Uncategorized

ಕನ್ನಡ ಸುಭಾಷಿತಗಳು.

೧. ನಿಷ್ಕ್ರಿಯ ಮನಸ್ಸು ದೆವ್ವಗಳ ಕಾರ್ಯಾಗಾರ. ಕ್ರಿಯಾಶೀಲ
ಮನಸ್ಸು ದೇವತೆಗಳ ಕಾರ್ಯಾಗಾರ.
೨. ದೇವರ ಎದುರು ತಲೆ ಬಾಗುವವರು ಯಾರ ಮುಂದೆ ಬೇಕಾದರೂ
ತಲೆಯೆತ್ತಿ ನಿಲ್ಲ ಬಲ್ಲರು.
೩. ಜೀವನವನ್ನು ಕೆಲವರು ಜೀವಿಸುತ್ತಾರೆ;ಇನ್ನು ಕೆಲವರು ಸಂಭ್ರಮಿಸುತ್ತಾರೆ.
೪. ಹಿತ್ತಳೆಯಂಥ ಮನುಷ್ಯನನ್ನು ಬಂಗಾರವನ್ನಾಗಿಸುವುದು ಸನ್ನಡತೆ.
೫. ಹೆಣ್ಣು, ಹೊನ್ನು,ಮಣ್ಣು ಮಾಯೆಯಲ್ಲ ;ಮನದ ಆಸೆ, ದುರಾಸೆಗಳೇ ಮಾಯೆ.
೬. ದೃಷ್ಟಿ ಚೆನ್ನಾಗಿದ್ದರೆ ಸೃಷ್ಟಿ ಚೆನ್ನಾಗಿರುತ್ತದೆ. ದೃಷ್ಟಿಯಂತೆ ಸೃಷ್ಟಿ.
೭. ನಡೆಯುವುದು ಸಹಜವಾದರೆ, ನಲಿಯುವುದು ಸಂಸ್ಕೃತಿ. -ದ. ರಾ. ಬೇಂದ್ರೆ.
೮. ದುರ್ಗತಿ ದೂರ ಮಾಡುವವಳೇ ದುರ್ಗೆ.
೯. ಕೆಟ್ಟ ಸತ್ಯಕ್ಕಿಂತ ಒಳ್ಳೆಯ ಸುಳ್ಳೇ ಶ್ರೇಷ್ಠ.
೧೦. ಕುರುಡರ ರಾಜ್ಯದಲ್ಲಿ ಕಣ್ಣಿದ್ದವನೇ ಅಪರಾಧಿ.
೧೧.ಅರಿತು ನಡೆದರೆ ಬಾಳೆಲ್ಲ ಉತ್ಕರ್ಷ ;ಮರೆತು ಮಲಗಿದರೆ ಬಾಳೆಲ್ಲ ವ್ಯರ್ಥ.
೧೨. ಕಬ್ಬಿಣದ ನಾಶಕ್ಕೆ ಅದಕ್ಕೆ ಹಿಡಿವ ತುಕ್ಕೇ ಕಾರಣ ಹೊರತು ಬೇರೆ ಏನಲ್ಲ;
ಮನುಷ್ಯನ ನಾಶಕ್ಕೆ ಅವನ ಮನಸ್ಸೇ ಕಾರಣ ಹೊರತು ಬೇರೇನಲ್ಲ.
೧೩. ಹೊತ್ತು -ಕಳೆಯುವುದಷ್ಟೇ ಗೊತ್ತು;ಕೂಡಿಸಲಾಗದು.
೧೪. ಛಾವಣಿಗೂ ಮೊದಲು ಅಡಿಪಾಯ ಗಟ್ಟಿಯಾಗಿರಲಿ.
೧೫. ಕನಸು ಕಾಣ ಬೇಕು; ಆದರೆ ಕನಸೇ ಜೀವನವಾಗಬಾರದು.
ಮೂಲ:ಸಂಗ್ರಹ .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s