Uncategorized

ಅಧ್ಯಾತ್ಮ ಸೌರಭ .

ವಿಷ್ಣುವಿಗೆ ”ಹಂಸ ”ನೆಂಬ ಹೆಸರಿದೆ. ”ಹ” ಕಾರವು ದೇವನೆಂದೂ ”ಸ ”ಕಾರವು ಜೀವ ನೆಂದೂ ಮಧ್ಯೆ ಇರುವ ಶೂನ್ಯವು (೦) ಜೀವ -ದೇವರ ಐಕ್ಯತೆಯ ಸಂಕೇತವೆಂದೂ ”ಕೈವಲ್ಯ ನವನೀತ ”ದ ವಿವರಣೆ. ಬ್ರಹ್ಮನಿಗೂ ಸನಕಾದಿ ಋಷಿಗಳಿಗೂ ಆತ್ಮ ವಿದ್ಯೆಯನ್ನು ಬೋಧಿಸಲು ವಿಷ್ಣುವು ಹಂಸಾವತಾರವನ್ನೆತ್ತಿದ ಎಂಬ ಕಥೆಯು ಪುರಾಣ ಪ್ರತೀತವಾದದ್ದು.
೨.ಈ ಪ್ರಪಂಚದಲ್ಲಿ ಮನುಷ್ಯರಿರೋದು ಪ್ರೀತ್ಸೋಕೆ. ವಸ್ತು ಗಳಿರುವುದು ಉಪಯೋಗಿಸುವುದಕ್ಕೆ. ಆದರೆ ಕೆಲವರು ವಸ್ತುಗಳನ್ನು ಪ್ರೀತಿಸುತ್ತಾರೆ.ಮನುಷ್ಯರನ್ನು ಉಪಯೋಗಿಸ್ಕೊತಾರೆ.
೩.ದೇವನ ಆಟ ಬಲ್ಲವರಾರು ?ಆತನ ಎದುರು ನಿಲ್ಲುವವರಾರು ?
೪.ಆವ ಬಲವಿದ್ದರೇನು, ದೈವ ಬಲವಿಲ್ಲದವಗೆ ?
೫. ಮಾನವನಲ್ಲಿ ನರಕದ ತಳಾ ತಳವನ್ನು ಮುಟ್ಟುವ ಆಳಗಳಿವೆ.ಸ್ವರ್ಗದ ತುತ್ತತುದಿಯನ್ನು ಮುಟ್ಟುವ ಔನ್ನತ್ಯಗಳಿವೆ. ಏಕೆಂದರೆ ಸ್ವರ್ಗ -ನರಕ ಗಳೆರಡನ್ನೂ ಸೃಷ್ಟಿಸಿದವನು ಅವನೇ ತಾನೆ ? ಅವನೊಂದು ಶಾಶ್ವತ ಪವಾಡ ಮತ್ತು ಪರಮ ರಹಸ್ಯ. ಈ ರಹಸ್ಯವನ್ನು ಭೇದಿಸಿದವರು ಪುರಾತನ ಋಷಿ -ಮುನಿಗಳು.
೬. ಕಳಂಕ ಮತ್ತು ದುಃಖ ಭರಿತ ಮನಸ್ಸು ಎಲ್ಲ ರೋಗ ರುಜಿನಗಳಿಗೆ ಮೂಲ ಎಂದು ದಾರ್ಶನಿಕರ ಅಭಿಮತ. ಮನಸ್ಸಿನ ಸ್ಥಿತಿ ದೇಹದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ದುಃಖ ದಲ್ಲಿರುವವರ ದೇಹದಲ್ಲಿ ಬಿಳಿರಕ್ತಕಣಗಳು ಸಾಯುವುದನ್ನು ವಿಜ್ಞಾನವೂ ಸಾಬೀತು ಪಡಿಸುತ್ತದೆ. ಮನಸ್ಸು ಕಾರಣವಾಗಿ ಹುಟ್ಟಿಕೊಂಡ ರೋಗ ಔಷಧಿಯಿಂದ ವಾಸಿಯಾಗದು. ಅದನ್ನು ಗುಣಪಡಿಸುವ ಕೆಲಸವನ್ನು ಮನಸ್ಸೇ ಮಾಡಬೇಕಾಗುತ್ತದೆ. –ತೀರ್ಥರಾಮ ವಳಲಂಬೆ.
೮. ಚಿಂತೆ ಮಾಡುವ ಬದಲು ಚಿಂತನೆ ಮಾಡಬೇಕು. ಆಗ ಮಾತ್ರ ಸಮಸ್ಯೆ ಪರಿಹಾರವಾಗುವುದು.
೯. ಚಿಂತೆ ನಿಮ್ಮನ್ನು ಚಿತೆಗೇರಿಸದಿರಲಿ. ಚಿಂತೆಯನ್ನು ಚಿತೆಗೇರಿಸಿ ನಿರಾಳವಾಗಿ ಬದುಕಿ.
೧೦. ನಮಗೆ ನಾವೇ ನೀಡಬಹುದಾದಂಥ ಅತ್ಯಮೂಲ್ಯ ಉಡುಗೊರೆ ಎಂದರೆ ಮನಃ ಶಾಂತಿ. ಯಾರಿಂದಲೂ ಏನನ್ನೂ ನಿರೀಕ್ಷಿಸದ ಮನಸ್ಸು ಮಾತ್ರ ಇದನ್ನು ನೀಡಬಲ್ಲುದು.

ಮೂಲ :ಸಂಗ್ರಹ

2 thoughts on “ಅಧ್ಯಾತ್ಮ ಸೌರಭ .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s