Uncategorized

ಕನ್ನಡ ಸೌರಭ.

೧. ಸಂಪ್ರದಾಯಕ್ಕೂ ಬಂಡಾಯಕ್ಕೂ ವ್ಯತ್ಯಾಸ ಇಷ್ಟೇ ಕಣಯ್ಯಾ ,
ಪತಿಯೇ ದೇವರೆಂದು ಅಜ್ಜಿ ಹೇಳಿದ್ದು ಸಂಪ್ರದಾಯ.
ದೇವರೇ ಪತಿಯೆಂದು ಅಕ್ಕ ಹೇಳಿದ್ದು ಬಂಡಾಯ.
೨. ನದಿ ದಾಟಲು ತೆಪ್ಪ ಇರಬೇಕು.
ಸಂಸಾರ ಶರಧಿ ದಾಟಲು ತೆಪ್ಪಗಿರಬೇಕು.
೩. ಶನಿ ದೇವರಿಗೆ ಶಮೀ ಪತ್ರೆ; ವಿಷ್ಣುವಿಗೆ ತುಳಸೀ ಪತ್ರೆ ;
ಈಶ್ವರನಿಗೆ ಪ್ರಿಯವಂತೆ ಬಿಲ್ವ ಪತ್ರೆ.
ಯಮನಿಗೆ ಸರಕಾರೀ ಆಸ್ಪತ್ರೆ.
೩. ”ಒಂದು ಹುಲಿ, ಒಂದು ಇಲಿ
ಪಕ್ಕದ ಮನೆ ಫ್ಯಾಮಿಲಿ.”
೪. ಹೇಗಿದೆ ನೋಡಿ ಭಾರತೀಯರ ಸತ್ಯ ಪ್ರಿಯತೆ
ಕಳ್ಳ ನೋಟಿನಲ್ಲೂ ಅಚ್ಚಾಗಿರುತ್ತೆ ”ಸತ್ಯಮೇವ ಜಯತೇ. ”
೫. ಸಣ್ಣವನಿದ್ದಾಗ ಜೋಗುಳ, ಚೊಣ್ಣ ಉಡುವಾಗ ಬಯ್ಗುಳ.
೬.” ಸತ್ಯವಂತರಿಗಿದು ಕಾಲವಲ್ಲ ”ಗೊಣಗುತ್ತಾರೆ ಕೆಲವರು;
ಇವರಲ್ಲೇ ಮಿನುಗುತ್ತಾರೆ ”ಸುಳ್ಳುಗಾರರು” ಹಲವರು.
೭. ಜನರ ಸನ್ಮಾನ ಸರ್ಕಾರದ ಪ್ರಶಸ್ತಿಗಿಂತ ದೊಡ್ಡದು.
೮. ಮುತ್ತುಗಳು ಸಾವಿರ, ಸಾಗರದಲ್ಲಿ ;
ನಕ್ಷತ್ರಗಳು ಸಾವಿರ ಬಾನಿನಲ್ಲಿ.
೯. ಶಾಯರಿಯಂತೂ ಹೊರಬಿತ್ತು ಬಾಯಿಂದ ಎಲ್ಲ ತಡೆಗಳ ದಾಟಿ
ಕವಿ ಪುಂಗವರೆಲ್ಲಾ ನೆಗೆದು ಬಿದ್ದರು ಇಂಥಾ ಹುಚ್ಚರ ಕವಿತೆ ಕೇಳಿ .
೧೦. ನರಿ ಕಂಡರೆ ಒಳ್ಳೆಯ ಶಕುನ ಅಂತಾರೆ. ಬೆಕ್ಕನ್ನು ಕಂಡರೆ
ಕೆಟ್ಟ ಅಪಶಕುನ ಅಂತಾರೆ. ಆದರೆ ಯಾರೂ ಸಹ ಮನೆಯಲ್ಲಿ
ನರಿ ಸಾಕುವುದಿಲ್ಲ. ಬೆಕ್ಕನ್ನೇ ಸಾಕುತ್ತಾರೆ.
೧೧. ಜಾತ್ಯಾತೀತ ಎನ್ನುವುದು ಬರಿಯ ಹೆಗ್ಗಳಿಕೆ
ಇದರ ಹಿಂದಿರುವ ದೃಷ್ಟಿ ಮತಗಳಿಕೆ
ಎಲ್ಲ ಪಕ್ಷಗಳಲುಂಟು ಈ ವಿಧದ ಬೆಣ್ಣೆ
ಜಾತಿ -ಜಾತಿಯ ಮಧ್ಯೆ ಹಿಡಿಸುವರು ದೊಣ್ಣೆ.
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s