Uncategorized

ಚಿಂತನ.

೧. ಜೀವನದಲ್ಲಿ ಅನುಭವಗಳು ಗುರುವಾಗುತ್ತವೆ. ಹಾಗೆಯೇ ಪ್ರಕೃತಿ
ಜೊತೆಗಿನ ಒಡನಾಟ, ಅದರಲ್ಲಿರುವ ಪ್ರತಿ ಕಣ,ಕಣವೂ ನಮಗೆ
ಗುರುವೇ ಆಗುತ್ತವೆ. ಜೀವನಕ್ಕೊಂದು ಅರ್ಥ ಕೊಡುತ್ತವೆ.
ಪರಿಸರದಿಂದ ಕಲಿಯಬೇಕಾದ ಪಾಠ–
ಹೂ ಗಳಿಂದ ನಿತ್ಯ ನಗುವುದನ್ನು,ಮರದ ಕೊಂಬೆಗಳಿಂದ ತಲೆ
ಬಾಗುವುದನ್ನು ಅಂದರೆ ವಿಧೇಯತೆಯನ್ನು,ನಾಯಿಯಿಂದ ನಿಯತ್ತನ್ನು,
ಕಾಗೆಗಳಿಂದ ಒಗ್ಗಟ್ಟನ್ನು,ಹಂಚಿ ತಿನ್ನುವುದನ್ನು,ಮರ-ಬಳ್ಳಿ ನೋಡಿ
ಒಬ್ಬರನ್ನೊಬ್ಬರು ಆಶ್ರಯಿಸುವುದನ್ನು, ದಿನ ಬೆಳಗಿಸುವ ಸೂರ್ಯನಿಂದ
ಆಲಸ್ಯವನ್ನು,ಅಜ್ಞಾನವೆಂಬ ಅಂಧಕಾರವನ್ನು ಓಡಿಸುವುದನ್ನು,
ಭುಮಿತಾಯಿಯಿಂದ ಕ್ಷಮೆ,ನಿಸ್ವಾರ್ಥತೆಯನ್ನು ಕಲಿಯ ಬಹುದು.
೨. ದೃಶ್ಯ ಮಾಧ್ಯಮಕ್ಕೆ ಜನರನ್ನು ನಂಬಿಸುವ ಅದ್ಭುತವಾದ ಶಕ್ತಿ
ಇದೆ. ದೃಶ್ಯ ಮಾಧ್ಯಮಕ್ಕೆ ಒಂದು ವೃತ್ತಿ ಧರ್ಮ ಇದೆ. ಅದು ಸಮಾಜದ
ಸ್ವಾಸ್ಥ್ಯ ಕೆಡಿಸಬಾರದು. ಕೇವಲ ಜನಾಕರ್ಷಣೆಯೊಂದನ್ನೇ ಗುರಿಯಾಗಿ
ಇಟ್ಟುಕೊಂಡರೆ ಅದರ ವಿಕಿರಣಗಳು ಸಮಾಜವನ್ನೇ ವೈಕಲ್ಯಗೊಳಿಸುತ್ತವೆ.
”ಮನುಷ್ಯನಿಗೆ ಹಾವು ಕಚ್ಚಿದರೆ ಅದು ಸುದ್ದಿಯಲ್ಲ. ಮನುಷ್ಯ ಹಾವಿಗೆ
ಕಚ್ಚಿದರೆ ಸುದ್ದಿ ” ಅಂದರೆ ಅಸ್ವಾಭಾವಿಕವಾದದ್ದು ಸುದ್ದಿ. ಅವಾಸ್ತವಿಕ
ಕಲ್ಪನೆಗಳನ್ನು ವೈಭವೀಕರಿಸುವ ದೃಶ್ಯ ಮಾಧ್ಯಮಗಳಿಂದ ಸಮಾಜದಲ್ಲಿ
ಅಸ್ವಾಭಾವಿಕ ಹಾಗೂ ವಿಕೃತ ಜೀವನ ಶೈಲಿ ಹುಟ್ಟಿಕೊಳ್ಳುತ್ತದೆ.
ಮೂಲ :ಸಂಗ್ರಹ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s