Uncategorized

ನಿಮಗೆ ಗೊತ್ತೇ?

೧.ರಾವಣನ ಸಹೋದರ ಖರಾಸುರ ಸ್ವರ್ಗದ ಆಧಿಪತ್ಯಕ್ಕಾಗಿ ಶಿವನನ್ನು ಒಲಿಸಿ ಕೊಳ್ಳಲು ತಪಸ್ಸು ಕೈ ಕೊಂಡಾಗ, ''ಕೈಲಾದಷ್ಟು ಶಿವಲಿಂಗಗಳನ್ನು ಪಾತಾಳದಿಂದ ನಿನ್ನ ಊರಾದ ಲಂಕೆಗೆ ತೆಗೆದು ಕೊಂಡು ಹೋಗಿ ಪ್ರತಿಷ್ಠಾಪಿಸಿದರೆ ನಿನ್ನ ಬಯಕೆ ಸಿದ್ಧಿಸುತ್ತದೆ'' ಎಂದು ಶಿವ ತಥಾಸ್ತು ಎಂದಿದ್ದ. ಅದರಂತೆ ಪಾತಾಳದಿಂದ ಮೂರು ಶಿವಲಿಂಗಗಳನ್ನು ಹಿಡಿದುಕೊಂಡು ಬರುತ್ತಿದ್ದಾಗ ಗಣಪತಿ ಎದುರಾಗಿದ್ದ. ಅವನೊಂದಿಗೆ ಯುದ್ಧಕ್ಕೆಂದು ಶಿವಲಿಂಗಗಳನ್ನು ಭೂಮಿಯ ಮೇಲಿಟ್ಟಾಗ, ಅದು ಇದ್ದಲ್ಲೇ ಪ್ರತಿಷ್ಠಾಪನೆಯಾಗುತ್ತದೆ. ಸೋಮ ಭಾಗ (ಎಡ ಭುಜ )ದಲ್ಲಿನ ಲಿಂಗ ಇಟ್ಟ ಸ್ಥಳ ಸೋಮೇಶ್ವರ, ಶಿರ (ತಲೆ)ದಲ್ಲಿದ್ದ… Continue reading ನಿಮಗೆ ಗೊತ್ತೇ?

Uncategorized

ಪ್ರಾಣಿ ಪ್ರಪಂಚ.

೧. ಮೊಲಗಳಿಗೇಕೆ ದೊಡ್ಡ ಕಿವಿ ? ಶತ್ರುಗಳನ್ನು ಪತ್ತೆಹಚ್ಚಿ ಸುರಕ್ಷತೆಗಾಗಿ ಓಡಿ ಹೋಗಲು ಈ ದೊಡ್ಡ ಕಿವಿಗಳು ತುಂಬ ನೆರವಾಗುತ್ತವೆ. ಗಾಳಿಯಲ್ಲಿ ಬರುವ ಶಬ್ದತರಂಗಗಳು ಕಿವಿಯೊಳಗೆ ತುಂಬ ಹೆಚ್ಚಾಗಿ ಪ್ರವೇಶಿಸುತ್ತವೆ . ಅತಿ ಸೂಕ್ಷ್ಮ ಧ್ವನಿಯೂ ಸ್ಪಷ್ಟವಾಗಿ ಕೇಳಿಸಿಕೊಳ್ಳಲು ಪೃಕೃತಿ ಅದಕ್ಕೆ ದೊಡ್ಡ ಕಿವಿಗಳನ್ನು ಕೊಟ್ಟಿದೆ. ಮೊಲವು ಬಲಹೀನ ಹಾಗೂ ಪುಕ್ಕಲು ಪ್ರಾಣಿ. ಅವುಗಳಿಗೆ ವಾಸನಾಶಕ್ತಿ ತುಂಬಾ ಇರುತ್ತದೆ. ಅವುಗಳ ಹಿಂಗಾಲು ಉದ್ದವಾಗಿರುತ್ತವೆ. ಆದ್ದರಿಂದ ಅವು ತುಂಬಾ ವೇಗದಲ್ಲಿ ಓಡುತ್ತವೆ. ಮೊಲ ಒಂದು ತಾಸಿಗೆ ೬೫ ಕಿ.… Continue reading ಪ್ರಾಣಿ ಪ್ರಪಂಚ.

Uncategorized

ಕನ್ನಡ ಸುಭಾಷಿತಗಳು.

೧. ಮಗನ ಯೋಗ್ಯತೆಯ ಅರಿವು ಅವನ ಮದುವೆಯ ನಂತರ. ಮಗಳ ಯೋಗ್ಯತೆ ಅವಳ ಹರೆಯದ ವಯಸ್ಸಿನಲ್ಲಿ. ಪತಿಯ ಯೋಗ್ಯತೆ ಹೆಂಡತಿಯ ಅನಾರೋಗ್ಯಾವಸ್ಥೆಯಲ್ಲಿ. ಪತ್ನಿಯ ಯೋಗ್ಯತೆ ಗಂಡನ ಬಡತನಾವಸ್ಥೆಯಲ್ಲಿ. ಗೆಳೆಯನ ಯೋಗ್ಯತೆ ಆಪತ್ಕಾಲದಲ್ಲಿ. ಸೋದರನ ಯೋಗ್ಯತೆ ಜಗಳದ ಪ್ರಸಂಗದಲ್ಲಿ. ಮಕ್ಕಳ ಯೋಗ್ಯತೆ ನಮ್ಮ ವೃದ್ಧಾಪ್ಯದಲ್ಲಿ ತಿಳಿಯುವುದು. ೨.ವಿಶಾಲವಾದ ಆಕಾಶವನ್ನು ಚಿಕ್ಕ ಕಣ್ಣಿನಲ್ಲೇ ನೋಡ ಬಹುದು. ಆದರೆ ಒಂದು ಒಳ್ಳೆಯ ಹೃದಯವನ್ನು ನೋಡಬೇಕಾದರೆ ನಮ್ಮ ಮನಸ್ಸು ವಿಶಾಲವಾಗಿರಬೇಕು. ೩. ಕ್ಷಣ ಕ್ಷಣಕ್ಕೂ ಬದಲಾಗುವುದು ಅಭಿಪ್ರಾಯ. ಯಾವ ಕ್ಷಣಕ್ಕೂ ಬದಲಾಗದಿರುವುದು ನಿರ್ಧಾರ.… Continue reading ಕನ್ನಡ ಸುಭಾಷಿತಗಳು.

Uncategorized

ಭಕ್ತಿ ಸೌರಭ.

ಭಗವತ್ಸಾಕ್ಷಾತ್ಕಾರ ಪಡೆಯಲು ಭಕ್ತಿಯೇ ಪ್ರಧಾನವಾದದ್ದು. ಭಕ್ತಿಯಲ್ಲಿ ಎರಡು ವಿಧ:-ನಿರಾಕಾರ ಭಕ್ತಿ ; ಸಾಕಾರ ಭಕ್ತಿ. ಸಾಕಾರ ಭಕ್ತಿ ಸಾಧಾರಣ ಮಾನವನಿಗೆ ದಕ್ಕುವಂಥಾದ್ದು. ನಿರಾಕಾರ ಭಕ್ತಿ ಜ್ಞಾನಿಗೆ ಮಾತ್ರ ಸಾಧ್ಯ.ವೈದಿಕ ಪರಂಪರೆಯಲ್ಲಿ ಸಾಕಾರ ಭಕ್ತಿ ನವ ವಿಧ:ಶ್ರವಣ, ಕೀರ್ತನ,ಸ್ಮರಣ, ಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮಾರ್ಪಣ. ಅಂತೆಯೇ ಭಗವಂತನನ್ನು ಸೇರಲು ಬೇಕಾದ ಭಾವಗಳಲ್ಲಿ ರೂಢಿಗತವಾದವು ಪಂಚ ವಿಧ:ವಾತ್ಸಲ್ಯ ಭಾವ, ದಾಸ್ಯ ಭಾವ, ಸಖ್ಯ ಭಾವ,ಮಧುರ ಭಾವ ಹಾಗೂ ಶಾಂತ ಭಾವ. ಬಿಜ್ಜ ಮಹಾದೇವಿ ಶಂಕರನನ್ನೇ ಮಗನೆಂದು ಭಾವಿಸಿ,… Continue reading ಭಕ್ತಿ ಸೌರಭ.