೧. ಕನಸಿನಲ್ಲಿ ತಾಳಿ ಕಟ್ಟಿ ಬೆಳಿಗ್ಗೆ ಹೆಂಡ್ತೀನ ಹುಡುಕಿದ್ನಂತೆ.
೨, ಪಿಂಗಾಣಿ ಅಂಗಡಿಗೆ ಗೂಳಿ ನುಗ್ಗಿದ ಹಾಗೆ.
೩. ನಾನೂ ರಾಣಿ, ನೀನೂ ರಾಣಿ ಬೆರಣಿ ಎತ್ತೋರು ಯಾರು?
೪. ಯಾವ ಕಾಲು ಮುರಿದರೂ ಸೊಂಟಕ್ಕೆ ಕಷ್ಟ.
೫. ಬಹುಕೋಪಿಗಳಿರುವಲ್ಲಿ ಅನುಭವ ಗೋಷ್ಠಿಯ ಮಾಡಬಾರದು.
೬. ಸಹನೆಗೂ ಮಿತಿಯಿದೆ. ಸಾಗರದೊಳಗೂ ಬಡಬಾನಲವಿದೆ.
೭. ಬಿಸಿಲುಗಾಲಕ್ಕೆ ಕಪ್ಪೆ ಬಂಡೆಯೇರಿ ಕೂತ ಹಾಗೆ.
೮. ಮಿಂಚು ಮೂಡಿಸುವ ಬೆಳಕು ಕ್ಷಣಿಕ.
೯. ಇಷ್ಟ ಬಂದಂತೆ ಮಾತಾಡುವವ ಇಷ್ಟವಿಲ್ಲದ್ದನ್ನು ಕೇಳಬೇಕಾಗುತ್ತದೆ.
೧೦. ಬಿದಿಗೆ ಚಂದ್ರಮ ಡೊಂಕು . ಆದರೆ ಬೆಳದಿಂಗಳು ಡೊಂಕೇ ?
೧೧. ಎಲ್ಲಾ ಹಾಡುವ ಬಾಯೇ ಆದರೆ ಚಪ್ಪಾಳೆಗೆ ಜನವೆಲ್ಲಿ ?
೧೨. ಮನುಷ್ಯರಿಗೆ ಗುರಿ ತೋರಿಸುವವರೇ ಗುರು.