Uncategorized

ಕನ್ನಡ ಸಂಪದ.

ಜೀವನ.
೧. ಬದುಕಿನಲ್ಲಿ ಬದಲಾವಣೆಗಳು ಬರುತ್ತಿರುವುದೇ ಜೀವನ.
ಬದಲಾವಣೆಗಳು ನಿಂತು ಹೋದರೆ ಅದು ಮರಣ.
೨. ಅಡ್ಡಿ ಆತಂಕಗಳು ನಾವು ಹೇಡಿಗಳಾದರೆ ತಡೆಗೋಡೆಗಳು.
ನಾವು ವೀರರಾದರೆ ಅವು ಏರು ಮೆಟ್ಟಿಲುಗಳು.
೩. ಜೀವನ ಒಂದು ಗೋಳದಂತೆ. ಪೂರ್ವಾರ್ಧ ಮಾಯಾ ಸಂಗ್ರಹಣ.
ಉತ್ತರಾರ್ಧ ಭ್ರಮ ನಿರಸನ. ಇದೇ ಕರ್ಮ ಚಕ್ರ.
೪. ಜೀವನ ಭಾವುಕರ ಪಾಲಿಗೆ ದುರಂತವಾಗಿರಬಹುದು.
ಆದರೆ ಚಿಂತಕರ ಪಾಲಿಗೆ ಸುಖಾಂತ.
ಭಗವದ್ಭಕ್ತ .
ನಾವು ನೋಡುವ ವಸ್ತುಗಳಲ್ಲಿ ಆಕಾಶ ಅತ್ಯಂತ ದೊಡ್ಡದಾದುದು.
ಆದರೆ,ಅಂಥ ಆಕಾಶವನ್ನೇ ಮೋಡ ಮುಚ್ಚುತ್ತದೆ. ಆದ್ದರಿಂದ
ಆಕಾಶಕ್ಕಿಂತ ಮೋಡ ಹೆಚ್ಚಿನದು. ಅಂಥ ಮೋಡಗಳನ್ನು ಗಾಳಿ
ಚದುರಿಸುತ್ತದೆ. ಆದ್ದರಿಂದ ಮೋಡಕ್ಕಿಂತ ಗಾಳಿ ಹೆಚ್ಹಿನದು.
ಈ ಬ್ರಹ್ಮಾಂಡವನ್ನೇ ಉದರದಲ್ಲಿ ತುಂಬಿಕೊಂಡ ದೇವರು,
ಗಾಳಿಗಿಂತ ಹಿರಿಯ. ಅಂಥ ದೇವರನ್ನೇ ಭಕ್ತ ತನ್ನ ಹೃದಯದಲ್ಲಿ
ತುಂಬಿ ಕೊಳ್ಳುತ್ತಾನೆ. ಅಂದ ಮೇಲೆ ಭಗವದ್ಭಕ್ತನೇ ಎಲ್ಲರಿಗಿಂತಲೂ
ದೊಡ್ಡವನು.
ಅಮರವಾಣಿ.
ಶಾಸ್ತ್ರ ಓದಿದರೂ, ಪುರಾಣ ಕೇಳಿದರೂ,ತೀರ್ಥ ಕುಡಿದರೂ
ಪ್ರಸಾದ ಸವಿದರೂ ನನ್ನನ್ನು ನಾನು ಅರಿಯಲಿಲ್ಲ.
ಸಂಪತ್ತು ಬರುವುದು -ದಾನ ಮಾಡಲಿಕ್ಕಾಗಿ .
ಬಡತನ ಬರುವುದು -ಧ್ಯಾನ ಮಾಡಲಿಕ್ಕಾಗಿ.
ಅಧಿಕಾರ ಬರುವುದು -ಸೇವೆ ಗೈಯಲಿಕ್ಕಾಗಿ.
ಸಂಬಂಧ ಬರುವುದು -ವಿಶ್ವಾಸ ಬೆಳೆಸಲಿಕ್ಕಾಗಿ.
ಜ್ಞಾನಿ ಎನಿಸಿ ಕೊಳ್ಳಲು ಮಾತೇ ಸಾಕ್ಷಿ.
ದೇವರ ನೆನೆಸಿಕೊಳ್ಳಲು ಈ ಸೃಷ್ಟಿಯೇ ಸಾಕ್ಷಿ.
ನಿಮಗೆ ಗೊತ್ತೇ ?
ಹವಳ ಕುಜನಿಗೆ ಪ್ರೀತಿಕಾರಕ ಮತ್ತು ಮುತ್ತು ಚಂದ್ರನಿಗೆ ಪ್ರೀತಿಕಾರಕ.
ಹವಳ ಸ್ತ್ರೀಯರ ಶರೀರಕ್ಕೆ ಬೇಕಾದ ಉತ್ತೇಜನವನ್ನು ನೀಡುತ್ತದೆ.
ನಾಡಿ ಮಂಡಲವನ್ನು ಚುರುಕಾಗಿ ಇಡುತ್ತದೆ.
ಮುತ್ತು ಶರೀರದ ಅತಿಯಾದ ತಾಪಮಾನವನ್ನು ಕಡಿಮೆ ಮಾಡುತ್ತದೆ
ಮನಸ್ಸಿಗೆ ಪ್ರಶಾಂತತೆ ಮತ್ತು ಸಹನೆಯನ್ನು ನೀಡುತ್ತದೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s