Uncategorized

ಸುಭಾಷಿತಗಳು.

೧.ದುಃಖದಲ್ಲಿರುವಾಗ ಯಾವುದೇ ನಿರ್ಧಾರ ತಗೋಬಾರದು. ಖುಷಿಯಲ್ಲಿದ್ದಾಗ ಯಾವುದೇ ಪ್ರಮಾಣ ಮಾಡ ಬಾರದು. ಕೋಪದಲ್ಲಿರುವಾಗ ದುಡುಕಿ ಮಾತಾಡಬಾರದು. ಇದು ನಮ್ಮ ಉತ್ತಮ ಜೀವನದ ಗುಟ್ಟು.
೨.ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು. ಹೆದರಿಸುವವರ ಮುಂದೆ ಕತ್ತಿಯಂತಿರಬೇಕು. ಆತ್ಮೀಯರ ಮುಂದೆ ಮುತ್ತಿನಂತಿರ ಬೇಕು.ಹಿರಿಯರ ಮುಂದೆ ಹತ್ತಿಯಂತಿರಬೇಕು.
೩. ನೇರವಾಗಿ ಮಾತನಾಡುವವರಿಗೆ ಶತ್ರುಗಳು ಜಾಸ್ತಿ. ಸುಳ್ಳು ಹೇಳುವವರಿಗೆ ಮಿತ್ರರು ಜಾಸ್ತಿ. ಸ್ವಾರ್ಥಕ್ಕಾಗಿ ಚಂದದ ಮಾತುಗಳನ್ನಾಡುವ ಜನ ಜಾಸ್ತಿ. ನಿಸ್ವಾರ್ಥ ಮನಸ್ಸಿನವರಿಗೆ ನೋವು ಕೊಡುವ ಜನರೆ ಜಾಸ್ತಿ.-ಚಾಣಕ್ಯ.
೪. ಮರಳಿನ ಮೇಲೆ ಮರಳು ಅಂತ ಬರಿಯ ಬಹುದು … ಆದರೆ ನೀರಿನ ಮೇಲೆ ನೀರು ಅಂತ ಬರೆಯೋಕಾಗುತ್ತಾ ?ಜೀವನದ ಆಸೆಗಳು ಹಾಗೇ. ಕೆಲವು ಸಾಧ್ಯ… ಇನ್ನು ಕೆಲವು ಅಸಾಧ್ಯ. ಇದೇ ಅಲ್ಲವೇ ಜೀವನ ಅಂದರೆ ?
೫. ಅತಿಯಾದ ನಿರೀಕ್ಷೆಯಿಂದ ತುಂಬಾ ನಿರಾಸೆಯಾಗುತ್ತೆ. ಅತಿಯಾದ ನಂಬಿಕೆಯಿಂದ ತುಂಬಾ ಮೋಸವಾಗುತ್ತೆ. ಅತಿಯಾದ ಪ್ರೀತಿಯಿಂದ ತುಂಬಾ ದುಃಖವಾಗುತ್ತೆ. ಅತಿಯಾದರೆ ಅಮೃತ ಕೂಡಾ ವಿಷವೇ.
೬. ಸಮಯ ಎಲ್ಲವನ್ನು, ಎಲ್ಲರನ್ನು ಬದಲಾಯಿಸುತ್ತೆ; ಆದರೆ ನೆನಪು… ?ಸದಾ ಕಾಡುತ್ತಲೇ ಇರುತ್ತೆ.
೭. ಪರಿಶ್ರಮದಿ ಮೆಟ್ಟಲೇರುವಾಗ ಏದುಸಿರು ಬರುವಂತಾದರೂ, ಮೇಲೆ ತಲುಪಿದಾಗ ಹೊರ ಹೊಮ್ಮುವ ನಿಟ್ಟುಸಿರಿದೆಯಲ್ಲ,ಅದಕ್ಕ್ಯಾವತ್ತೂ ಬೆಲೆ ಕಟ್ಟಲಾಗದು.
೮. ಕೆಲವರು ಮನಸ್ಸಿನ ಜೊತೆ ಎಷ್ಟು ಚೆನ್ನಾಗಿ ”ಆಟ ”ಆಡ್ತಾರೆ ಅಂದ್ರೆ … ನಾವು ”out ” ಆದಾಗಲೇ ನಮಗೆ ಗೊತ್ತಾಗೋದು … ಇಷ್ಟು ದಿನ ಅವರು
ನಮ್ಮ ಜೊತೆ ಆಟ ಆಡಿದ್ರು ಅಂತ …
೯. ದುಃಖಗಳು ಸಾಯುತ್ತವೆ. ನೆನಪುಗಳು ಸಾಯೋಲ್ಲ.
೧೦. ನಿಮ್ಮನ್ನು ಪ್ರೀತಿಸೋ ಹೃದಯಗಳು ತುಂಬಾ ಸಿಗುತ್ತೆ. ಆದರೆ ಅರ್ಥ ಮಾಡಿಕೊಳ್ಳುವ ಹೃದಯಗಳು ತುಂಬ ಕಡಿಮೆ.
೧೧. ಉಸಿರು ನಿಂತಾಗ ಮಾತ್ರ ಸಾವಲ್ಲ;ಬದುಕಿದ್ದಾಗ ಯಾವುದೇ ಸ್ನೇಹ -ಪ್ರೀತಿಗೆ ಬೆಲೆ ಸಿಗದೇ ಹೋದಾಗ, ನೋವು ಇದೆಯಲ್ಲಾ, ಅದೇ ನಿಜವಾದ ಸಾವು.
೧೨.ಮನಸ್ಸು ಮತ್ತು ಕೊಡೆ ಇವುಗಳಲ್ಲಿರುವ ಸಾಮ್ಯತೆ–ಎರಡೂ ತೆರೆದಿರುವಾಗ ನಮಗೆ ಉಪಯೋಗವಾಗುತ್ತವೆ. ಮುಚ್ಚಿಕೊಂಡಿರುವಾಗ ಹೊರೆ ಯಾಗುತ್ತವೆ.
೧೩ . ಪ್ರತಿಯೊಬ್ಬರಿಂದಲೂ ಒಂದಲ್ಲ ಒಂದು ವಿಷಯ ತಿಳಿಯಿರಿ. ಆದರೆ ಯಾರನ್ನೂ ಅನುಕರಿಸ ಬೇಡಿ.
೧೪. ನಿಜ ವೈರಿ ಹೊರಗಿಲ್ಲ… ನಮ್ಮೊಳಗೇ ಇಹನು. ಉಸಿರು ನಿಲ್ಲುವವರೆಗೆ ಕಾಡುವವನಿವನು. ಧೃಢ ಚಿತ್ತ,ಸಮ ಚಿತ್ತಗಳ ಆಯುಧವ ಮಾಡಿ ಒಳ ವೈರಿಯನು ಅಟ್ಟಿ ಬಿಡು ಹೇ ಮನುಜ.
೧೫. ಸಂತೋಷದಿಂದಿರುವುದು ಒಂದು ಆಯ್ಕೆಯಷ್ಟೇ, ಫಲಿತಾಂಶವಲ್ಲ. ಎಲ್ಲಿಯ ವರೆಗೆ ನಾವು ಬಯಸುವುದಿಲ್ಲವೋ ಅಲ್ಲಿಯ ವರೆಗೆ ಸಂತೋಷ ವಾಗಿರಲು ಸಾಧ್ಯವಿಲ್ಲ.
೧೬.ತುಕ್ಕು ಹಿಡಿದ ಕಬ್ಬಿಣವನ್ನು ಬೇಕಾದರೆ ಶುದ್ಧ ಕಬ್ಬಿಣವನ್ನಾಗಿ ಮಾಡಬಹುದು. ಆದರೆ ತುಕ್ಕು ಹಿಡಿದ ಮನಸ್ಸುಗಳನ್ನು ಶುದ್ಧವಾಗಿಸಲು ಸಾಧ್ಯ ವಿಲ್ಲ.
೧೭. ಸತ್ಯ ಏನೆಂದು ತಿಳಿಯದೆ ಇನ್ನೊಬ್ಬರ ಮನಸ್ಸಿಗೆ ನೋವು ಮಾಡಬೇಡಿ. ಯಾಕೆಂದರೆ ನಿಮಗೆ ಸತ್ಯ ತಿಳಿಯುವಷ್ಟರಲ್ಲಿ , ಅವರು ನಿಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಕಳೆದುಕೊಂಡಿರುತ್ತಾರೆ.
೧೮. ಹೊಟ್ಟೆಯಲ್ಲಿ ಹೋದ ವಿಷ ಒಬ್ಬನನ್ನು ಹಾಳುಮಾಡಬಹುದು. ಆದರೆ ಕಿವಿಯಲ್ಲಿ ಹೋದ ವಿಷ ಬಹಳಷ್ಟು ಸಂಬಂಧಗಳನ್ನು ಹಾಳು ಮಾಡುತ್ತೆ. ಅದಕ್ಕೆ ಆಲೋಚಿಸಿ ತೀರ್ಮಾನ ಮಾಡಿ.
೧೯..ಮನಸ್ಸಿಗೆ ನೋವಾಗುವಂತೆ ಮಾತನಾಡಿ ನಾವು ಕೆಲವರನ್ನು ಕಳೆದುಕೊಳ್ಳುತ್ತೇವೆ. ಹಾಗೇ ಏನೂ ಮಾತಾಡದೇ ಕೆಲವರನ್ನು ಕಳೆದು ಕೊಳ್ಳುತ್ತೇವೆ. ಏನೇ ಆಗಲಿ ಮನಸ್ಸು ಬಿಚ್ಚಿ ಮಾತನಾಡಿ.
೨೦. ಈ ಜಗತ್ತಿನಲ್ಲಿ ನಮ್ಮದು ಅನ್ನುವುದು ಯಾವುದೂ ಇಲ್ಲ. ಒಂದು ವೇಳೆ ಇದ್ದರೆ ಅದು ನಮ್ಮನ್ನು ಪ್ರೀತಿಸುವ ಇನ್ನೊಂದು ಹೃದಯ ಮಾತ್ರ.
ಮೂಲ:Face Book Quotes.
.

2 thoughts on “ಸುಭಾಷಿತಗಳು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s