Uncategorized

ಕನ್ನಡ ಸುಭಾಷಿತಗಳು.

೧. ಸೂಕ್ತಿ.
”ದುಡ್ಡು” ಅಂದರೆ ದೂರ ಇರು;”ಹೃದಯ”ಅಂದರೆ ಹತ್ತಿರ ಬಾ.
೨.ಬಾಳು ಎಳೆದತ್ತ ಹೊರಳಿ ಕೊರಡಾಗುವ ಬದಲು ಮಣಿಸಿ ವಿಗ್ರಹವಾಗಿಸುವ ಛಲ ಬೇಕು.
೩. ಮಾತಿಗೊಂದು ರೀತಿ ಉಂಟು ,ಅರಿತು ಆಡಬೇಕು.
ಬಾಳಿಗೊಂದು ನೀತಿಯುಂಟು ತಿಳಿದು ಬಾಳಬೇಕು.
೪. ಹೇಳದೆ ಇರಬಹುದು; ಕೇಳದೆ ಇರಲಾಗದು.
೫.ಉಪಕಾರವಿಲ್ಲದಿದ್ದರೂ ಉಪದ್ರವ ಬೇಡ;ದೇವರ ಅನುಗ್ರಹವಿಲ್ಲದಿದ್ದರೂ ಆಗ್ರಹ ಬೇಡ.
೬. ಬದುಕಿಗೆ ನಾವೊಂದು ಬಣ್ಣ ಬಳಿಯಲು ಬಯಸಿದರೆ ಕಾಣದ ಕೈ ಮತ್ತೊಂದು ಬಣ್ಣವನ್ನು ಎರಚುತ್ತದೆ.
೭.ಮಾತು ಬೆಳಕಾಗಬೇಕು;ಬೆಂಕಿಯಾಗಬಾರದು.
೮.. ಒಳ್ಳೆಯ ಮನಸ್ಸಿನಿಂದ ಹೊಂದಿ ಕೊಂಡಿರುವುದೇ ಧರ್ಮ ;ವೈ ಮನಸ್ಸಿನಿಂದ ಬೇರೆಯಾಗುವುದೇ ಅಧರ್ಮ.
೯. ಮನಸ್ಸು ಒಳ್ಳೆಯ ಸೇವಕ.ಆದರೆ ಕೆಟ್ಟ ಯಜಮಾನ. ಅದನ್ನು ನಮ್ಮ ಸೇವಕನಂತೆ ಇರಿಸಬೇಕು ಹೊರತು
ನಮ್ಮ ಯಜಮಾನನಂತೆ ಆಗಲು ಅದಕ್ಕೆ ಅವಕಾಶ ಕೊಡಬಾರದು.
೧೦. ಭಾಷೆ ಒಂದು ಸಂಸ್ಕೃತಿಯ ಬೆನ್ನೆಲುಬು ನಿಜ. ಆದರೆ ಆ ಎಲುಬನ್ನೇ ವಜ್ರಾಯುಧ ಮಾಡಿ ಸೋದರರೊಡನೆ
ಹೋರಾಡಲು ಬಳಸುವುದು ಉಚಿತವಲ್ಲ.
ಮೂಲ : ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s