Uncategorized

ಕನ್ನಡ ಸಂಪದ.

ಕನ್ನಡ ಕವಿತೆಗಳು.
ಗ್ರಹ ಗತಿಯ ತಿದ್ದುವನೆ ಜೋಯಿಸನು ಜಾತಕದಿ?
ನಿಹಿತವಾಗಿಹುದದರ ಗತಿ ಸೃಷ್ಟಿ ವಿಧಿಯಿಂ
ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ
ಸಹನೆ ವಜ್ರದ ಕವಚ ಮಂಕು ತಿಮ್ಮ —ಡಿ. ವಿ. ಜಿ.
೨. ಮನೆಗೆ ಬಂದವರೆಲ್ಲಾ ಮನದೊಳಗೆ ಬರುವರೇ ?
ಬೆಳಕು ಮನೆಯೊಳಗೆ ಬಂದಂತೆ ಕಾಮನ ಬಿಲ್ಲು ಬಂದೀತೇ ?
೩. ಗಾಣದೆತ್ತಿನಂತೆ ಕಣ್ಣ ಮುಚ್ಚಿ ಪ್ರದಕ್ಷಿಣೆ ಮಾಡಿ
ಕಾಣದೆ ತಿರುಗುವನೆರಡು ಕಣ್ಣಿದ್ದು. –ಕನಕದಾಸರು.
೪. ನಿರಾಶ್ರಯಾ ನ ಶೋಭತೇ ಕವಿತಾ , ವನಿತಾ, ಲತಾ.
ಮಣಿಯದಿಹ ಮನವೊಂದು, ಸಾಧಿಸುವ ಹಠವೊಂದು;
ನಿಜದ ನೇರಕೆ ನಡೆವ ನಿಶ್ಚಲತೆಯೊಂದು;
ಅನ್ಯಾಯಕೆಂದೆಂದು ಬಾಗದೆಚ್ಚರವೊಂದು;
ಮರುಕಕ್ಕೆ, ಪ್ರೇಮಕ್ಕೆ ಚಿರ ತೆರೆದ ಎದೆಯೊಂದು;
ಇದ್ದರಷ್ಟೇ ಸಾಕು. -ವಿ.ಸೀ.
೫.ಬಡವನಾರ್ ?ಮಡದಿಯೊಲವಿನ ಸವಿಯನರಿಯದವನು
ಹುಡುಗರಾಟದಿ ಬೆರೆತು ನಗಲರಿಯದವನು
ಉಡುರಾಜ ನೋಲಗದಿ ಕುಳಿತು ಮೈ ಮರೆಯದವನು
ಬಡ ಮನಸೆ ಬಡತನವೊ -ಮರುಳ ಮುನಿಯ. -ಡಿ. ವಿ. ಜಿ.

ನಿಮಗೆ ಗೊತ್ತೇ?
೧.ಭಾರತ ಸ್ವತಂತ್ರವಾದ ತಿಥಿ -ಆಷಾಢ ಬಹುಳ ಅಮಾವಾಸ್ಯೆ.(೧೫-೮-೧೯೪೭)
೨. ಖನಿಜಗಳಲ್ಲಿ ಪ್ರಮುಖವಾಗಿ ಕಂಡುಬರುವ ೮ ಮೂಲ ವಸ್ತುಗಳೆಂದರೆ
ಆಮ್ಲಜನಕ, ಸಿಲಿಕಾನ್,calcium ,sodium , potassium, magnesium, alluminium ಮತ್ತು iron.
ಭೂಮಿಯ ಒಟ್ಟು ತೂಕದ ಶೇ. ೯೮ ಭಾಗವು ಈ ೮ ಮೂಲ ವಸ್ತುಗಳಿಂದಲೇ ಆಗಿದೆ.
೩. ನಮ್ಮ ದೇಶದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಇವರಿಬ್ಬರೂ ಕಾರಣಾಂತರ ದಿಂದಾಗಿ
ಸೇವೆಯಲ್ಲಿಲ್ಲದಾಗ ರಾಷ್ಟ್ರಪತಿಯ ಕಾರ್ಯ ನಿರ್ವಹಣೆಯನ್ನು ನಿಭಾಯಿಸುವ ಹೊಣೆಗಾರಿಕೆ
Supreme Courtನ chief justice (ಮುಖ್ಯ ನ್ಯಾಯಾಧೀಶ)ನದ್ದಾಗಿರುತ್ತದೆ. ೧೯೬೯ರಲ್ಲಿ ಡಾ।ಝಕೀರ್
ಹುಸೇನ್ ನಿಧನರಾಗಿದ್ದರು. ಉಪರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿ ತಮ್ಮ ಸ್ಥಾನಕ್ಕೆ ರಾಜೀನಾಮೆ
ನೀಡಿದ್ದರು. ಆಗ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹಿದಾಯತುಲ್ಲಾ M.
ಅವರು July ಮತ್ತು August, ೧೯೬೯ ಅವಧಿಯಲ್ಲಿ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ್ದರು.
೪. ಗುಬ್ಬಚ್ಚಿಯ ಮೆದುಳು ಅದರ ದೇಹದ ತೂಕದ ಶೇ. ೪. ೨. ರಷ್ಟು ಇರುತ್ತದೆ. ಆದರೆ ಮನುಷ್ಯನ
ಮೆದುಳು ಅವನ ದೇಹದ ಒಟ್ಟು ತೂಕದ ಶೇ. ೨. ೫.ರಷ್ಟು ಇದೆ.
ಮೂಲ:ಸಂಗ್ರಹ.
.

Advertisements

2 thoughts on “ಕನ್ನಡ ಸಂಪದ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s