Uncategorized

ಚಿಂತನ.

ಕೋಪ, ತಾಪ,ಆಸೆ,ನಿರಾಸೆ,ಬಯಕೆ,ಕಲ್ಪನೆ,ಪ್ರೀತಿ ಗಳನ್ನೆಲ್ಲ ಹೊರ
ಹಾಕಲು ಮನುಷ್ಯನ ಸಹಾಯಕ್ಕೆ ಬಂದದ್ದು ವಕ್ರ ರೇಖಾ ಚಿತ್ರಣ
ಯಾನೆ ವ್ಯಂಗ್ಯ ಚಿತ್ರ. ಸರ್ವಾಧಿಕಾರಿಗಳ ಕಾಲದಲ್ಲಿ, ದುಷ್ಟ, ಭ್ರಷ್ಟ
ಅಧಿಕಾರಿಗಳ ಆಡಳಿತದಲ್ಲಿ,ಶ್ರೀ ಸಾಮಾನ್ಯನಿಗೆ ತನ್ನ ರೋಷವನ್ನು
ಹೊರ ಹಾಕಲು ಅವನ ಸಹಾಯಕ್ಕೆ ಬಂದದ್ದು ವಕ್ರ ರೇಖಾ /ವ್ಯಂಗ್ಯ
ಚಿತ್ರಗಳ ಹಾದಿ. ೧೫ನೇ ಶತಮಾನದಲ್ಲಿ ಯುರೋಪ್, ಚೈನಾ, ಈಜಿಪ್ಟ್
ದೇಶಗಳಲ್ಲಿ ಪತ್ರಿಕೆಗಳು ಆರಂಭವಾದಾಗ ವ್ಯಂಗ್ಯ ಚಿತ್ರಗಳಿಗೆ ಬೆಳಕು
ಕಂಡಿತ್ತು. ವಿಲ್ಲಿಯಂ ಹೊಗಾರ್ಥ್ (೧೬೯೭-೧೭೬೪) ”ಆಧುನಿಕ ವ್ಯಂಗ್ಯ
ಚಿತ್ರಗಳ ಜನಕ ” ಎಂದು ಇತಿಹಾಸ ದಾಖಲಿಸಿದೆ. ರಾಜಕೀಯ ಏರು-ಪೇರುಗಳು,
ಆಡಳಿತ ಅನಾಹುತಗಳು ವ್ಯಂಗ್ಯಚಿತ್ರಕಾರರನ್ನು ಸೆಳೆದವು. ಪತ್ರಿಕಾ
ಬರವಣಿಗೆ ಮತ್ತು ವ್ಯಂಗ್ಯ ಚಿತ್ರಗಳು ಭ್ರಷ್ಟ ಆಡಳಿತದ, ಸಮಾಜದ
ಕುಂದು ಕೊರತೆಗಳ ವಿರುದ್ಧದ ಆಯುಧವಾಯಿತು.
ಕತೆಗಾರನ ಪ್ರತಿಭೆ.
ಕಲ್ಲಿನ ಕೋಳಿ ಕೂಗುವುದು,ಮರದ ಕುದುರೆ ಜಿಗಿಯುವುದು,ಕುಂಟ
ಏಳು ಸಮುದ್ರ ನೆಗೆಯುವುದು, ಹುಲಿ, ಕರಡಿ, ನರಿ, ಸಿಂಹ, ಮೊಲಗಳೆಲ್ಲಾ
ಮಾತಾಡುವುದು –ಇಂಥವೆಲ್ಲ ನಡೆಯುವುದು ಕತೆಗಳಲ್ಲಿ ಮಾತ್ರ.
ಕಥೆಗೆ ಕಾಲಿಲ್ಲ. ಆದರೂ ಅದು ನಡೆಯುತ್ತೆ. ”ಹರಿವ ನದಿಗೆ ಮೈ ಯೆಲ್ಲಾ
ಕಾಲು. ಉರಿವ ಬೆಂಕಿಗೆ ಮೈಯೆಲ್ಲಾ ನಾಲಿಗೆ ”. ಹಾಗೆಯೇ ಕಥೆಗೂ ಮೈಯೆಲ್ಲಾ
ಕಾಲು, ಶರೀರವೆಲ್ಲಾ ನಾಲಿಗೆ ”. ಆದ್ದರಿಂದಲೇ ಕತೆ ಎಂಬುದು ಅದನ್ನು
ಹೇಳುವವರು, ಕೇಳುವವರು ನಡೆಸಿದಷ್ಟು ದೂರ ನಡೆಯುತ್ತದೆ. ತಿರುಗಿಸಿದ
ದಿಕ್ಕಿಗೆಲ್ಲಾ ಹರಿಯುತ್ತದೆ. ಕಥೆ ಎಂಬುದು ಕೇಳಿದರೆ ಬದುಕುತ್ತದೆ. ಕೇಳದಿದ್ದರೆ
ತಾನೇ ಸಾಯುತ್ತದೆ.
ಮೂಲ:ಸಂಗ್ರಹ.

2 thoughts on “ಚಿಂತನ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s