Uncategorized

ಚಿಂತನ.

೧. ಬೃಹಸ್ಪತಿಯೇ ಮೊದಲಾದ ಶ್ರೇಷ್ಠ ಗ್ರಹಗಳಿದ್ದರೂ ಕೂಡ ರಾಹು ಅವರನ್ನೆಲ್ಲ ದ್ವೇಷಿಸದೆ ಪ್ರಕಾಶಮಾನರಾದ ಸೂರ್ಯ, ಚಂದ್ರರಿಬ್ಬರನ್ನೇ ಪರ್ವದಿನದಲ್ಲಿ ಬೆಂಬತ್ತಿ ಪೀಡಿಸುತ್ತಾನೆ. -ಭರ್ತೃಹರಿ. ೨.ನಮ್ಮ ಮನಸ್ಸು ಕನ್ನಡಿಯಂತೆ ಸ್ವಚ್ಛವಾಗಿದ್ದರೆ ಸಾಲದು. camera ದಂತೆ ಸ್ಥಿರ ಚಿತ್ರವನ್ನು ಮೂಡಿಸಿಕೊಳ್ಳಲು ಸಮರ್ಥ ವಾಗಬೇಕು. ೩. ಕಾವ್ಯ,ಶಾಸ್ತ್ರಗಳನ್ನೋದಿ ವಿನೋದಿಸುವುದರಿಂದ ಬುದ್ಧಿವಂತರ ಸಮಯ ಕಳೆಯುತ್ತದೆ. ಆದರೆ ಮೂರ್ಖರ ಸಮಯ ದುರಭ್ಯಾಸ,ನಿದ್ರೆ, ಅಥವಾ ಜಗಳದಿಂದ ಕಳೆಯುತ್ತದೆ. ೪. ಮೋಡಗಳು ತಾವು ಉಪ್ಪುನೀರನ್ನು ಕುಡಿದರೂ ಲೋಕಕ್ಕೆ ಸಿಹಿ ನೀರನ್ನೇ ನೀಡುತ್ತವೆ. ೫. ಶೀಲವಂತನ ಭಕ್ತಿ ಶಂಕೆಯಲ್ಲಿ ಹೋಯಿತ್ತು.… Continue reading ಚಿಂತನ.

Advertisements
Uncategorized

ಕನ್ನಡ ಸೌರಭ.

ಎನಿತು ಇನಿದು ಈ ಕನ್ನಡ ನುಡಿಯು ಮನವನು ತಣಿಸುವ ಮೋಹನ ಸುಧೆಯು . ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ನಮ್ಮೂರೇ ಚೆಂದ, ನಮ್ಮವರೇ ಅಂದ ಕನ್ನಡ ಭಾಷೆ ಕರ್ಣಾನಂದ. ನಮ್ಮ ಕನ್ನಡ ನಾಡಿಗೆ ದೇವರು ಸಹ್ಯಾದ್ರಿಯನ್ನು,ತುಂಗಾ, ಕಾವೇರಿಯನ್ನು, ಪಶ್ಚಿಮ ಸಮುದ್ರದ ಸಂಗ ಸಾನ್ನಿಧ್ಯಗಳನ್ನು ದಯಪಾಲಿಸಿದ್ದಾನೆ. ಜೊತೆಗೆ ಪಂಪ,ನಾರ್ಣಪ್ಪರಂಥ ವಿಶ್ವ ಕವಿಗಳನ್ನು ಅನುಗ್ರಹಿಸಿದ್ದಾನೆ. ಇಲ್ಲಿ ಅರಳದಿಹ ಹೂವುಗಳಿಲ್ಲ; ಹಾಡಲು ಬಾರದ ಹಕ್ಕಿಗಳಿಲ್ಲ. ''ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ- ಮೂಗಲ್ ಕನ್ನಡ… Continue reading ಕನ್ನಡ ಸೌರಭ.

Uncategorized

ಚಿಂತನ.

೧. ವಿಶಾಲವಾದ ಆಕಾಶವನ್ನು ಚಿಕ್ಕ ಕಣ್ಣಿನಲ್ಲೇ ನೋಡಬಹುದು. ಆದರೆ ಒಂದು ಒಳ್ಳೆಯ ಹೃದಯವನ್ನು ನೋಡಬೇಕಾದರೆ ನಮ್ಮ ಮನಸ್ಸು ವಿಶಾಲವಾಗಿರಬೇಕು. ೨. ಪರಮ ಎಂದರೆ ಆತನಿಗೆ ಹೋಲಿಸಲು ಬೇರೆ ಯಾವುದೂ ಇಲ್ಲವೆಂದರ್ಥ. ಆ ಪರಮಾತ್ಮನು ಅದ್ವಯನು (ಎರಡು ಇಲ್ಲದ್ದು ) ಹಾಗೂ ಅನಂತನು ಎಂದು ವೇದಾಂತವು ಹೇಳಿದೆ. ೩. ಪೃಕೃತಿ ವಿಕೃತಿ ಗೊಂಡಾಗ ಜೀವನ ಸಂಸ್ಕೃತಿ ನಾಶವಾಗುತ್ತ ಹೋಗುತ್ತದೆ. ೪.ಶರೀರದ ಆರೋಗ್ಯ ಕಾಪಾಡಲು ವೈದ್ಯರು ಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡಲು ಆರಕ್ಷಕರು ಬೇಕು. ಆದರೆ ಇದು ಅವರಿಂದಲೇ ಸಾಧ್ಯವೇ?… Continue reading ಚಿಂತನ.

Uncategorized

ಕನ್ನಡ ಗಾದೆ ಮತ್ತು ನುಡಿಗಟ್ಟುಗಳು.

೧. ಕನಸಿನಲ್ಲಿ ತಾಳಿ ಕಟ್ಟಿ ಬೆಳಿಗ್ಗೆ ಹೆಂಡ್ತೀನ ಹುಡುಕಿದ್ನಂತೆ. ೨, ಪಿಂಗಾಣಿ ಅಂಗಡಿಗೆ ಗೂಳಿ ನುಗ್ಗಿದ ಹಾಗೆ. ೩. ನಾನೂ ರಾಣಿ, ನೀನೂ ರಾಣಿ ಬೆರಣಿ ಎತ್ತೋರು ಯಾರು? ೪. ಯಾವ ಕಾಲು ಮುರಿದರೂ ಸೊಂಟಕ್ಕೆ ಕಷ್ಟ. ೫. ಬಹುಕೋಪಿಗಳಿರುವಲ್ಲಿ ಅನುಭವ ಗೋಷ್ಠಿಯ ಮಾಡಬಾರದು. ೬. ಸಹನೆಗೂ ಮಿತಿಯಿದೆ. ಸಾಗರದೊಳಗೂ ಬಡಬಾನಲವಿದೆ. ೭. ಬಿಸಿಲುಗಾಲಕ್ಕೆ ಕಪ್ಪೆ ಬಂಡೆಯೇರಿ ಕೂತ ಹಾಗೆ. ೮. ಮಿಂಚು ಮೂಡಿಸುವ ಬೆಳಕು ಕ್ಷಣಿಕ. ೯. ಇಷ್ಟ ಬಂದಂತೆ ಮಾತಾಡುವವ ಇಷ್ಟವಿಲ್ಲದ್ದನ್ನು ಕೇಳಬೇಕಾಗುತ್ತದೆ. ೧೦.… Continue reading ಕನ್ನಡ ಗಾದೆ ಮತ್ತು ನುಡಿಗಟ್ಟುಗಳು.