Uncategorized

ನಗೆ ಹನಿ.

೧. ಮೇಷ್ಟ್ರು:ಜೀವನದಲ್ಲಿ ಕೆಲವರು ಮೇಲೇರದಿರಲು ಕಾರಣವೇನು?
ಮಂಕ :ಗುರುತ್ವಾಕರ್ಷಣ ಶಕ್ತಿ ಸಾರ್ !
೨. ಮೇಷ್ಟ್ರು :ಬಸ್ ಸ್ಟ್ಯಾಂಡ್ ಗೂ ಸೈಕಲ್ ಸ್ಟ್ಯಾಂಡ್ ಗೂ ಏನು ವ್ಯತ್ಯಾಸ?
ಮಂಕ :ನಾವು ಬಸ್ ಹತ್ತಿ ಹೋದರೂ ಬಸ್ ಸ್ಟ್ಯಾಂಡ್ ಅಲ್ಲೇ ಇರುತ್ತೆ.
ಆದರೆ ಸೈಕಲ್ ಹತ್ತಿ ಹೋದರೆ ಸೈಕಲ್ ಸ್ಟ್ಯಾಂಡ್ ಕೂಡ ನಮ್ಮ
ಜೊತೆಗೆ ಬರುತ್ತೆ.
೩. ಗೆಳೆಯ :ತಂದೆಯು ಮನೆಯ ತಲೆ. ಹಾಗಾದರೆ ತಾಯಿ ಯಾರು?
ಮಂಕ :ಕುತ್ತಿಗೆ.
ಗೆಳೆಯ:ಅದು ಹೇಗೆ ?
ಮಂಕ:ತಲೆಯನ್ನು ಬೇಕಾದ ಕಡೆಗೆ ತಿರುಗಿಸುವುದು ಕುತ್ತಿಗೆಯೇ ತಾನೇ ?
೪. ಮೇಷ್ಟ್ರು:ಗಾಳಿಪಟ ಎಷ್ಟೇ ದೂರ ಹೋದರೂ ದಾರ ನಮ್ಮ ಕೈ ಯಲ್ಲೇ
ಇರುತ್ತದೆ.
ಇಂಥದ್ದೇ ಒಂದು ಉದಾಹರಣೆ ಕೊಡಿ.
ಮಂಕ:Message ಎಷ್ಟೇ ದೂರ ಹೋದರೂ Mobile ನಮ್ಮ ಕೈಯಲ್ಲೇ
ಇರುತ್ತದೆ.
೫. ಮೇಷ್ಟ್ರು:ಮಾವು ಹೆಚ್ಚಾಗಿ ಎಲ್ಲಿ ಬೆಳೆಯುತ್ತದೆ?
ಮಂಕ :ಮರಗಳಲ್ಲಿ ಸಾರ್.
೬. ಮೇಷ್ಟ್ರು :ರಾಷ್ಟ್ರಕ್ಕಿಂತ ದೊಡ್ಡದು ಯಾವುದು ?
ಮಂಕ:ಮಹಾ ರಾಷ್ಟ್ರ ಸಾರ್.
೭. ಗೆಳೆಯ:ಮದುವೆ ಎಂದರೇನು?
ಮಂಕ:ಮ = ಮಡದಿ, ಮಕ್ಕಳು; ದು =ದುಡಿಮೆ/ದುಃಖ; ವೆ =ವೆಚ್ಚ.
ಗೆಳೆಯ:ಹೆಮ್ಮೆಗೂ ಗರ್ವಕ್ಕೂ ಏನು ವ್ಯತ್ಯಾಸ ?
ಮಂಕ :ನಮ್ಮಲ್ಲಿರುವ ಹೆಮ್ಮೆ ಬೇರೆಯವರಲ್ಲಿದ್ದರೆ ಅದು ಗರ್ವ.
ಗೆಳೆಯ:ಕಾಗೆ ಮನೆ ಮೇಲೆ ಕೂತು ಕೂಗಿದ್ರೆ ನೆಂಟರು
ಬರ್ತಾರಂತೆ . ಹೌದಾ ?
ಮಂಕ:ಮನೆಯಾಕೆ ಕೂಗಿದ್ರೆ ಬಂದ ನೆಂಟರು ಹೋಗ್ತಾರೆ ಅಂತ ಗೊತ್ತು.
ಮೂಲ:ಸಂಗ್ರಹ. .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s