Uncategorized

ನಿಮಗೆ ಗೊತ್ತೇ ?

೧ Pulitzer ಪ್ರಶಸ್ತಿಯನ್ನು ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದವರಿಗೆ
ಕೊಡಲಾಗುತ್ತದೆ.
೨. ತಮಿಳಿನ ”ವೇದ ” ಎನಿಸಿರುವ ”ತಿರುಕ್ಕುರಳ್ ” ಬರೆದ ಕವಿ
–ತಿರುವಳ್ಳುವರ್.
೩. ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ
-ಆಶಾಪೂರ್ಣ ದೇವಿ.
೪. ಅರುಣಾಚಲ ಪ್ರದೇಶಕ್ಕೆ ಮೊದಲು ನೇಫಾ ಎಂಬ ಹೆಸರಿತ್ತು.
೫.. ಏಷ್ಯಾದಲ್ಲಿ ಅತಿ ದೊಡ್ಡದೆನಿಸಿದ Rock Garden ಚಂಡೀಘರ್ ನಲ್ಲಿದೆ.
೬. ಇತರ ದ್ರಾವಿಡ ಭಾಷೆಗಳಂತೆ ತುಳುವಿಗೂ ಲಿಪಿಯಿತ್ತು.
ಮಲೆನಾಡು ಪ್ರದೇಶದಲ್ಲಿ ಇದೇ ಲಿಪಿಗೆ ”ತಿಗಳಾರ ಲಿಪಿ” ಎಂಬ ಹೆಸರಿದೆ.
೭. ಒಡಿಶಾವನ್ನು ಹಿಂದೆ ಕಳಿಂಗ ಎಂದು ಕರೆಯಲಾಗುತ್ತಿತ್ತು.
ಒರಿಸ್ಸಾ ಎಂದಿದ್ದ ಹೆಸರನ್ನು ಈಗ ಒಡಿಶಾ ಎಂದು ಬದಲಿಸಲಾಗಿದೆ.
೮. ತುಳು ಮಹಾಭಾರತವನ್ನು ರಚಿಸಿದ ಕವಿ ಅರುಣಾಬ್ಜ,ಕೊಡವೂರಿನವನು.
ಕೊಡವೂರಿನ ಶಂಕರ ನಾರಾಯಣ ದೇವರ ಭಕ್ತನು.
೯. ಹಾವುಗಳ ಹಳ್ಳಿ ”ಶೆತ್ ಪಾಲ್” ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿದೆ.
೧೦. ವಿಯೆಟ್ನಾಮ್ ಈಗಿನ ಹೆಸರು. ಅದನ್ನು ಚಂಪಾ ಎಂದೇ ಕರೆಯಲಾಗುತ್ತಿತ್ತು.
೧೧ . ಅಮೇರಿಕಾ ಸಂಯುಕ್ತ ಸಂಸ್ಥಾನ ತನ್ನ ೫೦ ರಾಜ್ಯಗಳಿಗೆ ಪ್ರತ್ಯೇಕ ಹಾಗೂ
ಸಮಗ್ರ ರಾಷ್ಟ್ರಕ್ಕೊಂದು ಹೀಗೆ ೫೧ ಸಂವಿಧಾನಗಳ ದೇಶ.
೧೨. ಕೊಹಿನೂರ್ ಎಂದರೆ ಉರ್ದುವಿನಲ್ಲಿ ”ಬೆಳಕಿನ ಪರ್ವತ”. ಸಂಸ್ಕೃತ
ಬರಹಗಳ ಪ್ರಕಾರ ”ಸ್ಯಮಂತಕ ಮಣಿ”. ಇರಾನಿನ ನಾದಿರ್ ಷಾ ೧೮ನೇ
ಶತಮಾನದಲ್ಲಿ ಭಾರತವನ್ನು ಗೆದ್ದನಂತರ ಕೊಹಿನೂರ್ ಎಂದು ಮರು
ನಾಮಕರಣ ಮಾಡಿದ. ಕೊಹಿನೂರ್ ವಜ್ರ ಬ್ರಿಟನ್ ನ ರಾಣಿಯ ಕಿರೀಟಾಭರಣಗಳ
ಒಂದು ಭಾಗವಾಗಿದ್ದು ”Tower of London”ನ ಐತಿಹಾಸಿಕ ಕಟ್ಟಡದಲ್ಲಿ
ಪ್ರದರ್ಶನಕ್ಕಿಡಲ್ಪಟ್ಟಿದೆ.
೧೩. ಚೀನಾದಲ್ಲಿ ಎರಡು ಸಾವಿರ ವರ್ಷಗಳ ಹಿಂದೆ Football ಆಟವನ್ನು
ಹೋಲುವ ”ಟ್ಯು ಚು ” ಎಂಬ ಆಟವಿತ್ತು. ಟ್ಯು =ಕಾಲಿನಲ್ಲಿ ಒದೆಯುವುದು;
ಚು =ಚರ್ಮದಿಂದ ಮಾಡಿದ ಚೆಂಡು.
ಮೂಲ:ಸಂಗ್ರಹ.

2 thoughts on “ನಿಮಗೆ ಗೊತ್ತೇ ?

Leave a Reply to kvvenkataramana Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s