Uncategorized

ಭರತ ಎಂದರೆ ಯಾರು ?

ರಾಮಾಯಣದಲ್ಲಿ ಶ್ರೀ ರಾಮನ ತಮ್ಮ ಭರತ, ಕೈಕೇಯಿ-ದಶರಥರ ಪುತ್ರ.
ಇನ್ನೊಬ್ಬ ಭರತ ಶಕುಂತಲೆಯ ಮಗ. ಇವನ ತಂದೆ ದುಷ್ಯಂತ. ಈ ಭರತನಿಗೆ
ಸರ್ವದಮನ ಎಂಬ ಇನ್ನೊಂದು ಹೆಸರೂ ಇತ್ತು. ಇವನೇ ಕೌರವರು ಮತ್ತು
ಪಾಂಡವರ ಮೂಲಪುರುಷ.
ಮತ್ತೊಬ್ಬ ಭರತ ನಾಟ್ಯ ಶಾಸ್ತ್ರದ ಕರ್ತೃ.
ಸಂಸ್ಕೃತದಲ್ಲಿ ಭರತ ಶಬ್ದಕ್ಕೆ ನಟ ಎಂಬ ಅರ್ಥವೂ ಉಂಟು.
ಒಂದು ಪಾತ್ರದ ಸಮಸ್ತ ಭಾರವನ್ನೂ ಹೊರುವುದರಿಂದ ಅವನು ಭರತ.
ಇನ್ನೊಬ್ಬ ಮಹಾಪುರುಷನಾದ ಭರತ ಋಷಭದೇವನ ಮಗ. ಇವನು
ಬಾಹುಬಲಿಯ ಎಂದರೆ ಗೊಮ್ಮಟೇಶ್ವರನ ಅಣ್ಣ. ರತ್ನಾಕರ ವರ್ಣಿ ಎಂಬ
ಕವಿಯು ”ಭರತೇಶ ವೈಭವ’ ಎಂಬ ಕಾವ್ಯದಲ್ಲಿ ಇವನ ಗುಣಗಳನ್ನೂ,
ಐಶ್ವರ್ಯ,ಭೋಗ ಗಳನ್ನೂ ಬಣ್ಣಿಸಿದ್ದಾನೆ. ಈ ಭರತ ಚಕ್ರವರ್ತಿಯಿಂದಲೇ
ನಮ್ಮ ದೇಶಕ್ಕೆ ”ಭಾರತ” ಎಂಬ ಹೆಸರು ಬಂದಿತೆಂದು ಹೇಳಲಾಗಿದೆ.
ಇನ್ನೊಂದು ಮೂಲದ ಪ್ರಕಾರ ಭರತ (ದುಷ್ಯಂತನ ಮಗ)ನ ವಂಶದಲ್ಲಿ
ಹುಟ್ಟಿದವರು ಭಾರತರು (ಕೌರವ, ಪಾಂಡವರು).ಅವರು ಮಾಡಿದ
ಯುದ್ಧವನ್ನು ವರ್ಣಿಸುವ ಗ್ರಂಥವೇ ಮಹಾಭಾರತ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s