧೧೧ x ೧೧೧೧೧೧=೧೨೩೪೫೬೫೪೩೨೧.
೧೧೧೧೧೧೧ x ೧೧೧೧೧೧೧=೧೨೩೪೫೬೭೬೫೪೩೨೧.
೧೧೧೧೧೧೧೧ x ೧೧೧೧೧೧೧೧=೧೨೩೪೫೬೭೮೭೬೫೪೩೨೧.
೧೧೧೧೧೧೧೧೧ x ೧೧೧೧೧೧೧೧೧= ೧೨೩೪೫೬೭೮೯೮೭೬೫೪೩೨೧.
೨.ಅಧ್ಯಾತ್ಮ ಸೌರಭ.
ಭವಿಷ್ಯದಲ್ಲಿ ಏನಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದದ್ದೇ ಆದಲ್ಲಿ
ಜೀವನ ಪಥ ದುರ್ಗಮವಾಗುತ್ತಿತ್ತು. ಸಹಜ ಜೀವನ ಅಸಾಧ್ಯವಾಗುತ್ತಿತ್ತು.
ಹೀಗಾಗಿ ಭಗವಂತ ಕರುಣೆಯಿಂದ ತನ್ನಿಂದ ಸೃಷ್ಟಿಸಲ್ಪಟ್ಟ ಜೀವಿಗಳಿಂದ
ಭವಿಷ್ಯವನ್ನು ಅಡಗಿಸಿ, ವರ್ತಮಾನವನ್ನಷ್ಟೇ ಹೊರಗೆಡಹುತ್ತಾನೆ.
ಆದುದರಿಂದ ಭವಿಷ್ಯದ ಅಂಧತ್ವ ನಮಗೆ ನಿಜಕ್ಕೂ ಒಂದು ವರವೇ.
ತುಸು ಹೊತ್ತಿನಲ್ಲಿ ವಧಿಸಲ್ಪಡುವ ಕುರಿಮರಿಗೆ ಆ ವಿಚಾರ ತಿಳಿಯದ್ದರಿಂದ
ತಳಿರನ್ನು ಆನಂದದಿಂದ ಆಸ್ವಾದಿಸಲು ಸಾಧ್ಯವಾಗುತ್ತದೆ.
ನಗೆ ಹನಿ.
೧. ಒಂದು ಲಾರಿಯನ್ನು ಇನ್ನೊಂದು ಲಾರಿಗೆ ಎರಡು ಹಗ್ಗಗಳ ಮೂಲಕ
ಕಟ್ಟಿ ಎಳೆದೊಯ್ಯುತ್ತಿದ್ದರು. ಗುಂಡ ನಕ್ಕ :”ಎರಡು ತುಂಡು ಹಗ್ಗ
ಒಯ್ಯೋಕೆ ಎರಡು ಲಾರಿಗಳು ಬೇಕೇ ?
೨. ”ದಿವಸಕ್ಕೆ ಒಂದು ಹಣ್ಣು ತಿಂದರೆ ಡಾಕ್ಟರನ್ನು ದೂರವಿಡಬಹುದು”
ಎಂಬ ಉಕ್ತಿಯನ್ನು ಜೀವನದಲ್ಲಿ ಅನುಸರಿಸಿದ ಗುಂಡ ಆಸ್ಪತ್ರೆ ಸೇರ
ಬೇಕಾಯಿತು. ಏಕೆಂದರೆ ಅವನು ತಿಂದದ್ದು ದಿನಕ್ಕೊಂದು ಹಲಸಿನ
ಹಣ್ಣನ್ನು.
೩. ಪ್ರೇಮಿಗಳ ದಿನ (Valentine Day ) ಫೆಬ್ರವರಿ ೧೪ರಂದು. Correct
೯ ತಿಂಗಳ ಬಳಿಕ November ೧೪ ರಂದು ಮಕ್ಕಳ ದಿನಾಚರಣೆ.
ಹೇಗಿದೆ ಲೆಕ್ಕ ?
ಸುಭಾಷಿತ
ಜೀವನ ನಮಗಾಗಿ ಬದುಕುವುದಲ್ಲ. ತನ್ನ ಹೆಂಡತಿ ಹಾಗೂ ಮಗಳು
ಕಿವುಡರು ಮತ್ತು ಅವರೊಂದಿಗೆ ಮಾತನಾಡಲು ಆಗದು ಎಂದು
ಗೊತ್ತಿದ್ದರೂ ಗ್ರಹಾಂ ಬೆಲ್ Telephone ಕಂಡು ಹಿಡಿದ.
ಮೂಲ :ಸಂಗ್ರಹ.

2 thoughts on “ಕನ್ನಡ ಸೌರಭ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s