Uncategorized

ಕನ್ನಡ ಸುಭಾಷಿತಗಳು.

೧. ಗಿಡಗಳು ಒಣಗಿದರೂ ಹುಲ್ಲು ಸರ್ವದಾ ಹಸುರಾಗಿಯೇ
ಇರುತ್ತದೆ.
೨. ಸರ್ಪದ ಬಾಯಿಗೆ ಸಿಕ್ಕಿದರೂ ಸಮಾಜದ ಬಾಯಿಗೆ ಸಿಗಬೇಡ.
ಸರ್ಪ ಒಂದು ಬಾರಿ ಕಚ್ಚುತ್ತದೆ. ಸಮಾಜ ಪದೇ ಪದೇ ಕಚ್ಚುತ್ತದೆ.
೩. ಸ್ನೇಹ ಒಂದು ಕವನ. ಬಣ್ಣ ಬಣ್ಣದ ಭಾವನೆಗಳ ಮಿಲನ.
೪. ಆನೆಯನೇರಿದ ಮಾವಟಿಗ ಚಕ್ರೇಶ್ವರನಾಗ ಬಲ್ಲನೆ ?
೫. ಆಸನ ಬೇಕು; ಶಾಸನ ಬೇಡವೇ ?
೬. ಪ್ರತಿ ಮರಕ್ಕೂ ಆಳ ಭೂಮಿಗಿಳಿದ ಬೇರು.
೭. ತನ್ನ ಮನೆ ಕೊಳೆತು ನಾರುತ್ತಿದ್ದರೂ, ಜಗತ್ತಿಗೆ ಅತ್ತರು
ಸಿಂಪಡಿಸಲು ಹೊರಟಂತೆ.
೮. ಪ್ರಜಾ ಪ್ರಭುತ್ವದಲ್ಲಿ ಪ್ರಜೆಯೇ ರಾಜ. ಆದರೆ ಆ ರಾಜನೂ
ಒಬ್ಬ ಪ್ರಜೆ. ಎಲ್ಲರಿಗೂ ಸಮಾನ ಸಜೆ.
೯. ಲೋಕದಲ್ಲಿದ್ದಾಗ ಎಳ ನೀರು; ಲೋಕ ಬಿಟ್ಟಾಗ ಎಳ್ಳು-ನೀರು.
೧೦. ಜನತೆ ಏಕೆ ಒಂಟಿತನ ಅನುಭವಿಸುತ್ತಾರೆಂದರೆ, ಅವರು ಸೇತುವೆಗಳನ್ನು
ಕಟ್ಟುವ ಬದಲು ಗೋಡೆಗಳನ್ನು ಕಟ್ಟುತ್ತಿದ್ದಾರೆ.
೧೧. ಜನರು ತೋರಿಕೆಯ ಪ್ರೀತಿ ತೋರಿದರೆ, ದೇವರು ಹೃದ್ಗತ ಪ್ರೀತಿಯನ್ನೇ
ತೋರುತ್ತಾನೆ.
೧೨.ಭೂತ ಕಾಲದ ಬಂಧಿಯಾಗಬೇಡ;ಭವಿಷ್ಯದ ಶಿಲ್ಪಿಯಾಗು.
೧೩. Award ವಿಮರ್ಶಕರು ಕೊಡುತ್ತಾರೆ. Reward ಜನ ಕೊಡುತ್ತಾರೆ.
೧೪. ಮಾತಿನ ಮೌಲ್ಯ ಹೆಚ್ಚಬೇಕಾದರೆ ಅದು ಮನಸ್ಸಿಗೆ ಹಿತವಾಗಿರಬೇಕು.
ಮಾತು ದ್ವೇಷಕ್ಕೆ ಹೇತುವಾಗಬಾರದು. ಸ್ನೇಹಕ್ಕೆ ಸೇತುವಾಗಬೇಕು.
೧೫. ಮನುಷ್ಯ ತನ್ನ ಒಳ್ಳೆಯತನದಿಂದ ದೊಡ್ಡವನಾಗುತ್ತಾನೆ ಹೊರತು
ಹುಟ್ಟಿನಿಂದಲ್ಲ.
೧೬.. ಹಂಚಿಕೊಂಡು ಉಂಡರೆ, ಹೊಂದಿಕೊಂಡು ಬಾಳಿದರೆ ಜೀವನ
ಹೊನ್ನಿನ ದಿಬ್ಬ.
೧೭. ಸತ್ತೆನೆಂದೆನಬೇಡ , ಸೋತೆನೆಂದೆನ ಬೇಡ ,
ಬತ್ತಿತೆನ್ನೊಳು ಸತ್ತ್ವದೂಟೆ ಯೆನಬೇಡ. —D.V.G.
೧೮. ಸಜ್ಜನರಿಗೆ, ಶಿವಭಕ್ತರಿಗೆ ಬರುವ ಆಪತ್ತು ಮತ್ತು ದುರ್ಜನರಿಗೆ
ಬರುವ ಸಂಪತ್ತು ಜಾಸ್ತಿ ದಿನ ಉಳಿಯಲಾರದು.
೧೯. ರಕ್ತಪಾತ ನಿಲ್ಲಲಿ;ರಕ್ತದಾನಿಗಳ ಸಂಖ್ಯೆ ಹೆಚ್ಚಲಿ.
೨೦. ನಾವು ಗೆದ್ದಾಗ ಚಪ್ಪಾಳೆತಟ್ಟುವ ಕೈಗಳಿಗಿಂತ, ಸೋತು ಕುಸಿದಾಗ,
ಹಿಡಿದೆತ್ತಿ ಸಂತೈಸುವ ಕೈಗಳನ್ನು ಎಂದಿಗೂ ಮರೆಯ ಬಾರದು.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s