Uncategorized

ಶ್ರೀ ಕೃಷ್ಣ.

krishna

ಶ್ರೀ ಕೃಷ್ಣನ ಜೀವನವೇ ವರ್ಣಮಯವಾಗಿದ್ದು ಆತನನ್ನು ಚಿತ್ರಿಸುವುದು
ಕಷ್ಟದ ಕೆಲಸ. ಶ್ರೀ ಕೃಷ್ಣ ನಮಗೆ ರಾಜಕಾರಣಿಯಾಗಿ,ವೇಣುನಾದ ಪ್ರಿಯನಾಗಿ
ಬಾಲಕನಾಗಿ, ಹದಿನಾರು ಸಾವಿರ ಸ್ತ್ರೀಯರಿಗೆ ಪತಿಯಾಗಿ ಕಾಣಿಸುತ್ತಾನೆ.
ಕೃಷ್ಣ ಎಂದರೆ ಕಪ್ಪು ಎಂದು ಹೇಳುತ್ತಾರೆ. ಆತ ನೀಲ ಮೇಘ ಶ್ಯಾಮ.
ಶ್ರೀ ಕೃಷ್ಣ ಎಲ್ಲರನ್ನೂ ಆಕರ್ಷಿಸುತ್ತಾನೆ. ಅದಕ್ಕೆ ಆತನಿಗೆ ಅನ್ವರ್ಥವಾಗಿ
ಕೃಷ್ಣ ಎಂಬ ಹೆಸರು ಬಂದಿದೆ.
ಶ್ರೀ ಕೃಷ್ಣನ ಸಮಗ್ರ ಬದುಕು ಮನಮೋಹಕ ವಿಸ್ಮಯಗಳ ನೆಲೆ.
ತುಂಟ ಬಾಲಕನಾಗಿ, ಪ್ರೇಮಮಯಿಯಾಗಿ, ಉದ್ಧಾರಕನಾಗಿ, ರಾಜಕೀಯ
ಮುತ್ಸುದ್ಧಿಯಾಗಿ, ಚಾಣಾಕ್ಷ ಸೂತ್ರಧಾರನಾಗಿ,ಗೀತಾಚಾರ್ಯನಾಗಿ,
ವಿರಾಟ್ ಪುರುಷನಾಗಿ ಕೊನೆಗೊಮ್ಮೆ ಯೋಗೀಶ್ವರನಾಗಿ ಭಾರತೀಯರ
ಆರಾಧ್ಯನೆನಿಸಿದ ಶ್ರೀ ಕೃಷ್ಣನ ನಾಡು ಉಡುಪಿ.
ಆಚಾರ್ಯ ಮಧ್ವರು ರುಕ್ಮಿಣೀ ಕರಾರ್ಚಿತ ಶ್ರೀ ಕೃಷ್ಣನ ಪ್ರತಿಷ್ಠೆ
ಮಾಡಿ,ಅಷ್ಟ ಯತಿ ಗಳನ್ನು ಶಿಷ್ಯರಾಗಿ ಸ್ವೀಕರಿಸಿ, ಸರದಿಯಲ್ಲಿ ಶ್ರೀ ಕೃಷ್ಣ
ಪೂಜೆಗೆ ನಿಯೋಜಿಸಿದರು. ಈ ಅವಧಿಯನ್ನು ೨ ವರ್ಷಕ್ಕೆ ವಿಸ್ತರಿಸಿದ
ಶ್ರೀ ವಾದಿರಾಜರು ಪರ್ಯಾಯ ಪೂಜಾ ಹಸ್ತಾ೦ತರ ಪರ್ವಕ್ಕೆ ವೈಭವದ
ವಿಸ್ತೃತ ರೂಪ ನೀಡಿದರು. ಪರ್ಯಾಯ ವಿಧಿ -ವಿಧಾನಕ್ಕೆ ಸಾಂಸ್ಕೃತಿಕ
ಸ್ಪರ್ಶ ನೀಡಿ ಸಮಷ್ಟಿಯ ಸಹಭಾಗಿತ್ವದ ಅವಕಾಶ ನೀಡಿದರು. ಕ್ರಮೇಣ
ಪರ್ಯಾಯ ನಾಡಹಬ್ಬವಾಯಿತು.
ಪದಗಳಲ್ಲಿ ನಾನು ಏಕಾಕ್ಷರವಾದ ಪ್ರಣವ (=ಓಂ ) ಎಂದು
ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ (ವಿಭೂತಿ ಯೋಗ :೨೫)ಹೇಳಿದ್ದಾನೆ.
ಶ್ರೀಕೃಷ್ಣ ಸ್ಮರಣೆ —
”ಚಂದನ ಚರ್ಚಿತ (ಲೇಪಿತ )ನೀಲ ಕಲೇವರ (ತನು )
ಪೀತ ವಸನ ವನಮಾಲೀ ಕೇಲಿ ಚಲನ್ಮಣಿ ಕುಂಡಲ ಮಂಡಿತ
ಗಂಡ(ಗಲ್ಲ ) ಯುಗಸ್ಮಿತ ಶಾಲೀ’
”ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ಕೇಳನೋ ಹರಿ ತಾಳನೋ ”
ಮೂಲ : ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s