Uncategorized

ನಗೆ ಹನಿ.

೧. ಭಿಕ್ಷುಕ:ಅಮ್ಮಾ ತಾಯೀ, ಹಸಿವು; ಭಿಕ್ಷೆ ಹಾಕಿ.
ಮಹಿಳೆ:ಅಡುಗೆ ಇನ್ನೂ ಆಗಿಲ್ಲ. ಸ್ವಲ್ಪ ಹೊತ್ತು ಬಿಟ್ಟು
ಬರ್ತೀಯಾ ?
ಭಿಕ್ಷುಕ :ನಿಮ್ಮ ಅಡುಗೆ ರೆಡಿ ಆಗ್ತಾ ಇದ್ದ ಹಾಗೆ ನಂಗೊಂದು
miss call ಕೊಡಿ . ಬರ್ತೀನಿ.
೨. ಹುಡುಗ:”ಒಡೆದ ಹೃದಯದಿಂದ ಪ್ರೀತಿಸಲೇ ? ಹೃದಯ
ಒಡೆಯುವವರೆಗೆ ಪ್ರೀತಿಸಲೇ ?
ಹುಡುಗಿ:ಹರಿದ ಚಪ್ಪಲಿಯಿಂದ ಬಾರಿಸಲೇ ?ಚಪ್ಪಲಿ
ಹರಿಯುವ ವರೆಗೆ ಬಾರಿಸಲೇ?
೩. ಪತ್ನಿ :ನಾನೊಂದು ವೇಳೆ ತಪ್ಪಿಸಿ ಕೊಂಡರೆ ನೀವೇನು
ಮಾಡುತ್ತೀರಿ?
ಪತಿ :ಪತ್ರಿಕೆಯಲ್ಲಿ ಮರುದಿನವೇ ಜಾಹೀರಾತು ಹಾಕ್ತೀನಿ.
ಪತ್ನಿ:ವಾಹ್, how sweet you —–ಅದ್ಸರಿ, ಏನೆಂದು ಹಾಕ್ತೀರಿ ?
ಪತಿ :ಎಲ್ಲೇ ಇರು. ಹೇಗೇ ಇರು , ನೀ ಅಲ್ಲೇ ಇರು.
೪. ಪ್ರೇಮಿ:ನಿನ್ನ ನೋಟ ಮಿಂಚಿನಂತೆ. ನಿನ್ನ ಮಾತು ಗುಡುಗಿನಂತೆ.
ನಿನ್ನ ಪ್ರೀತಿ ಮಳೆಯಂತೆ. ನಿನ್ನ ನೆನಪು ಸ್ವಾತಿಯ ಹನಿಯಂತೆ.
ನಿನ್ನ ವಿರಹದ ಛಾಯೆ ದಟ್ಟೈಸಿದ ಕಾರ್ಮೋಡದಂತೆ. ..
ಪ್ರಿಯತಮೆ:Stupid,ಇದೇನು love letter ಅಥವಾ ಹವಾಮಾನ ವರದಿಯಾ ?
೫. Doctor :ನಿಮ್ಮ ಮೂರು ಹಲ್ಲು ಕೂಡಾ ಒಮ್ಮೆಲೇ
ಹೇಗೆ ಹೋಯಿತು ?
ಗುಂಡ:ನನ್ನ ಹೆಂಡತಿ ಮಾಡಿದ ಮೈಸೂರು ಪಾಕ್ ತಿಂದ ಕಾರಣ.
Doctor :ತಿನ್ನೋದಿಲ್ಲ ಅಂತ ಹೇಳ್ಬೇಕಾಗಿತ್ತು.
ಗುಂಡ :ತಿಂದು ”ಚೆನ್ನಾಗಿಲ್ಲ ” ಅಂದಿದ್ದಕ್ಕೆ ಮೂರು ಹಲ್ಲು ಹೋಯಿತು.
ತಿನ್ನೋದಿಲ್ಲ ಅಂತಿದ್ರೆ ಎಲ್ಲ ೩೨ ಹಲ್ಲು ಕೂಡ ಹೋಗ್ತಿತ್ತು.
೬.ಗುಂಡ :ನಾನು ಅಮೆರಿಕಾಕ್ಕೆ ಹೋಗಿ ಬರಬೇಕು ಎಂದು ಆಲೋಚನೆ
ಮಾಡ್ತಾ ಇದ್ದೇನೆ.
ತಿಮ್ಮ :ಹೌದಾ, ಎಷ್ಟು ಹಣ ಬೇಕು ಮಾರಾಯಾ… ಅಷ್ಟೊಂದು ಹಣ
ನಿನ್ನಲ್ಲಿದೆಯಾ ?
ಗುಂಡ ಯೋಚನೆ ಮಾಡೋಕೆ ಹಣ ಯಾಕೆ ಬೇಕು ಮಾರಾಯಾ?
೭.A : Do you want to hear a dirty joke ?
B:ಓ. ಕೆ.
A :A white horse fell in the mud.
೮. ೧೯೮೪ರ ಚುನಾವಣೆ ಸಂದರ್ಭದ ಘಟನೆ ಇದು. ಕೂಳೂರು ಎಂಬಲ್ಲಿ
ಬೃಹತ್ ಬ್ಯಾನರ್ ನಲ್ಲಿ ಓರ್ವ ಅಭ್ಯರ್ಥಿಯ ಪರ ಹೀಗೆ ಬರೆಯಲಾಗಿತ್ತು :
”ನಿಮ್ಮ ಅಮೂಲ್ಯವಾದ ಮತಗಳನ್ನು ….. ಅವರಿಗೇ ಕೊಡಿ ”.
ವಾರದೊಳಗೆ ಯಾರೋ ಈ ಬ್ಯಾನರ್ ನಲ್ಲಿದ್ದ ”ತ ”ಎಂಬ ಅಕ್ಷರವನ್ನು
ಅಳಿಸಿ ಹಾಕಿದ್ದರು.
ಮೂಲ:ಸಂಗ್ರಹ.

2 thoughts on “ನಗೆ ಹನಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s