Uncategorized

ನಿಮಗೆ ಗೊತ್ತೇ ?

.೧. ”ಭಗವಂತ” ಎಂಬ ಶಬ್ದದ ಮೊದಲ ಅಕ್ಷರ ”ಭ ”. ಅವನಲ್ಲಿ
”ಅನುರಕ್ತಿ” ಎಂಬ ಪದದ ಕೊನೆ ಅಕ್ಷರ ”ಕ್ತಿ ”. ಅವು ಸೇರಿ ಭಕ್ತಿ ಎಂದಾಗಿದೆ.
೨. ಖದ್ಯೋತ ಎಂದರೆ ಸೂರ್ಯ . ”ಖ”=ಆಕಾಶ. ”ದ್ಯುತಿ”=ಬೆಳಗುವವನು.
ಸೂರ್ಯದೇವ =ಕಶ್ಯಪ ಮಹರ್ಷಿಗಳು ಮತ್ತು ಅದಿತಿ ದೇವಿಯ ಮಗ.
ಆದುದರಿಂದ ಆದಿತ್ಯ.
೩. ವಾಯು =ವಾಯುವ್ಯ ದಿಕ್ಪಾಲಕ. ವಸು =ಎಲ್ಲ ಬಗೆಯ ವಿಸ್ತರಣವನ್ನು
ಪ್ರತಿನಿಧಿಸುವ ದೇವತೆ. ನಮ್ಮ ಶರೀರದೊಳಗಡೆ ಇವನು ಪಂಚ ಪ್ರಾಣಗಳೆಂಬ
೫ ಜೈವಿಕ ವಾಯುಗಳ ರೂಪದಲ್ಲಿ ಕೆಲಸ ಮಾಡುವನು.
೪. ದ್ರೌಪದಿ ಪಾಂಚಾಲ ರಾಜ ದ್ರುಪದನ ಅಗ್ನಿ ಪುತ್ರಿ. ದೃಷ್ಟದ್ಯುಮ್ನನ
ತಂಗಿ. ಸ್ವಯಂವರದಲ್ಲಿ ಪಣವಾಗಿರಿಸಿದ್ದ ಮತ್ಸ್ಯಯಂತ್ರವನ್ನುಅರ್ಜುನ
ಭೇದಿಸಿದಾಗ ದ್ರೌಪದಿ ಅವನನ್ನು ವರಿಸುತ್ತಾಳೆ. ದ್ರೌಪದಿ ಯುಧಿಷ್ಠಿರನಿಂದ
ಪ್ರತಿವಿಂಧ್ಯ,ಭೀಮನಿಂದ ಶ್ರುತಸೋಮ,ಅರ್ಜುನನಿಂದ ಶ್ರತುಕೀರ್ತಿ ,
ನಕುಲನಿಂದ ಶತಾನೀಕ, ಸಹದೇವನಿಂದ ಶ್ರುತಸೇನ ಎಂಬ ಐದು ಜನ
ಮಕ್ಕಳನ್ನು ಪಡೆದಳು.
೫. ಪಂಚಮ ವೇದ =ಆಯುರ್ವೇದ.
೬. ರುಕ್ಮಿಣಿ ಮೊದಲಾದ ಅಷ್ಟ ಮಹಿಷಿಯರು ಶ್ರೀ ಕೃಷ್ಣನ ವಿಗ್ರಹವನ್ನು
ಪೂಜಿಸುತ್ತಿದ್ದ ಕಾರಣ ಆ ವಿಗ್ರಹ ಪೂಜೆಗಾಗಿ ಅಷ್ಟ ಯತಿಗಳನ್ನು ಮಧ್ವಾಚಾರ್ಯರು
ನಿಯೋಜಿಸಿದರು.
೨೦೧೮-ಶ್ರೀ ಕೃಷ್ಣ ಪೂಜೆಯ ೨ ವರ್ಷಗಳ ಅಧಿಕಾರ ಹಸ್ತಾoತರಕ್ಕೆ ೪೯೬ವರ್ಷ.
೩೨ನೇ ಸುತ್ತಿನ ಹೊಸ್ತಿಲಲ್ಲಿ ೨೪೯ನೇ ಪರ್ಯಾಯಕ್ಕೆ ಸಿದ್ಧತೆ. ಫಲಿಮಾರು
ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ೨ನೇ ಅವಧಿಗೆ ಶ್ರೀ ಕೃಷ್ಣ ಪೂಜೆಗೆ
ಕಂಕಣಬದ್ಧರಾಗುವರು. ಶ್ರೀ ಕೃಷ್ಣನ ೨ ವರ್ಷಗಳ ಪೂಜೆಗೆ ಗರ್ಭಗುಡಿಯ
ಕೀಲಿ ಕೈ ಹಾಗೂ ಅನ್ನದಾನಕ್ಕಾಗಿ ಅಕ್ಷಯ ಪಾತ್ರೆ,ಸಟ್ಟುಗವನ್ನು ಸರ್ವಜ್ಞ
ಪೀಠ ವೇರಿ ಪಡೆವ ಪರಂಪರಾಗತ ಪರ್ಯಾಯ ಅಧಿಕಾರ ಹಸ್ತಾ೦ತರ
ಪ್ರಕ್ರಿಯೆಗೆ ೪೯೬ ವರ್ಷ ಪೂರ್ಣವಾಗುತ್ತದೆ.
೭. ಶಕುಂತ =ಪಕ್ಷಿ.
೮. ಶಿವನ ಅಂಶದಿಂದ ಅನಸೂಯೆಯ ಮಗನಾಗಿ ಜನಿಸಿದ ದೂರ್ವಾಸ
ಪ್ರಸಿದ್ಧನಾಗಿರುವುದು ಶಾಪಕ್ಕೆ.
೯. ದ್ರೌಪದಿಯ ವಿವಿಧ ಹೆಸರುಗಳು -ಪಾಂಚಾಲಿ, ಮಹಾಭಾರತಿ,ಸೈರಂಧ್ರಿ ,
ಯಜ್ಞಸೇನಿ,
೧o. ಹತ್ತು ತಲೆಮಾರುಗಳ ವಂಶ ವಾಹಿನಿಗಳು ನಮಗೆ ವರ್ಗಾವಣೆಯಾಗುತ್ತವೆಂದು
ವಿಜ್ಞಾನ ಹೇಳುತ್ತದೆ.
ಮೂಲ :ಸಂಗ್ರಹ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s