Uncategorized

ಅಧ್ಯಾತ್ಮ ಸೌರಭ.

೧.”ವೆಂಕಟಾದ್ರಿ samam ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನಃ ”
ವೇಂಗಡ ಬೆಟ್ಟಕ್ಕೆ ಸಮನಾದ ಮತ್ತೊಂದು
ನೆಲೆ ಇಡಿಯ ಸೃಷ್ಟಿಯಲ್ಲಿಯೇ ಇಲ್ಲ.
ವೇಂಗಡ ಬೆಟ್ಟ ಎಂದರೆ ತಿರುಮಲೆ; ತಿಮ್ಮಪ್ಪನ ಆಲಯ.
”ವೇಂ” ಎಂದರೆ ಎಲ್ಲ ಪಾಪಗಳು. ”ಕಟ”ಎಂದರೆ ಅವನ್ನು
ಸುಡುವುದು.ನಮ್ಮ ಎಲ್ಲ ಪಾಪಗಳನ್ನು ಯಾವ ಬೆಟ್ಟ
ಸುಡುತ್ತದೆಯೋ ಅದೇ ವೇಂಗಡ/ವೆಂಕಟಾಚಲ.
ತಿರುಪತಿ/ತಿರುಮಲೆ ಎನ್ನುವುದು ೭ ಬೆಟ್ಟಗಳ ಸಾಲು —
ಶೇಷಾಚಲ ,ವೃಷಭಾಚಲ,ಗರುಡಾಚಲ,ಅಂಜನಾದ್ರಿ,
ನಾರಾಯಣಾದ್ರಿ,ವೃಷಾದ್ರಿ ಮತ್ತು ವೆಂಕಟಾದ್ರಿ -ಇವೇ ಆ
ಏಳು ಬೆಟ್ಟಗಳು. ವೆಂಕಟರಮಣ, ಶ್ರೀನಿವಾಸ ,ಬಾಲಾಜಿ,
ವೆಂಕಟೇಶ್ವರ, ಗೋವಿಂದ, ವೆಂಕಟೇಶ–ಹೀಗೆ ಹಲವು
ಹೆಸರುಗಳು ತಿಮ್ಮಪ್ಪನಿಗೆ.
೨. ವಿಷ್ಣು ಎಂದರೆ ಅನಂತವಾದದ್ದು. ಎಲ್ಲೆಲ್ಲಿಯೂ
ಹರಡಿಕೊಂಡಿರುವ ತತ್ತ್ವ. ಅವನ ಹೆಸರುಗಳೂ ಅನಂತ
ವಾಗಿವೆ. ಅವನು ಯಾವುದೇ ಹೆಸರು (ನಾಮ) ಮತ್ತು ಆಕೃತಿ
(ರೂಪ)ಗಳಿಗೆ ಸೀಮಿತನಲ್ಲ.
೩. ಎಲ್ಲ ಯೋಗಗಳ ಸಮನ್ವಯವೇ ಧರ್ಮಯೋಗ. ಭಕ್ತಿಯೋಗದಲ್ಲಿ
ಹೃದಯಕ್ಕೆ,ಜ್ಞಾನಯೋಗದಲ್ಲಿ ತಲೆಗೆ,ಕರ್ಮಯೋಗದಲ್ಲಿ ಕೈಗಳಿಗೆ,
ಧ್ಯಾನಯೋಗದಲ್ಲಿ ಮನಕ್ಕೆ ಮಹತ್ತ್ವ. ಆಯಾ ಯೋಗಗಳಿಂದ
ಆಯಾ ಅಂಗಗಳು ವಿಕಾಸ ಹೊಂದುತ್ತವೆ.
೪.ಪ್ರಕೃತಿಯೇ ಸೃಷ್ಟಿಕರ್ತನ Art Gallery. ಅದು ನಿಮ್ಮ ಅಂತಃ ಪ್ರಜ್ಞೆಯನ್ನು
ಕಾಡಿದಾಗ, ಆ ಕಾಡುವಿಕೆ ನಿಮ್ಮಲ್ಲಿ ಕನಸುಗಾರಿಕೆಯನ್ನು ಹುಟ್ಟಿಸಿ
ಕವಿತೆ ಯಾ ಕಲೆಯ ಮೂಲಕ ಹೊರ ಹೊಮ್ಮಿಸುವ ತುಡಿತ ನಿಮ್ಮಲ್ಲಿ
ಉಂಟಾದಾಗ ಒಳ್ಳೆಯ ಕಲಾಕೃತಿ ಮೂಡಿಬರಲು ಸಾಧ್ಯವಿದೆ.
೫. ಮಾನುಷ ನಿರ್ಣಾಯಕರು ಕರುಣೆ ತೋರಿಸಬಹುದು . ಆದರೆ, ನಿಸರ್ಗದ
ನಿಯಮಗಳೆದುರು ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ .
೬. ವೈಕುಂಠ ಏಕಾದಶಿ , ಗೀತಾ ಜಯಂತಿ (ಮಾರ್ಗಶಿರ ಶುದ್ಧ ಏಕಾದಶಿ)ದಿನದಂದು
ಜಗದ್ಗುರು ಭಗವಾನ್ ಶ್ರೀ ಕೃಷ್ಣ ಮನುಕುಲಕ್ಕೆ ಭಗವದ್ಗೀತೆಯನ್ನು ಬೋಧಿಸಿದ.
೭.ದೇವರನ್ನು ಒಲಿಸಿಕೊಳ್ಳಲು ಜಪ ,ಹೋಮ ,ಧ್ಯಾನ ಮತ್ತುಅರ್ಚನೆ ಎಂದು
ನಾಲ್ಕು ಬಗೆ ಎನ್ನುತ್ತವೆ ಶಾಸ್ತ್ರಗಳು. .
೮. ಮನುಷ್ಯನ ಐದು ಬೆರಳುಗಳು ಪಂಚ ತತ್ತ್ವ ದಿಂದ ಕೂಡಿವೆ. ಹೆಬ್ಬೆರಳು -ಅಗ್ನಿ ತತ್ತ್ವ ,
ತೋರು ಬೆರಳು -ವಾಯು ತತ್ತ್ವ ,ಮಧ್ಯ ಬೆರಳು -ಆಕಾಶ ತತ್ತ್ವ,ಉಂಗುರ ಬೆರಳು –
ಪೃಥ್ವಿ ತತ್ತ್ವ ,ಕಿರು ಬೆರಳು ಜಲ ತತ್ತ್ವ ಗಳ ಪ್ರತೀಕ .
೯. ಶ್ರೀ ಕೃಷ್ಣನ ತರುಣ ರೂಪವೇ ಶ್ರೀನಿವಾಸ ದೇವರು ಎಂಬ ಮಾತಿದೆ. ಶ್ರೀ ಕೃಷ್ಣ
ದೇವರನ್ನು ಅನ್ನ ಬ್ರಹ್ಮ,ಶ್ರೀನಿವಾಸ ದೇವರನ್ನು ಕಾಂಚನ ಬ್ರಹ್ಮ,ಹಾಗೂ
ಪಂಡರಾಪುರದ ದೇವರನ್ನು ನಾದ ಬ್ರಹ್ಮ ಎಂದು ಕರೆಯುತ್ತಾರೆ .
ಮೂಲ :ಸಂಗ್ರಹ. .

Advertisements

2 thoughts on “ಅಧ್ಯಾತ್ಮ ಸೌರಭ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s