Uncategorized

ಹಿಂದೀ ಭಾಷೆ .

ಹಿಂದೀ ಭಾಷೆಯು ಪ್ರಾಕೃತದ ಅಪಭ್ರಂಶಗಳಿಂದ ಹುಟ್ಟಿತೆಂದು
ಭಾಷಾ ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಈ ಭಾಷೆಯು
ಹುಟ್ಟಿದಾಗ (ಅಂದರೆ ಸುಮಾರು ಕ್ರಿ. ಶ. ೧೨ನೇ ಶತಮಾನದಲ್ಲಿ )
ಇದನ್ನು ಬರಿಯ ”ಭಾಷೆ ” ಎಂಬುದಾಗಿಯೇ ಕರೆಯುತ್ತಿದ್ದರು.
ಮುಸಲ್ಮಾನರು ಇಂಡಿಯಾ ದೇಶಕ್ಕೆ ಬಂದ ಮೇಲೆ ಈ ಭಾಷೆಗೆ
”ಹಿಂದವಿ ”(ಅಂದರೆ ಹಿಂದೂಗಳ ಭಾಷೆ ) ಎಂಬ ಹೆಸರನ್ನು ಕೊಟ್ಟರು.
ಹಿಂದಿಯ ಪ್ರಾಚೀನ ಕವಿಯಾದ ಅಮಿರ್ ಖುಸ್ರೋ ಎಂಬಾತನೂ
ತರುವಾಯ ಉದಯಿಸಿದ ಮಲಿಕ್ ಮಹಮ್ಮದ್ ಜಾಯಿಸಿ ಎಂಬ
ಮುಸಲ್ಮಾನ ಕವಿಯೂ ಇದನ್ನು ”ಹಿಂದವೀ” ಎಂತಲೇ ಕರೆಯು
ತ್ತಿದ್ದರೆಂಬುದಕ್ಕೆ ಪ್ರಮಾಣಗಳು ಸಾಕಷ್ಟಿವೆ.
ವಿದೇಶದಿಂದ ಬಂದ ಮಹಮ್ಮದೀಯರು ತಮ್ಮ ನಿತ್ಯದ ವ್ಯವಹಾರ
ಗಳಲ್ಲಿ ಈ ಹಿಂದೀ ಭಾಷೆ ಯನ್ನು ಬಳಸುತ್ತಿದ್ದರು. ಆ ಕಾಲದಲ್ಲಿ
ಫಾರಸಿ ಭಾಷೆಯು ರಾಜ ಭಾಷೆ ಯಾಗಿದ್ದುದರಿಂದ ಹಲವಾರು
ಫಾರಸಿ ಶಬ್ದಗಳು , ಅವುಗಳ ಜೊತೆಯಲ್ಲಿ ಕೆಲವು ಅರಬ್ಬೀ ಮಾತುಗಳೂ
ಅವರು ಆಡುತ್ತಿದ್ದ ಹಿಂದಿ ಭಾಷೆ ಯಲ್ಲಿ ಬೆರೆತು ಹೋಗಿದ್ದುವು.
ಹೀಗೆ ಫಾರಸಿ ಮತ್ತು ಅರಬ್ಬಿ ಮಾತುಗಳು ಬೆರೆತಿದ್ದ ಹಿಂದೀ
ಭಾಷೆಗೆ ”ಉರ್ದು”ಎಂಬ ಹೆಸರನ್ನು ಕೊಟ್ಟರು. ”ಉರ್ದು ”ಎಂಬ
ಶಬ್ದಕ್ಕೆ ದಂಡು ಅಥವಾ ಪಾಳೆಯ ಎಂದರ್ಥ. ದಂಡಿನವರು
ಆಡುತ್ತಿದ್ದ ಭಾಷೆಗೆ ”ಉರ್ದು” ಎಂಬ ಹೆಸರಾಯತು.
ಫಾರಸಿ ಲಿಪಿಯು ಆಗ ಹೆಚ್ಚು ಪ್ರಚಾರದಲ್ಲಿದ್ದ ಕಾರಣ ಈ ಉರ್ದು
ಭಾಷೆ ಯನ್ನು ಫಾರಸಿ ಲಿಪಿಯಲ್ಲಿಯೇ ಬರೆಯ ತೊಡಗಿದರು.
ಬರವಣಿಗೆಯ ವ್ಯತ್ಯಾಸದಿಂದ ಹಿಂದೀ ಮತ್ತು ಉರ್ದು ಎಂಬ ಎರಡು
ಪ್ರಭೇದಗಳಾದುವು. ಲಿಪಿ ಭೇದವನ್ನು ಬಿಟ್ಟರೆ ಹಿಂದೀ, ಉರ್ದು ಗಳಲ್ಲಿ
ಮತ್ತಾವ ಬಗೆಯ ವ್ಯತ್ಯಾಸವೂ ಇಲ್ಲವೆನ್ನ ಬಹುದು. ಎರಡಕ್ಕೂ
ವ್ಯಾಕರಣವೊಂದೇ , ಭಾಷಾ ಸಂಪ್ರದಾಯವೂ ಒಂದೇ , ಗಾದೆ
ಮೊದಲಾದುವುಗಳೂ ಒಂದೇ . ಈ ಕಾರಣಗಳಿಂದ ಇವೆರಡೂ
ಒಂದೇ ಭಾಷೆಯ ಎರಡು ರೂಪಗಳೆಂದು ಹೇಳಿದರೆ ತಪ್ಪಾಗಲಾರದು.
ಫಾರಸಿ ಮತ್ತು ಅರಬ್ಬೀ ಶಬ್ದಗಳಾಗಲೀ, ಸಂಸ್ಕೃತ ಶಬ್ದಗಳಾಗಲೀ
ಹೆಚ್ಚಾಗಿ ಇಲ್ಲದಿರುವ ಹಿಂದೀ ಅಥವಾ ಉರ್ದುವನ್ನು ಇತ್ತೀಚೆಗೆ
”ಹಿಂದುಸ್ತಾನಿ” ಎಂಬ ಹೆಸರಿನಿಂದ ಕರೆಯುವ ಪದ್ಧತಿಯಾಗಿದೆ.
ಮೂಲ :ಹಿಂದೀ ಕನ್ನಡ ನಿಘಂಟು -ಲೇಖಕರು -ಎಂವಿ.ಜಂಬುನಾಥನ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s