Uncategorized

ಕನ್ನಡ ಸೌರಭ.

ನಗೆ ಹನಿ.
ಪ್ರಶ್ನೆ:”ಮಳೆ ನಿಂತರೂ ಹನಿ ಉದುರುವುದು ನಿಲ್ಲೋಲ್ಲ ” -ಈ ಮಾತಿಗೊಂದು ಉದಾಹರಣೆ ಕೊಡಿ.
ಉತ್ತರ:”ಭಾಷಣ ಮುಗಿದರೂ ಆಕಳಿಕೆ ನಿಲ್ಲೋದಿಲ್ಲ. ”
ಪ್ರಶ್ನೆ:ಮನುಷ್ಯ ದೀರ್ಘಾಯುಷ್ಯವನ್ನು ಬಯಸಿದರೂ ಮುಪ್ಪನ್ನು ಬಯಸುವುದಿಲ್ಲವೇಕೆ ?
ಉತ್ತರ:ಸ್ವರ್ಗ ಸುಖ ಬಯಸುವವರು ಯಾರೂ ಸ್ವರ್ಗಸ್ಥರಾಗಲು ಬಯಸುವುದಿಲ್ಲ.
ಗಂಡಸು ತನಗೆ ಅಗತ್ಯವಾಗಿ ಬೇಕಾದ ವಸ್ತುವನ್ನು ಇಮ್ಮಡಿ ಬೆಲೆ ಕೊಟ್ಟಾದರೂ ಖರೀದಿಸುತ್ತಾನೆ. ಆದರೆ ಹೆಂಗಸು ಹಾಗಲ್ಲ; ತನಗೆ ಬೇಡವಾಗಿರುವ ವಸ್ತುವನ್ನು ಇಮ್ಮಡಿ ಬೆಲೆ ತೆತ್ತು ಕೊಂಡು ಕೊಳ್ಳುತ್ತಾಳೆ.
ಮೇಸ್ಟ್ರು:೧೨ನೇ ಶತಮಾನದ ಕವಿಗಳ ಬಗ್ಗೆ ನಿಮಗೇನಾದರೂ ಗೊತ್ತಿದೆಯೇ ?
ಗುಂಡ:ಹೌದು,ನನಗೆ ಗೊತ್ತಿದೆ.
ಮೇಸ್ಟ್ರು :ಗುಡ್, ಏನು ಗೊತ್ತಿದೆ?
ಗುಂಡ:ಅವರ್ಯಾರೂ ಈಗ ಬದುಕಿಲ್ಲ ಅಂತ.
ಮೇಸ್ಟ್ರು:ಅಕ್ಬರ್ ಹುಟ್ಟಿದ್ದು ಯಾವಾಗ ?
ಗುಂಡ:ನನಗೆ ಗೊತ್ತಿಲ್ಲ.
ಮೇಸ್ಟ್ರು:ನಿನ್ನ ನೋಟ್ ಬುಕ್ ನಲ್ಲಿ ಇದೆಯಲ್ಲ?
ಗುಂಡ:ಹೌದಾ ಸರ್,ನಾನು ಅದನ್ನು ಅಕ್ಬರನ ಫೋನ್ ನಂಬರ್ ಅಂದು ಕೊಂಡಿದ್ದೆ.
ಕನ್ನಡ ನುಡಿಗಟ್ಟು ಗಳು :
೧. ಬಡಿಗೆಯೊಂದಿಗೆ ಬಡಿದಾಡ ಬಾರದು ಗಡಿಗೆ.
೨. ಹೆಣ್ಣಿನ ಪ್ರಾಯ ಕೇಳ ಬಾರದು;ಹಾಗೇ ರಾಜಕಾರಣಿಗಳ ಬಳಿ ”ಮಾಡಿದ್ದೇನು” ಎಂದೂ ಕೇಳ ಬಾರದು.
೩. ಒಂದು ಹೂವು ಮತ್ತೊಂದು ಹೂವಿನೊಂದಿಗೆ ಸ್ಪರ್ಧೆಗಿಳಿಯುವುದಿಲ್ಲ. ಸುಂದರವಾಗಿ ಅರಳುವುದಷ್ಟೇ ಅದರ ಕೆಲಸ.
೪. ಒಪ್ಪಿಕೋ ಪರಾಭವ , ತಿದ್ದಿಕೋ ಪ್ರಮಾದವ.
೫. ಜಡೆಯ ಸಿಕ್ಕು ಬಿಡಿಸುತ್ತಲೇ ಹೆಣ್ಣು ಜೀವನದ ಜಟಿಲತೆ ಬಿಡಿಸುವ ಅನುಭವ ಕಲಿಯುತ್ತಾಳೆ.
೬. ಬದುಕನ್ನು ಹಿಮ್ಮುಖವಾಗಿ ಅರ್ಥೈಸಿ ಕೊಳ್ಳಬೇಕು. ಮತ್ತು ಮುಮ್ಮುಖವಾಗಿ ಬದುಕಬೇಕು.
೭. ವೃತ್ತಿ ಬದುಕುವುದಕ್ಕೆ ;ಪ್ರವೃತ್ತಿ ಜೀವನದ ಅರ್ಥವನ್ನು ಹೆಚ್ಚಿಸುವುದಕ್ಕೆ..
೮.ಬದುಕಿನ ಹಾದಿಗೆ ಕಲಿಕೆಯೇ ದೀವಿಗೆ.
೯. ಆದಿ ಅಂತ್ಯ ವಿಲ್ಲದವನು ಈಶ್ವರ;ಪ್ರೀತಿ ಇಲ್ಲದವನು ಇಲ್ಲಿ ನಶ್ವರ.
೧೦.ಯೌವನಕ್ಕೆ ವಿವೇಕವಿಲ್ಲ;ವೃದ್ಧಾಪ್ಯಕ್ಕೆ ಶಕ್ತಿ ಇಲ್ಲ.
ಮೂಲ :ಸಂಗ್ರಹ.

2 thoughts on “ಕನ್ನಡ ಸೌರಭ.

Leave a Reply to vanihegde Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s