Uncategorized

ಕಣ್ತೆರೆಸಿದ ಮಡದಿಯ ಪ್ರಶ್ನೆ !

ಇಂಗ್ಲೆಂಡಿನಲ್ಲಿ ೨೦ ವರ್ಷಗಳ ಕಾಲ ಜೀವನ ನಡೆಸಿದ
ವಿಶ್ವವಿದ್ಯಾಲಯದ ಪ್ರಾಧ್ಯಾಪಕ ದಂಪತಿಗಳ ಸಂಭಾಷಣೆ
ಹೀಗಿದೆ. ಒಂದು ದಿನ ಮಡದಿ ಥಟ್ಟನೇ ಕೇಳುತ್ತಾಳೆ -”ನಾನು
ಇಂದೇ ಸತ್ತರೆ ನನ್ನ ಅಂತ್ಯ ಕ್ರಿಯೆ ಹೇಗೆ ಮಾಡುವಿರಿ ?”
ಗಲಿಬಿಲಿಗೊಂಡ ಪತಿ ನಿಧಾನವಾಗಿ -” ತುಂಬಾ ಪುಷ್ಪ ಗುಚ್ಛ ಗಳು ,
ಅತ್ಯಮೂಲ್ಯ ಶವ ಪೆಟ್ಟಿಗೆ, ನಿನ್ನನ್ನು ಹೊಗಳುವ ಪ್ರಾರ್ಥನಾ ಸಭೆ..
ಅದಿರಲಿ, ಯಾಕೆ ಈ ಪ್ರಶ್ನೆ ?” ಸತಿ ಹೇಳಿದಳು :”ಛೇ, ಇದಕ್ಕೆಲ್ಲಾ
ಬಹಳ ಖರ್ಚಾಗೋಲ್ಲವೇ ?” ಪತಿ ಹೇಳಿದ :”ಹತ್ತಾರು ಸಾವಿರ
ಪೌಂಡ್ ಖರ್ಚಾದರೂ ನನ್ನ ನೆಚ್ಚಿನ ಮಡದಿ ನೀನಲ್ಲವೇ? ”
ತಕ್ಷಣ ಆಕೆ ಹೇಳುತ್ತಾಳೆ ” ನಾನು ಸತ್ತಮೇಲೆ ನೀವು ರಾಶಿ ಹಾಕುವ
ಪುಷ್ಪ ರಾಶಿಯನ್ನು ನಾನಂತೂ ನೋಡೋಲ್ಲ. ನನ್ನ ಬಗ್ಗೆ ಹೊಮ್ಮುವ
ಪ್ರಶಂಸೆಯನ್ನಂತೂ ಕೇಳಲಾಗೋಲ್ಲ. ಅಂತಿರುವಾಗ ನಾನು
ಬದುಕಿರುವಾಗ ಒಂದೇ ಒಂದು ಗುಲಾಬಿ ಹೂವನ್ನಾದರೂ
ಕೊಡಬಾರದೇ ?ಒಂದೇ ಒಂದು ಪ್ರೀತಿಯ ಮಾತನಾಡಿ ನಗ ಬಾರದೇ ?”
ಈ ಮುಗ್ಧ ಮಾತು ಗಂಡನ ಹೃದಯವನ್ನು ಕಲಕಿತು. ಅಂದಿನಿಂದ
ಅವರ ಜೀವನ ಶೈಲಿಯೇ ಬದಲಾಯಿತು.
ಕೇವಲ ಹಣ ಗಳಿಸುವ ಮಾನವ ಯಂತ್ರವಾಗಿರದೆ ಪ್ರೀತಿ -ಪ್ರೇಮದ
ನಲಿವಿನ ನೆಲೆಯಾಗಿಯೇ ಅವರು ಹಾಲು ಜೇನಿನ ಬಾಳ್ವೆಗೆ
ಮನ ಮಾಡಿ ಗೆದ್ದರು!
ಮೂಲ:”ಶಿಶು ಕಥಾಮೃತ. ”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s