Uncategorized

ಕನ್ನಡ ಸೌರಭ.

ಹತ್ತಂಕಿ ಜ್ಞಾನ.
ಒಂದು :ಜಗತ್ತಿಗೆ ಒಬ್ಬನೇ ದೇವರು.
ಎರಡು:ಅಯನಗಳು ಎರಡು:ಉತ್ತರಾಯನ, ದಕ್ಷಿಣಾಯನ.
ಮೂರು:ತ್ರಿಮೂರ್ತಿಗಳು ಮೂರು:ಬ್ರಹ್ಮ,ವಿಷ್ಣು, ಮಹೇಶ್ವರ.
ನಾಲ್ಕು :ಪುರುಷಾರ್ಥಗಳು ನಾಲ್ಕು :ಧರ್ಮ, ಅರ್ಥ, ಕಾಮ, ಮೋಕ್ಷ.
ಐದು :ಪಂಚೇಂದ್ರಿಯಗಳು:ಕಣ್ಣು, ಕಿವಿ, ನಾಲಿಗೆ, ಮೂಗು, ಚರ್ಮ.
ಆರು:ಅರಿಷಡ್ವರ್ಗಗಳು:ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ.
ಏಳು:ಸಪ್ತ ಸ್ವರಗಳು:ಸ , ರಿ, ಗ, ಮ, ಪ, ದ, ನಿ.
ಎಂಟು :ಅಷ್ಟ ದಿಕ್ಪಾಲಕರು:ಇಂದ್ರ, ಅಗ್ನಿ , ಯಮ, ನಿರುತಿ, ವರುಣ, ವಾಯು, ಕುಬೇರ, ಈಶ್ವರ.
ಒಂಭತ್ತು :ನವರತ್ನಗಳು :ವಜ್ರ, ಮಾಣಿಕ್ಯ, ಮರಕತ, ಪುಷ್ಯರಾಗ, ನೀಲ, ಗೋಮೇಧಿಕ,ವೈಡೂರ್ಯ, ಮುತ್ತು, ಹವಳ.
ಹತ್ತು:ದಶಾವತಾರಗಳು:ಮತ್ಸ್ಯ, ಕೂರ್ಮ,ವರಾಹ, ನರಸಿಂಹ,ವಾಮನ, ಪರಶುರಾಮ, ರಾಮ,ಕೃಷ್ಣ, ಬುದ್ಧ, ಕಲ್ಕಿ.
ಕನ್ನಡ ಸುಭಾಷಿತಗಳು.
೧.ಸೂರ್ಯನ ಬೆಳಕು ಲೋಕ ಬೆಳಗಿದರೆ, ಕ್ಷಮೆಯಿಂದ ಮನುಷ್ಯ ಬೆಳಗುತ್ತಾನೆ.
೨. ಜೀವನದಲ್ಲಿ ಇಬ್ಬರನ್ನು ಇಂದಿಗೂ ಮರೆಯ ಬಾರದು. ಒಬ್ಬರು ಕಷ್ಟ ಕಾಲದಲ್ಲಿ ಸಹಾಯ ಮಾಡಿದವರು. ಇನ್ನೊಬ್ಬರು ಕಷ್ಟಕಾಲದಲ್ಲಿ ದೂರವಾದವರು.
೩. ನದಿಗೆ ಬಿದ್ದಾಗ ನೀರಿನ ಅಲೆಗಳ ಜತೆ ತೇಲುವುದನ್ನು ಕಲಿಯದೇ, ಸೆಣಸಾಡಿದರೆ ಪ್ರಯೋಜನವಿಲ್ಲ. ಅಂದರೆ ಬದುಕಿನಲ್ಲಿ ತೇಲುವುದನ್ನು ಕಲಿಯಬೇಕೇ ಹೊರತು ಅದರ ಜೊತೆ ಸೆಣಸುವುದನ್ನಲ್ಲ.
೪. ಅನ್ಯರೆದುರಿಗೆ ಮಾಡುವ ಧ್ಯಾನ ಮತ್ತು ದಾನ ಎರಡೂ ವ್ಯರ್ಥ.
೫. ಬದುಕು ತುಂಬಾ ಸಹಜ. ನಮ್ಮ ಅಸಹಜ ಕಲ್ಪನೆಗಳು, ಭ್ರಮೆ ಗಳಿಂದ ಅದು ಅಸಹಜವಾಗುತ್ತದೆ.
೬. ನಿನ್ನ ಹೃದಯವೇ ಪುಷ್ಪೊದ್ಯಾನ. ಅಲ್ಲೇ ಅನಂತ ಸೌಂದರ್ಯದ ಅನುಭೂತಿಯಿದೆ. -ಸಂತ ಕಬೀರದಾಸ.
೭. ಊಳಿಡುವ ಜನಗಳ ಮಧ್ಯೆ ಕಿವಿ ಮುಚ್ಚಿಕೊಳ್ಳುವುದನ್ನು ಕಲಿತು ಕೊಳ್ಳು.
೮. ಹುಚ್ಛೆದ್ದು ಓಡುವ ಕುದುರೆಗೆ, ಅಂಕೆಯಿಲ್ಲದ ಮನಸ್ಸಿಗೆ ಲಗಾಮು ಹಾಕದಿದ್ದರೆ ಅನರ್ಥ ನಿಶ್ಚಿತ.
೯. ನಿಜದ ಮಾತುಗಳು ಸುಂದರವಲ್ಲ. ಸುಂದರವಾದ ಮಾತುಗಳೆಲ್ಲ ನಿಜವಲ್ಲ.
೧೦ . ಈ ಬದುಕು ಬಹಳ ಕಷ್ಟದ್ದು. ಅದು ಅನೇಕ ಸವಾಲುಗಳೊಂದಿಗೆ ಬರುತ್ತದೆ.ಆ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರೂ ಕಷ್ಟ ಪಡಲೇ ಬೇಕು.
ಮೂಲ:ಸಂಗ್ರಹ.

2 thoughts on “ಕನ್ನಡ ಸೌರಭ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s