Uncategorized

ಕನ್ನಡ ಸೌರಭ.
೧. ೯ ಎಂಬ ಸಂಖ್ಯೆ ಭಾರತೀಯ ವಿಚಾರ ಧಾರೆಗೆ ಸಂಬಂಧಿಸಿದಂತೆ ತುಂಬಾ
ಮಹತ್ತ್ವದ ಸಂಖ್ಯೆಯಾಗಿದೆ.
ಸಂವತ್ಸರಕ್ಕೆ ೩೬೦ ದಿನ (೩+೬=೯)
ಅಕ್ಷೋಹಿಣಿ ಸೇನೆಯ ಗಣನೆಯಲ್ಲೂ ೯ ಸಂಖ್ಯೆ ಸಿಗುತ್ತದೆ.
ರಥ-೨೧೮೭೦ ( ೨+೧+೮+೭=೧೮=೧+೮=೯)
ಆನೆ -೨೧೮೭೦(–do —–)
ಕುದುರೆ -೬೫,೬೧೦(೬+೫+೬+೧=೧೮=೧+೮=೯)
ಕಾಲಾಳು -೧,೦೯,೩೫೦(೧+೯+೩+೫=೧೮=೧+೮=೯)
೨. ಗಂಡ, ಹೆಂಡತಿ ಬಂಡಿಯ ಎರಡು ಚಕ್ರ ಗಳಿದ್ದಂತೆ. ಯಾವ ಚಕ್ರ ವಕ್ರವಾದರೂ
ಬಂಡಿ ಉರುಳುತ್ತದೆ.
೩. ಹೆಣ್ಣು
ನೀ ನನ್ನ ಪ್ರೀತಿಸಿದರೆ ಯಾವಾಗಲೂ ನಾ ನಿನ್ನ ಸೆರೆ.
ನನ್ನ -ನಿನ್ನ ನಡುವಿನ ತೆರೆ ಹರಿದಷ್ಟೂ, ಬೇರೆ ಎಂಬುದು ಮರೆತಷ್ಟೂ, ಹೃದಯ
ನಿನಗಾಗಿ ಹಾಸಿ ಹರವುತ್ತೇನೆ. ಆದರೆ –
ನೀನೇ ಜಾಣ, ನಾನು ಕೋಣ ,
ನಿನ್ನ ಕರುಣೆಯಲ್ಲೇ ನಾನು ಬಾಳ ಬೇಕು ,
ನಿನ್ನ ಮಾತೇ ಕೇಳ ಬೇಕು, ಹರಗಿದರೆ ಹದವಾಗಬೇಕು,
ನಿನ್ನ ಬೆದೆಗೆ ಸರಕಾಗಬೇಕು, ಹೆರಬೇಕು, ಹೆದರಬೇಕು ,
ಎಂದೇನಾದರೂ ತಲೆ, ಗಿಲೆಯಲ್ಲಿ ತುಂಬಿ ಕೊಂಡಿದ್ದರೆ,
ಎಂದೂ ಸಹಿಸಲಾರೆ,ತಾಳಿಕೊಂಡು ಬಾಳಲಾರೆ.
೪. ಬಾಲ್ಯ –ರಂಗು ರಂಗಿನ, ಕಣ್ಮನ ತಣಿಸುವ
ಸಂತಸ ಗದ್ದಲ ದಿಂದೊಡಗೂಡಿದ ,
ನೂಕು ನುಗ್ಗಲಿನ, ಬಿಡುವಿಲ್ಲದ One-way traffic.
ಯೌವನ –ಕಿವಿ ಗಡಚಿಕ್ಕುವ ಶಬ್ದ ದಿಂದ
ಸಂತಸ -ನೋವು -ನಲಿವು ತಂದೊಡ್ಡುವ
ರಂಗು ರಂಗಿನ ಬಣ್ಣದಿಂದ ಉರಿದು
ಧರೆಗಪ್ಪುವ ಪಟಾಕಿ.
ಮುಪ್ಪು — ಹಾದಿ ಇದ್ದೆಡೆಯೆಲ್ಲಾ ಹರಿದಾಡಿ
ಹಲವರಿಗೆ ಹಲಬಗೆಯ ನೋವು -ನಲಿವಿಗೆ, ಸುಖ -ದುಃಖ ಗಳಿಗೆ
ನೆ (ಎ)ರವಾಗಿ ತನ್ನ ಬಾಳೇ ತಾನು ಸಾಗ ಹಾಕಲಾರದ
ಸ್ಥಿತಿ ಗೊಳಗಾಗಿ ಷೆಡ್ ಸೇರಿದ ಹಳೇ ಮಾಡೆಲ್ ಕಾರ್.
ಮೂಲ :ಸಂಗ್ರಹ.

2 thoughts on “

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s