Uncategorized

ನಿಮಗೆ ಗೊತ್ತೇ ?

೧. Mount Everest ಹಿಮಾಲಯದ ಈಶಾನ್ಯ ಶ್ರೇಣಿಯಲ್ಲಿದೆ. ವಿಶ್ವದಲ್ಲೇ
ಅತ್ಯಂತ ಎತ್ತರದ ಶಿಖರ. ಇದರ ಎತ್ತರ ೮,೮೪೮ ಮೀಟರ್ ಗಳು. ಆರಂಭದಲ್ಲಿ
ನೇಪಾಳೀಯರು ಇದನ್ನು ಸ್ವರ್ಗ ಮಾತಾ (ಸ್ವರ್ಗ ಶಿಖರ )ಎಂದು ಕರೆಯುತ್ತಿದ್ದರು.
ಈ ಶಿಖರಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ೧೮೫೨ ರಲ್ಲಿ ಭಾರತ /ಬ್ರಿಟಿಷ್/
ಸರಕಾರ ಸಮೀಕ್ಷಾ ತಂಡವೊಂದನ್ನು ಕಳಿಸಿತು. ಈ ತಂಡದಲ್ಲಿ ಸರ್ವೇಯರ್
ಆಗಿದ್ದ General Sir George Everest, ಬೆಂಗಾಲಿ ಗುಮಾಸ್ತ ರಾಧಾನಾಥ ಹಾಗೂ
ಇತರ ಅನೇಕ ವ್ಯಕ್ತಿಗಳಿದ್ದರು. ರಾಧಾನಾಥ್ ತುಂಬಾ ಕಷ್ಟಪಟ್ಟು ಈ ಶಿಖರದ ಬಗ್ಗೆ
ಬಹಳಷ್ಟು ಮಾಹಿತಿ ಸಂಗ್ರಹಿಸಿ ಎಲ್ಲ ಸಮಾಚಾರಗಳನ್ನು George ಗೆ ರವಾನಿಸುತ್ತಿದ್ದರು.
ಅನಂತರ ಈ ಶಿಖರಕ್ಕೆ ಹೆಸರಿಡುವ ಪ್ರಶ್ನೆ ಬಂದಾಗ, ಬಡ ರಾಧಾನಾಥ್ ರನ್ನು
ನಿರ್ಲಕ್ಷಿಸಿ George Everest ಅವರ ಹೆಸರನ್ನೇ ಇಡಲಾಯಿತು.
೨.ಜಾನಪದ, ಶಾಸ್ತ್ರೀಯ,ಪಾಶ್ಚಾತ್ಯ ಹೀಗೆ ನೂರಾರು ಶೈಲಿಯ ನೃತ್ಯಗಳು ಇಂದು
ಪ್ರಚಲಿತವಾಗಿವೆ. ಯಾವುದೇ ಶೈಲಿಯದ್ದಾದರೂ ದೇಹ, ಬುದ್ಧಿ ಭಾವನೆಗಳ
ಸಾಮರಸ್ಯ ಬೇಡುವ ನೃತ್ಯ ನಮ್ಮ ಸಮಗ್ರ ಆರೋಗ್ಯದ ಮೇಲೆ ಪರಿಣಾಮ ಬೀರ ಬಲ್ಲುದು.
ನೃತ್ಯ ಇಡೀ ದೇಹಕ್ಕೆ ವ್ಯಾಯಾಮ ನೀಡುತ್ತದೆ. ನರ್ತಿಸುವಾಗ ಕೈ ಕಾಲುಗಳ ಲಯಬದ್ಧ
ಚಲನೆಯಿಂದಾಗಿ ಇಡೀ ದೇಹಕ್ಕೆ ರಕ್ತ ಸಂಚಾರ ಹೆಚ್ಚಾಗುತ್ತದೆ . ಉಸಿರಾಟದ ಗತಿ ಹೆಚ್ಚುತ್ತದೆ.
ಇದರಿಂದಾಗಿ ಹೃದಯದ ಕಾರ್ಯಕ್ಷಮತೆ ಹೆಚ್ಚಿದರೆ ಶ್ವಾಸಕೋಶ ಬಲವಾಗುತ್ತದೆ.
ನರ್ತಿಸಿದರೆ ದೇಹದ ಸಮತೋಲನ ಹೆಚ್ಚಿ ಮಾಂಸ ಖಂಡಗಳು ದೃಢವಾಗುತ್ತವೆ.
ಕೈ -ಕಾಲು ಬಗ್ಗಿಸುವುದರಿಂದ ಕೀಲುಗಳಲ್ಲಿ ನಿರಂತರವಾಗಿ ಚಲನೆಯಾಗಿ, ವಯಸ್ಸಾದಂತೆ
ಸಂಧಿ ನೋವಿನ ಸಾಧ್ಯತೆ ಕಡಿಮೆ. ಅಂತರಂಗದ ಅಭಿವ್ಯಕ್ತಿಯಾಗಿ ದೈಹಿಕ ಚಲನೆಗಳ
ಮೂಲಕ ಹೊರ ಹೊಮ್ಮುವ ನೃತ್ಯಕ್ಕೆ ವಯಸ್ಸಿನ ಮಿತಿಯಿಲ್ಲ. ಅದುಮಿಟ್ಟ ಭಾವನೆಗಳ
ಸಕಾರಾತ್ಮಕ ಅಭಿವ್ಯಕ್ತಿಯಿಂದ ಮನಸ್ಸಿಗೆ ಬಿಡುಗಡೆಯ ಭಾವದಿಂದ ಆನಂದ ಸಿಗುತ್ತದೆ.
ನೃತ್ಯ ಏಕಾಗ್ರತೆಯನ್ನು ಬಯಸುತ್ತದೆ. ಹೆಜ್ಜೆಗಳ ಕ್ರಮಬದ್ಧ ಚಲನೆಯಿಂದ ಮನಸ್ಸಿನಲ್ಲಿ
ಕೂಡುವ-ಕಳೆಯುವ ಸಾಮರ್ಥ್ಯ ಹೆಚ್ಚುತ್ತದೆ. ಅದೇ ರೀತಿ ನೃತ್ಯದಿಂದ ವಯೋ ಸಹಜ
ಮರೆವನ್ನೂ ತಡೆಗಟ್ಟಬಹುದು. ಈಗ ಮಾನವನ ಸಾಕಷ್ಟು ಕಾಯಿಲೆಗಳಿಗೆ ನೃತ್ಯವನ್ನು
ಚಿಕಿತ್ಸೆಯಾಗಿಯೂ ಬಳಸಲಾಗುತ್ತದೆ.
ತಾಳ್ಯಾಕ ತಂತ್ಯಾಕ ರಾಗದ ಚಿಂತ್ಯಾಕ
ಹೆಜ್ಜ್ಯಾಕ, ಗೆಜ್ಜ್ಯಾಕ ಕುಣಿಯೋಣು ಬಾ. –ದ. ರಾ. ಬೇಂದ್ರೆ.
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s