Uncategorized

ಶ್ರೀ ಕೃಷ್ಣ.

Capture

ಸಿಂಹ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣೀ
ನಕ್ಷತ್ರದ ಯೋಗ ಇರುವಾಗ, ರಾತ್ರಿ ಚಂದ್ರೋದಯದ ಶುಭ
ಸಂದರ್ಭದಲ್ಲಿ ಶ್ರೀ ಕೃಷ್ಣಾ ದೇವರು ಅವತರಿಸಿದ್ದಾರೆ.
”ಕೃಷ್ಣಮ್ ವಂದೇ ಜಗದ್ಗುರುo ” ಎಂಬ ವಾಕ್ಯದಂತೆ, ಶ್ರೀ ಕೃಷ್ಣ
ಪರಮಾತ್ಮನು ಜಗದೊಡೆಯ ಮಾತ್ರವಲ್ಲದೆ ಜಗದ್ಗುರುವೂ ಹೌದು.
ಅಂದರೆ ನಮ್ಮೆಲ್ಲರ ರಕ್ಷಣೆ ಮಾಡುವುದರ ಜೊತೆಗೆ ಸನ್ಮಾರ್ಗವನ್ನು
ಭಗವದ್ಗೀತೆಯ ಉಪದೇಶದ ಮೂಲಕ ತೋರಿಸಿದ್ದಾನೆ.
”ಕರ್ಷತಿ ಇತಿ ಕೃಷ್ಣ ” ಅಂದರೆ ಆಕರ್ಷಣೆ ಮಾಡುತ್ತಾನೆ. ಆದ್ದರಿಂದ
ಅವನು ಕೃಷ್ಣ.
ಕಲಿಯುಗ ಆರಂಭಕ್ಕಿಂತ ೭೦ ವರ್ಷಗಳ ಪೂರ್ವದಲ್ಲಿ ಶ್ರೀ ಕೃಷ್ಣ
ಅವತರಿಸಿದ . ಶ್ರೀ ಕೃಷ್ಣನು ಚ್ಯುತಿ ಇಲ್ಲದವನು. ಆದುದರಿಂದ ಆತ ಅಚ್ಯುತ.
ಮತ್ಸ್ಯನಾಗಿ ವೇದಗಳನ್ನು,ಕೂರ್ಮನಾಗಿ ಪರ್ವತವನ್ನು,ವರಾಹನಾಗಿ
ಭೂಮಿಯನ್ನು,ನರಸಿಂಹನಾಗಿ ಬಾಲಕ ಪ್ರಹ್ಲಾದನನ್ನು, ವಾಮನನಾಗಿ
ಮೂರು ಲೋಕವನ್ನು, ಪರಶುರಾಮನಾಗಿ ಎಲ್ಲ ಬ್ರಾಹ್ಮಣರನ್ನು,
ರಾಮನಾಗಿ ಅಹಲ್ಯೆ, ವಿಶ್ವಾಮಿತ್ರರೇ ಮೊದಲಾದ ಭಕ್ತರನ್ನು, ಕೃಷ್ಣನಾಗಿ
ಗೋಪಾಲಕರು, ಗೋಪಿಕೆಯರು , ಪಾಂಡವರನ್ನು,ಬುಧ್ಧನಾಗಿ ತ್ರಿಪುರನ
ಪತ್ನಿಯರನ್ನು, ಕಲ್ಕಿಯಾಗಿ ಕಾಳಿ, ಕಲ್ಮಶವನ್ನು ಉದ್ಧರಿಸುತ್ತಾನೆ.
ನಮ್ಮ ಹೃದಯದಲ್ಲಿ ನಾವು ಕಡೆದು ಎತ್ತುವ ಸದ್ಭಾವನೆಗಳೇ
ನವನೀತ. ಅದನ್ನು ಚುರಾಯಿಸುವ ಇವನೇ ನವನೀತ ಚೋರ.
ಗೋವುಗಳಿಗೆ ಮೇವು, ನೀರು,ನೆರಳು ಎಲ್ಲಿ ಸಮೃದ್ಧಿಯಾಗಿದೆ, ಅವುಗಳನ್ನು
ಸಂತೋಷ ಪಡಿಸುವ ಸಾಧನ ಯಾವುದು ಇದನ್ನೆಲ್ಲಾ ತಿಳಿದವನು (ವಿಂದತಿ )
–ಗೋವಿಂದ. ”ಗೋ ” ಎಂಬ ಶಬ್ದಕ್ಕೆ ೧೮ ಅರ್ಥಗಳುoಟು. ಅವುಗಳಲ್ಲಿ
ಇಂದ್ರಿಯ ಎಂಬುದೂ ಒಂದು. ನಮ್ಮ ಇಂದ್ರಿಯಗಳು ಮೇಯಲು ಹೊರಟಾಗ
ಅದನ್ನು ತಿಳಿದು, ಅವುಗಳನ್ನು ತಡೆದು, ಅವುಗಳನ್ನು ಕಾಪಾಡುತ್ತಾನೆ ಗೋವಿಂದ .
ಗೋವಿಂದ, ಗೋಪಾಲ, ಪ್ರಭು ಗಿರಿಧಾರಿ।
ನಂದಕಿಶೋರ। ನವನೀತ ಚೋರ ।
ಹೃದಯ ವಿಹಾರ।ಬಡಾ ಚಿತ್ತ ಚೋರ।
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s