Uncategorized

ನಗೆ ಹನಿ

೧. ಪ್ರಶ್ನೆ:ಎಲ್ಲಾ ತತ್ತ್ವ ಜ್ಞಾನಿಗಳು ಜೀವನದಲ್ಲಿ ”ಮುಂದೆ ಬನ್ನಿ” ಅಂತ ಹೇಳಿದ್ರೆ ಬಸ್ ನಲ್ಲಿ ಕಂಡಕ್ಟರುಗಳು ”ಹಿಂದೆ ಹೋಗಿ ”ಅಂತಾರಲ್ಲ ?
ಉ : ಮುಂದಾಗಲಿ, ಹಿಂದಾಗಲಿ ತೊಂದರೆ ಇಲ್ಲ. ”ಮೇಲೆ ಹೋಗಿ” ಅನ್ನದಿದ್ದರಾಯಿತು.
೨. ಮಂಕ:ಅಪ್ಪ,ಒಂದು ವೇಳೆ ನಿಮ್ಮ ಪಕ್ಷದ ಯಾರಾದರೂ ಬೇರೆ ಪಕ್ಷಕ್ಕೆ ಸೇರಿದರೆ ಏನು ಹೇಳ್ತೀರಿ?
ರಾಜಕಾರಣಿ:ವಂಚನೆ.
ಮಂಕ:ಒಂದು ವೇಳೆ ಬೇರೆ ಪಕ್ಷದ ವ್ಯಕ್ತಿ ನಿಮ್ಮ ಪಕ್ಷಕ್ಕೆ ಸೇರಿಕೊಂಡರೆ ?
ರಾಜಕಾರಣಿ:ಮನಃ ಪರಿವರ್ತನೆ.
೩. ಪ್ರ :ಹಣ ಮರದಲ್ಲಿ ಬೆಳೆಯುವಂತಿದ್ದರೆ ?
ಉ:ಶಾಖಾ ವ್ಯವಸ್ಥಾಪಕ (Branch Manager)ಎನ್ನಿಸಿಕೊಳ್ಳಲು ಟೊಂಗೆಯ (Branch)ಮೇಲೆ ಕೂಡ್ರ ಬೇಕಾಗುತ್ತಿತ್ತು.
೪. ಪ್ರ:ಜಿಡ್ಡಿನ ಅಂಶ ಇಲ್ಲದಿದ್ದರೂ ಹೆಂಡವನ್ನೇಕೆ ”ಎಣ್ಣೆ”ಅಂತ ಕರೀತಾರೆ ?
ಉ:ಸೇವಿಸಿದವರನ್ನು ಜಾರಿಸುವ ಗುಣವಿರುವುದರಿಂದ, ಅದು ”ಎಣ್ಣೆ” ಅನಿಸಿಕೊಂಡಿದೆ.
೫. ಪ್ರಶ್ನೆ:ತಲೆ ಉಪಯೋಗಿಸದೆ ಮಾಡ ಬಹುದಾದ ದೊಡ್ಡ ಕೆಲಸವೇನಾದರೂ ಇದೆಯೇ ?
ಉ:ಬಂಡೆ ಒಡೆಯಲಿಕ್ಕೆ ತಲೆ ಉಪಯೋಗಿಸಬಾರದು.
೬. ಮಹಾಸಾಗರದಲ್ಲಿ ಒಂದು ಹಡಗು ಮುಳುಗುತ್ತಿತ್ತು. ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ಕೇಳಿದ:”ಇಲ್ಲಿಂದ ನೆಲ ಎಷ್ಟು ದೂರದಲ್ಲಿದೆ ?
ಇನ್ನೊಬ್ಬನೆಂದ:”ಮೂರು ಕಿಲೋಮೀಟರ್”. ಕೂಡಲೇ ಆ ವ್ಯಕ್ತಿ ಸಾಗರಕ್ಕೆ ಹಾರಿ ಮತ್ತೆ ಕೇಳಿದ :”ಯಾವ ದಿಕ್ಕಿಗೆ ?”
ಇನ್ನೊಬ್ಬ ಉತ್ತರಿಸಿದ:”ಕೆಳಕ್ಕೆ . ”
೭. ಪ್ರ :ತಿನ್ನಲಾಗದ jam ಯಾವುದು?
ಉ:Traffic jam.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s