Uncategorized

ಮನೆ.

ಮನೆಯೆಂದರೆ ಅದರೊಳಗೆ ಇರುವವರ ಮನಸ್ಸಿನ ಕನ್ನಡಿ. ಮನೆಯ ವಿಳಾಸ ನಮ್ಮ ಇರುವಿಕೆಗೆ ಸಾಕ್ಷಿ ಒದಗಿಸುತ್ತದೆ. ಮನುಷ್ಯರಿಗೊಂದು ನೆಮ್ಮದಿಯ ನೆಲೆ ಒದಗಿಸ ಬಲ್ಲ ಪ್ರತಿಯೊಂದು ತಾಣವೂ ಮನೆಯೇ. ಕೂಡಿ ಬಾಳಲು ಸಂಕಲ್ಪಿಸಿಕೊಂಡ ಮನಸ್ಸುಗಳಿರುವ ಮನುಷ್ಯರಿದ್ದಾಗ ಮನೆಯಾಗುತ್ತದೆ. ಮನೆಯೆಂದ ಮೇಲೆ ಅಲ್ಲಿ ಅಲಂಕಾರಿಕ ವಸ್ತುಗಳ ಜೊತೆಗೆ ಸುಂದರವಾದ ಮನಸ್ಸುಗಳೂ ಇರಬೇಕು. ಏಕೆಂದರೆ ಮನೆಯ ಅಡಿಪಾಯ ಗಟ್ಟಿಯಾಗಿದ್ದು ಮನಸ್ಸುಗಳ ಅಡಿಪಾಯ ಅಲುಗಾಡುವಂತಿದ್ದರೆ ಆ ಮನೆ ಗಟ್ಟಿಯಾಗಿ ನೆಲೆಯೂರುವುದು ಕಷ್ಟವೇ ಸರಿ. ಮನೆ ಬದುಕಿನ ಒಂದು ಭಾಗ. ಅದರ ಸೆಳೆತದ ತೀವ್ರತೆ ಎಷ್ಟೆಂಬುದನ್ನು… Continue reading ಮನೆ.

Uncategorized

ಸುಭಾಷಿತ.

೧. ದುಃಖದಲ್ಲಿ ಎರಡು ರೀತಿ ಇರುತ್ತದೆ. ಒಂದು ನಷ್ಟವಾಗುವುದು. ಮತ್ತೊಂದು,ಬದುಕನ್ನು ಪುನರ್ ರೂಪಿಸುವುದು. ೨. ಮಾನವನ ವಿವೇಕಕ್ಕಿಂತ ವಿಧಿಯೇ ದೊಡ್ಡದು. ೩. ಜಾತಿ,ಧರ್ಮಗಳಿಗಿಂತ ಕಲೆಯ ಸಾಧನೆ ಮಿಗಿಲು. ೪. ಜೀವರಿಗೆ ಭಗವಂತ ಮುಂದೆ,ಅವನ ಬೆನ್ನಿಗೆ ಮಾಯೆ, ನಾವವಳ ಹಿಂದೆ ;ಭಗವಂತನ ಬೆನ್ನು ಸಹ ತೋರದಂತೆ ತಾನಡ್ದವಾಗಿಹಳು ಆ ಮಾಯೆ ಮಿಥ್ಯೆ ;ನಮ್ಮೊಳೇ ಆ ದೇವರಿರ್ದರೂ ಸಹಿತ, ಹುಡುಕಲಾರೆವು ನಾವು ಗೊಂದಲವ ಪಡುತ. ೫. ಅಕ್ಷರ ಜ್ಞಾನದ ಮೂಲಕ, ವಿಷಯವನ್ನು ಅರಿಯಲು ಮತ್ತು ಅರುಹಲು ಓದುವುದು ವಾಚನ. ಅಧ್ಯಯನಕ್ಕಾಗಿ… Continue reading ಸುಭಾಷಿತ.

Uncategorized

ಚಿಂತನ.

೧. ಭಗವಂತನಿಗೆ ನಮ್ಮೆಲ್ಲರ ಮೇಲೆ ಒಂದೇ ದೃಷ್ಟಿ. ಆದರೆ ಅವನನ್ನು ನೋಡುವ ನಮ್ಮ ದೃಷ್ಟಿ ಹಲವು. ಹಾಗಾಗಿಯೇ ನಮ್ಮ ಪರಿಸ್ಥಿತಿ ವಿಭಿನ್ನ. ೨. ಮನುಷ್ಯನೆಂದರೆ ಕಣ್ಣೀರು ಹಾಗೂ ಮುಗುಳ್ನಗುವಿನ ಮಧ್ಯೆ ತೂಗಾಡುವ ಲೋಲಕದಂಥವನು. ೩. ಸಹನೆ ಇದ್ದಾಗ ಮಾನವ. ಸಹನೆ ಕಳೆದು ಕೊಂಡರೆ ದಾನವ. ೪. ಅಲೆಗಳಿಂದ ಚಲ ವಿಚಲವೂ,ಕಲುಷಿತವೂ ಆದ ನೀರಿನಲ್ಲಿ ಸೂರ್ಯನ ಪ್ರತಿಬಿಂಬವನ್ನು ಕಾಣಲಾರೆವು. ಅದಕ್ಕೆ ನಿರ್ಮಲ ಸರೋವರವೇ ಬೇಕಾಗುವಂತೆ, ಭಗವಂತನನ್ನು ಕಾಣಲು ನಿರ್ಮಲ ಹೃದಯ ಬೇಕು. ೫. ದೇಹವೊಂದು ದೇವ ವೀಣೆ, ನರ… Continue reading ಚಿಂತನ.