Uncategorized

ಮನಸಿನ ಮಾತು.

೧.ಮನಸ್ಸಿನ ನೋವು ಮನಸ್ಸಿಗೆ ಹತ್ತಿರ ಆದವರಿಗೆ ಮಾತ್ರ
ಹೇಳೋಕ್ಕಾಗೋದು. ಆದರೆ ಅವರಿಗೆ ಕೇಳೋ ತಾಳ್ಮೆ ಇಲ್ಲದಿದ್ದಾಗ,
ಆಗಿರೋ ನೋವಿಗಿಂತ ಅದನ್ನ ಹೇಳಿಕೊಳ್ಳೋಕೆ ಯಾರೂ ಇಲ್ಲ
ಅನ್ನೋ ಒಂಟಿತನದ ನೋವೇ ಹೆಚ್ಚಾಗಿ ಕಾಡುತ್ತೆ.
೨. ಇತರರ ಮಾತು ನಡವಳಿಕೆಗಳನ್ನ ಪ್ರಶ್ನಿಸುವ ನಾವು ಒಂದು ಸಲ
ನಮ್ಮನ್ನು ಸೂಕ್ಷ್ಮವಾಗಿ ಗಮನಿಸಿದಾಗನಿಜಕ್ಕೂ ತುಂಬಾ ಆಶ್ಚರ್ಯ
ವಾಗುತ್ತೆ. ಯಾಕೆಂದರೆ ನಮ್ಮ ವರ್ತನೆ ಹಾಗಿರುತ್ತೆ.
೩. ನಮ್ಮನ್ನು ದಡ್ಡರಂತೆ ಬಿಂಬಿಸೋರ ಮುಂದೆ ದಡ್ಡರಂತಿರೋದು
ಜಾಣತನ. ಬುದ್ಧಿವಂತಿಕೆ ಪ್ರದರ್ಶಿಸೋದು ದಡ್ಡತನ. ವಾದಿಸದೆ
ಮೌನವಾಗಿರೋದು ದೊಡ್ಡತನ. ನಗ್ತಾ ಎದ್ದು ಹೊರಡೋದು
ನಮ್ಮತನ.
೪.ನಿಮ್ಮನ್ನು ನಿರ್ಲಕ್ಷಿಸುವವರು ಎಂತಹ ಮಹಾನ್ ವ್ಯಕ್ತಿಗಳಾಗಿದ್ದರೂ
ಅವರಿಂದ ದೂರವಿರಿ. ನಿಮಗೆ ಬೆಲೆ ಕೊಡುವವರು ಸಾಮಾನ್ಯ ವ್ಯಕ್ತಿ
ಗಳಾಗಿದ್ದರೂ ಪರವಾಗಿಲ್ಲ. ಅವರನ್ನು ಗೌರವಿಸಿ.
೫. ಕತ್ತಲಾಗಬೇಕೆಂದರೆ ರಾತ್ರಿ ಆಗ ಬೇಕೆಂದೇನಿಲ್ಲ. ನೀವು ಕಣ್ಣು
ಮುಚ್ಚಿದರೂ ಕತ್ತಲೆ. ಹಾಗೆಯೇ ಮನುಷ್ಯನ ಸುಂದರವಾದ ಬದುಕು
ಹಾಳಾಗ ಬೇಕೆಂದರೆ ಕಷ್ಟಗಳೇ ಬರಬೇಕೆಂದೇನಿಲ್ಲ. ಅವನ ಕೈಯಾರೆನೂ
ಹಾಳು ಮಾಡಿಕೊಳ್ಳಬಹುದು.
೬. ಇದು ಕಲಿಕಾಲ ಸ್ವಾಮೀ. ವಿಷ ವರ್ತುಲದ ಸುಳಿಯಲ್ಲಿ ಸಿಲುಕಲು
ಎಳೆಯೊಂದೇ ಸಾಕು. ಬಲೆಯೇನೂ ಬೇಕಿಲ್ಲ. ನುಡಿವ ಮಾತಿನಲಿ,
ಬರೆವ ಅಕ್ಷರದಲಿ ಅಡಿಗಡಿಗೂ ಇರಲಿ ಎಚ್ಚರ. ಸುಮ್ಮನಿದ್ದವರನ್ನೂ
ಸಹಿಸದ ಜನ ಸಿಕ್ಕಿಸಿ ಹಾಕುವರು ಯಾವುದಾದರೂ ಕಾಲಂನ ಅಡಿ.
೭. ಕಳೆದುಕೊಳ್ಳುವುದಕ್ಕಿಂತ ದೊಡ್ಡ ವಿಷಾದ ಇನ್ನೊಂದಿಲ್ಲ!!
ಅದು… ವಸ್ತು, ಪ್ರೀತಿ,ಸಂಬಂಧ, ಸ್ನೇಹ… ಯಾವುದೇ ಆಗಲಿ,
ಪದೇ ಪದೇ ನೆನಪಾಗಿ ಮನವನ್ನು ಕಲಕುತ್ತದೆ.
೮. ಇತರರ ಜೊತೆ ನಿಮ್ಮನ್ನು ಹೋಲಿಕೆ ಮಾಡಿಕೊಂಡು ಬದುಕು
ಮತ್ತು ಸಮಯ ವ್ಯರ್ಥ ಮಾಡಬೇಡಿ. ಹೋಲಿಕೆ ಮಾಡುವುದೇ ಆದರೆ
ನಿನ್ನೆ ಹೇಗಿದ್ದಿರಿ, ಇಂದು ಹೇಗಿದ್ದೀರಿ ಎಂಬುದನ್ನು ಹೋಲಿಕೆ ಮಾಡಿಕೊಳ್ಳಿ.
೯. ಜೀವನವೆಂದರೆ ನಮ್ಮ ಸಮಯ ಯಾವಾಗ ಕೊನೆಗೊಳ್ಳುತ್ತದೆ ಎಂದು
ಗೊತ್ತಿಲ್ಲದ ಆಟ. ಇದ್ದುದರಲ್ಲಿಯೇ ಖುಷಿಪಡುತ್ತ ಆಡುತ್ತಲೇ ಇರೋಣ.
೧೦. ಜೀವನದಲ್ಲಿ ನಿರಾಶೆಗಿಂತ ನಿರೀಕ್ಷೆಯೇ ಒಳ್ಳೆಯದು.
೧೧. ಕಣ್ಣು ನಕ್ಕರೂ ಒದ್ದೆಯಾಗುತ್ತೆ,ಅತ್ತರೂ ಒದ್ದೆಯಾಗುತ್ತೆ. ಆದರೆ
ನಗಿಸಿದವರು ನಾಲ್ಕು ದಿನ ನೆನಪಿನಲ್ಲಿದ್ದರೆ, ನೋಯಿಸಿದವರು
ಜೀವನವಿಡೀ ನೆನಪಿನಲ್ಲಿರುತ್ತಾರೆ.
೧೨. ನಿಮ್ಮ ಜೀವನದ ಹಾದಿಯಲ್ಲಿ… ನಿಮ್ಮನ್ನು ನೋಡಿ ಬೊಗಳುವ
ಪ್ರತಿ ನಾಯಿಗೂ… ಕಲ್ಲು ಹೊಡೆಯುತ್ತಾ ನಿಂತರೆ.. ನೀವೆಂದಿಗೂ
ನಿಮ್ಮ ಗುರಿಯನ್ನು ಮುಟ್ಟುವುದಿಲ್ಲ.
೧೩.ನಂಬಿಕೆಯಿದ್ದರೆ ಮೌನವೂ ಅರ್ಥವಾಗುತ್ತೆ. ನಂಬಿಕೆ ಇಲ್ಲದಿದ್ದರೆ
ಪ್ರತಿ ಶಬ್ದದಲ್ಲೂ ಅಪಾರ್ಥ ಗೋಚರಿಸುತ್ತದೆ. ನಂಬಿಕೆ ಎಲ್ಲಾ
ಸಂಬಂಧಗಳ ಜೀವಾಳ.
೧೪.ಹಿಂಪಡೆಯಲಾಗದ ನೂರು ಮಾತನಾಡಿ ನೋಯಿಸುವ ಬದಲು
ನೂರು ಖುಷಿ ಕೊಡುವ ಒಂದೇ ಒಂದು ಮಾತನ್ನಾಡು. ಅದೇ ನೀ
ನನಗೆ ಕೊಡುವ ಸಾಂತ್ವನ.
೧೫. ಮನಸ್ಸು ಮಾಡಿದರೆ ಜಗತ್ತಿನಲ್ಲಿ ಯಾರನ್ನು ಬೇಕಾದರೂ
ಸೋಲಿಸಬಹುದು. ಆದರೆ ಸೋಲಿನಲ್ಲೂ ನಗುವವರನ್ನು ಮಾತ್ರ
ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.
ಮೂಲ :ಸಂಗ್ರಹ.

2 thoughts on “ಮನಸಿನ ಮಾತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s